ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ › ವರ್ಗಗಳು

ಸಂಪದ

ಮುತ್ತಿನ-ಶೃಂಗಾರ

ಸಂಪದ - 'ಹೊಸ ಚಿಗುರು, ಹಳೆ ಬೇರು' - 5 hours 48 min ago

ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ನಾನಿರುವುದೆ ನಿಮಗಾಗಿ :REMIX

ಸಂಪದ - 'ಹೊಸ ಚಿಗುರು, ಹಳೆ ಬೇರು' - 6 hours 32 min ago

ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ

ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ನಿಮ್ಮೊಡನಿಂದು ನಾನು ಬಂದು
ನಿಮ್ಮೊಡನಿಂದು ನಾನು ಬಂದು  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಚಾ(ವ)ಡಿ ಪಟ್ಟಾಂಗ

ಸಂಪದ - 'ಹೊಸ ಚಿಗುರು, ಹಳೆ ಬೇರು' - 7 hours 15 min ago

ಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ!  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಒ೦ದು ನೆನಪು

ಸಂಪದ - 'ಹೊಸ ಚಿಗುರು, ಹಳೆ ಬೇರು' - 9 hours 18 min ago

ನೀರು ಬತ್ತಿದ ಮೇಲೆ ಬಾಯರಿದರೆನು.....

ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು....

ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ.........

ನಡೆವ ದಾರಿಯು ಕಾಣದಾಗಿದೆ.............

ನೋಟಕ್ಕೆ ಎಲ್ಲವು ಚ೦ದವಾಗಿದೆ.....

ಆದರೆ ಎಲ್ಲವು ನನ್ನದ್ದಲ್ಲವಲ್ಲ.............

ಬೇಕೆ೦ದಾಗ ಮಾತ್ರ ಅದು ನನ್ನದು....

ಬೇಡ ವಾದಾಗ ಅದು ಮತ್ಯಾರದ್ದೋ.......

ನೆನಪುಗಳು ಕಾಡುತಿವೆ ನನ್ನ.........  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಸಂಪದ - 'ಹೊಸ ಚಿಗುರು, ಹಳೆ ಬೇರು' - 10 hours 30 min ago

ನಮ್ಮ ಧಾರವಾಡ ಎರಡು ಸಂಗತಿಗಳಿಗಾಗಿ ತುಂಬ ಪ್ರಸಿದ್ಧ. ಒಂದು ಧಾರವಾಡದ ಲೈನ್ ಬಜಾರದ ಬಾಬುಸಿಂಗ ಠಾಕೂರ್ ಅವರ ಪೇಢ ರುಚಿಗಾಗಿ. ಮತ್ತೊಂದು ಬೆಳಗಾವಿ ರಸ್ತೆಯ..ಹುಚ್ಚರ ಆಸ್ಪತ್ರೆಗಾಗಿ!  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ninna manasina aytke....

ಸಂಪದ - 'ಹೊಸ ಚಿಗುರು, ಹಳೆ ಬೇರು' - 10 hours 51 min ago

Nanna manadali ninna maneya angaladi naniruve

ninna hridayadi nanna maneya vilhasa naanariye

avarivaru bandu ninna manadangaladi kulhithare

aaga.... 

ninna manasisna ayke enendu na ariye............

 

Bahala dinagala maathu ninna nodida dina

Nanna na marethu gaaliyali thelida aa kshana

Jothe nee baa endu kareda madhura ghalige

Aadarooo,

ninna manasisna ayke enendu na ariye.

 

Nannodane nee jagalavadi munisikonda aa kaala,

nanna jeevandi kaleda vanavasada kaapu dinaglu

ninna manasannu geddu santhoshada shikharadalliduvase

aadarooo

ninna manasisna ayke enendu na ariye  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಈ ಹಾಡನ್ನು ಹಾಡಿ, ಕೇಳಿಸಿರಿ ದಯವಟ್ಟು!

ಸಂಪದ - 'ಹೊಸ ಚಿಗುರು, ಹಳೆ ಬೇರು' - 11 hours 2 min ago

ನಾನು ಶಾಲೆಯಲ್ಲಿ ಕಲಿತ ಹಾಡಿದು...

ಇದನ್ನು ಹಾಡಿ( ಹಿನ್ನಲೆ ಇನಿ ಇದ್ದರೂ ಒಳ್ಳೇದು ) ಕೇಳಿಸಿರಿ...

