ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ › ವರ್ಗಗಳು

ಕನ್ನಡ ಪುಟಗಳು

ಕಾಳಿ ಕೊಳ್ಳದ ಕಥೆ/ವ್ಯಥೆ - ೩

ಅಲೆಮಾರಿಯ ಅನುಭವಗಳು - ರಾಜೇಶ್ ನಾಯಕ್ - 1 hour 52 min ago
Categories: ಕನ್ನಡ ಪುಟಗಳು

ಮುತ್ತಿನ-ಶೃಂಗಾರ

ಸಂಪದ - 'ಹೊಸ ಚಿಗುರು, ಹಳೆ ಬೇರು' - 5 hours 47 min ago

ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ನಾನಿರುವುದೆ ನಿಮಗಾಗಿ :REMIX

ಸಂಪದ - 'ಹೊಸ ಚಿಗುರು, ಹಳೆ ಬೇರು' - 6 hours 31 min ago

ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ

ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ನಿಮ್ಮೊಡನಿಂದು ನಾನು ಬಂದು
ನಿಮ್ಮೊಡನಿಂದು ನಾನು ಬಂದು  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಚಾ(ವ)ಡಿ ಪಟ್ಟಾಂಗ

ಸಂಪದ - 'ಹೊಸ ಚಿಗುರು, ಹಳೆ ಬೇರು' - 7 hours 13 min ago

ಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ!  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ವ್ಯಾಸರ ಕೊನೆಯ ಪತ್ರ

ಅವಧಿ - 7 hours 40 min ago
ಅಂಕಿತಾ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕಥೆಗಾರ ಎಂ ವ್ಯಾಸರು ಬರೆದ ಕೊನೆಯ ಪತ್ರದ ಕೊನೆಯ ಸಾಲುಗಳು ಹೀಗಿವೆ… “ಹೋಗಲಿ ಬಿಡಿ 69 ರಲ್ಲಿದ್ದೇನೆ… ಇನ್ನೆಷ್ಟು ದಿನ ಈ ಹಪಾಹಪಿ ಇರಬಹುದು?… .. ಒಂದು ಅಗಾಧ ದೈಹಿಕ ನೋವು ಇಂತಹ ಅಂಗಲಾಚುವಿಕೆಗಳನ್ನು ಹಿಮ್ಮೆಟ್ಟಿಸಿ…ಜೀವ ಒಂದು ಉಳಿದರೆ ಸಾಕು ಎಂಬ ಪ್ರಾರ್ಥನೆಯೊಂದೇ ಉಳಿದಿರುತ್ತೆ…ಕೊನೆಯ ಉಸಿರಿರುವವರೆಗೂ….”
Categories: ಕನ್ನಡ ಪುಟಗಳು

ವ್ಯಾಸರು ಬರೆಯುವುದನ್ನು ನಿಲ್ಲಿಸಿದರು…

ಅವಧಿ - 8 hours 33 min ago
-ಜಿ ಎನ್ ಮೋಹನ್ ಜೋಗಿ ಕರೆ ಮಾಡಿದರೆ ಎಂತಹ ಒತ್ತಡದಲ್ಲೂ ನಗೆ ಉಕ್ಕಿ ಆರಾಮಾಗುತ್ತೇನೆ. ಆದರೆ ಈಗಷ್ಟೇ ಫೋನ್ ಮಾಡಿದ ಜೋಗಿ ದನಿ ಭಾರವಾಗಿತ್ತು. ಅದು ಜೋಗಿಯ ವ್ಯಕ್ತಿತ್ವಕ್ಕೆ ಖಂಡಿತಾ ಹೇಳಿ ಮಾಡಿಸಿದ್ದಲ್ಲ. ಯಾಕೆ ಜೋಗಿ? ಎಂದು ಕೇಳುವ ಮುಂಚೆಯೇ ವ್ಯಾಸ ಇನ್ನಿಲ್ಲ ಅಂದರು. ಶಾಕ್ ಆಯಿತು. ಕೆಲವೇ ದಿನಗಳ ಹಿಂದಷ್ಟೇ ಫೋನಾಯಿಸಿದ್ದರು. ‘ಸಂಚಯ’ದ ಕಾವ್ಯ