ಇದನ್ನ ನಮ್ಮ ಕನ್ನಡತರಗತಿಯವರು ಅಗಸ್ಟ್ ೧೫ಕ್ಕೆ ಹಾಡ್ತಾರಂತೆ

ಹಾಡು:

ಇದು ನಮ್ಮ ದೇಶ, ನಮ್ಮ ನಾಡು, ಭಾರತ ನೆಲವು
ನಾವೆಲ್ಲ ಒಂದುಗೂಡಲದುವೆ ನಲ್ಮೆಗೆ ಗೆಲುವು

ಹಕ್ಕಬುಕ್ಕರಾಳಿದಂತ ವೀರ ನಾಡಿದು
ನಾಟ್ಯರಾಣಿ ಶಾಂತಲೆಯ ಕಲೆಯ ಬೀಡಿದು
||ಕನ್ನಡ ಕನ್ನಡ ಕನ್ನಡ||  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಮಿಂಚಿನ ಓಟ

ಸಂಪದ - 'ಹೊಸ ಚಿಗುರು, ಹಳೆ ಬೇರು' - 11 hours 27 min ago

ನೆನ್ನೆ ಮಿಂಚಿನ ಓಟ ಚಿತ್ರ ವಿಕ್ಷಿಸಲಾಯಿತು. ಮೊದಲರ್ಧ ಸ್ವಲ್ಪ ಅತಿಯೆನ್ನುವ ನಾಟಕೀಯತೆಯ ಸೀನುಗಳು ಉಪ್ಪಿದಾದಾ ಎಂಬಿಬಿಎಸ್ ಚಿತ್ರವನ್ನು ನೆನಪಿಸುತ್ತವೆ. ಸುಮಾರು ಮುಕ್ಕಾಲು ತಾಸಿನ ನಂತರವಷ್ಟೇ ಸಿನಿಮಾ ವೇಗ ಪಡೆಯುತ್ತದೆ. ನಿಮ್ಮಲ್ಲಿ ಮೊದಲ ಈ ೪೫ ನಿಮಿಷಗಳು ಕುಳಿತುಕೊಳ್ಳುವ ಸಹನೆಯಿದ್ದಲ್ಲಿ ಮುಂದೈತೆ ಊರ ಹಬ್ಬ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಯೋಗವಾಹಕ

ಸಂಪದ - 'ಹೊಸ ಚಿಗುರು, ಹಳೆ ಬೇರು' - 11 hours 30 min ago

ಮಂತ್ರವಾಗದೆ ಇರುವ ಅಕ್ಷರವಿಲ್ಲ.. ಅಂತ ಒಂದು ಸಂಸ್ಕೃತದ ಸುಭಾಷಿತ ದಲ್ಲಿ ಓದಿದ ನೆನಪು. ನನಗೆ ಗೊತ್ತಿರುವಂತೆ ಈ ಅಕ್ಷರಗಳಿಗೂ , ಮಂತ್ರ ಗಳಿಗೂ ಯೋಗಕ್ಕೂ ತುಂಬಾ ಹತ್ತಿರದ ನಂಟು.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಸಿಟಿಯ ಮೇಲಣ ಗುಳ್ಳೆ

ಸಂಪದ - 'ಹೊಸ ಚಿಗುರು, ಹಳೆ ಬೇರು' - 11 hours 46 min ago

ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ.

ಒಂದು ದಿನ ಒಬ್ಬ ದೊಡ್ಡ ದೊಡ್ಡ ಸೋಪ್ನೀರಿನ ಗುಳ್ಳೆ ಮಾಡಿ ಹಾರಿ ಬಿಡುತ್ತಾ ಬಸ್ಕ್ ಮಾಡುತ್ತಿದ್ದ.

   ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕನ್ನಡಿಯೊಳಗಿನ ಗಂಟು

ಸಂಪದ - 'ಹೊಸ ಚಿಗುರು, ಹಳೆ ಬೇರು' - 12 hours 55 min ago

ಕಾಲೇಜಿನ ಕಡೆಯ ದಿನವದು, ಕೊನೆಯ ದಿನವಾದ್ದರಿಂದ ಸಹಜವಾಗಿ ಅಗಲಿಕೆಯ ನೋವು ಎಲ್ಲರಲ್ಲೂ ಇತ್ತು, ವಿದಾಯಗಳು ಸಂದಾಯವಾಗುತ್ತಿತ್ತು. ಆಟೋ ಗ್ರಾಫ್ ವಿನಿಮಯ, ಭವಿಷ್ಯದ ಚಿಂತನೆ, ಯಾಕೋ ಯಾರದು ಮಾತುಗಳೇ ಮುಗಿಯುತ್ತಿರಲಿಲ್ಲ,  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಅಭಿಮಾನಿ

ಸಂಪದ - 'ಹೊಸ ಚಿಗುರು, ಹಳೆ ಬೇರು' - 13 hours 10 min ago

ಚಿತ್ರರಂಗದಲ್ಲಿ ಒಂದೊಮ್ಮೆ ಖ್ಯಾತ ನಟಿಯಾಗಿದ್ದೊಬ್ಬಳ ಮರು ಪ್ರವೇಶ. ಆ ಚಿತ್ರ ನೂರು ದಿನಗಳಿಗಿಂತಲೂ ಹೆಚ್ಚು ಪ್ರದರ್ಶನ ಕಂಡು ಸೂಪರ್ ಹಿಟ್ ಎನಿಸಿಕೊಂಡಿದೆ. ಆತನ ಕೈಯಲ್ಲಿ ಹಣ ಇಲ್ಲ. ಆತ ಆ ಚಿತ್ರ ನೋಡಲೆಂದು ಎಷ್ಟೋ ಕಷ್ಟ ಪಟ್ಟ. ಯಾರಿಂದಲೋ ದುಡ್ಡು ಸಾಲ ತಂದ. ಎಷ್ಟೋ ವರ್ಷಗಳ ನಂತರ ಆಕೆಯ ಚಿತ್ರ ನೋಡುವ ಭಾಗ್ಯ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಗೂದೆ ಹಣ್ಣು

ಸಂಪದ - 'ಹೊಸ ಚಿಗುರು, ಹಳೆ ಬೇರು' - 13 hours 29 min ago

ಮಾನ್ಯ ಗಣೇಶರವರು ಈ ಪದವನ್ನು ನನಗೆ ಪರಿಚಯಿಸಿದ್ದರು. ಕಿಟ್ಟೆಲ್ ಪದಕೋಶದಲ್ಲೂ ಈ ಪದವಿದೆ. ಗೂದೆ=ಗೊಂದ=ಟೊಮೆಟೋ. ಗೂದೆ ಹಣ್ಣು=ಟೊಮೆಟೋ ಹಣ್ಣು.

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ದೇವಸ್ಥಾನ ಮತ್ತು ಕ್ಯಾಮೆರ

ಸಂಪದ - 'ಹೊಸ ಚಿಗುರು, ಹಳೆ ಬೇರು' - 13 hours 37 min ago

ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಮೊಬೈಲ್ ಮತ್ತು ಕ್ಯಾಮೆರ ಒಳಗಡೆ ಬಿಡುವುದಿಲ್ಲ. ಫೋಟೋ ತೆಗೆದರೆ ಪುರಾತನ ವಿಗ್ರಹ ಹಾಗೂ ಕಟ್ಟಡಗಳಿಗೆ ಏನಾದ್ರೂ ತೊಂದರೆ ಆಗುತ್ತಾ? ಆದರೆ ಅದೇ ದೇವಸ್ಠಾನದ ಕಮಿಟಿ ದುಡ್ಡಿಗೆ ಅಂತಹ ಫೋಟೋ ಮಾರುತ್ತಾರೆ. ಏಲ್ಲಾ ದುಡ್ಡಿಗಾಗಿ. ನಿಮಗೆ ಏನು ಅನ್ನಿಸುತ್ತೆ ?

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕುಮಾರವ್ಯಾಸ ಭಾರತ

ಸಂಪದ - 'ಹೊಸ ಚಿಗುರು, ಹಳೆ ಬೇರು' - 15 hours 7 min ago

ಕುಮಾರವ್ಯಾಸ ಭಾರತ ಒಂದು ಸಮಗ್ರ ಕನ್ನಡ ಪುರಾಣ ಕಾವ್ಯ. ಇದರಲ್ಲಿ ಎಲ್ಲ ಸಂದರ್ಭಗಳನ್ನು ರಸವತ್ತಾಗಿ ವರ್ಣಿಸಿ ಪ್ರತಿಯೊಂದು ಘಟನಾವಳಿಗಳ ಹಿನ್ನೆಲೆ ಯನ್ನು ಅದರ ಕಾರಣ ಸಮೇತ ವರ್ಣಿಸಿದ್ದಾನೆ ಕವಿ. ಆದರೂ ಕರ್ನಾಟಕದಲ್ಲಿ ಕುಮಾರವ್ಯಾಸ ಭಾರತ ಕೇವಲ ಗಮಕವಾಚನಕಾರರಿಗೆ ಮಾತ್ರ ಸೀಮಿತವಾಗಿದೆಯೇನೋ ಅನ್ನಿಸುತ್ತದೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?

ಸಂಪದ - 'ಹೊಸ ಚಿಗುರು, ಹಳೆ ಬೇರು' - 15 hours 35 min ago

ಅಂತೂ ಇಂತೂ ನಂಮಾಪೀಸಲ್ಲಿ ಕಂನಡ ಕಲಿಕೆ ಮೊದಲಾಯ್ತು. ನೆಂನೆಯಿಂದ ಮೊಗಸು.

ಇವೊತ್ತು ಅವರ ಡವ್ಟುಗಳಂನು ಟೀ-ಟಯ್ಮಲ್ಲಿ ಕೇಳ್ತಾ ಇದ್ರು.

ಹೇಳಿ ಕೊಡವರು "ನಾವು ಬಾರತೀಯರು", "ನಾವು ಉದ್ಯೋಗಿಗಳು" ಎಂದು ಹೇಳಿಕೊಟ್ಟಿದ್ದಾರಂತೆ.

ಅದಕ್ಕೆ ಬಾರತೀಯ + ರು = ಬಾರತೀಯರು. ಆದರೆ ಉದ್ಯೋಗಿ + ರು = ಉದ್ಯೋಗಿರು ಯಾಕೆ ಆಗಲ್ಲ ಅಂತ ಅವರ ಪ್ರಶ್ನೆ?  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಯು.ಪಿ.ಎ.- ‘ವೋಟ್ಸ್ ವನ್ ಬಟ್ ಟ್ರಸ್ಟ್ ಲಾಸ್ಟ್’

ಸಂಪದ - 'ಹೊಸ ಚಿಗುರು, ಹಳೆ ಬೇರು' - Wed, 2008-07-23 10:29

ಲೋಕಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಕಲಾಪ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ‘ಮತಕ್ಕಾಗಿ ಲಂಚ’ ಎಂಬ ಹೊಸ ಪ್ರಹಸನಕ್ಕೆ ಲೋಕಸಭೆ ಸಾಕ್ಷಿಯಾಯಿತು.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಮುಗಿ

ಸಂಪದ - 'ಹೊಸ ಚಿಗುರು, ಹಳೆ ಬೇರು' - Wed, 2008-07-23 10:23

ಮುಗಿ=ಆವರಿಸು, ಮುಚ್ಚು, ಮುದುಡು. ಇದು ನಿಜವಾದ ಅರ್ಥ ಈ ಪದಗಳಿಗಿರುವುದು. ಸಾಮಾನ್ಯವಾಗಿ ಕೊನೆಗೊಳಿಸು ಎಂಬ ಅರ್ಥ ಜನ ತಿಳಿದಿದ್ದಾರೆ. ಇದಕ್ಕೆ ಕಾರಣ ನಾಟಕ ಅಥವಾ ಸಿನೆಮಾಗಳ ಕೊನೆಯಲ್ಲಿ ತೆರೆ ಮುಚ್ಚಿ ಕೊನೆಯನ್ನು ಸೂಚಿಸುವುದಱಿಂದ ಮುಗಿ=ಕೊನೆ ಎಂದು ಜನ ತಿಳಿದಿದ್ದಾರೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಬನವಾಸಿ ಆಸುಪಾಸಿನ ಕನ್ನಡ

ಸಂಪದ - 'ಹೊಸ ಚಿಗುರು, ಹಳೆ ಬೇರು' - Wed, 2008-07-23 09:38

ಬನವಾಸಿಯ ಕೆಲವೆಡೆ ಕಂಡ/ಕೇಳಿದ ಕೆಲವು ಕನ್ನಡದ ಬಳಕೆಗಳು. ಎಷ್ಟು ಸರಳವಾಗಿ ಇರತ್ತೆ ನೋಡಿ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಬಾರೋ ಸಾಧನಕೇರಿಗೆ...

ಸಂಪದ - 'ಹೊಸ ಚಿಗುರು, ಹಳೆ ಬೇರು' - Wed, 2008-07-23 09:37

ಬಾರೋ ಸಾಧನಕೇರಿಗೆ...

ಅದೊಂದು ಸುಂದರ ಕೆರೆ.

ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.

ಅದು ಧಾರವಾಡದ ಸಾಧನಕೇರಿಯ ಕೆರೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು
123456789…next ›last »
Syndicate content

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator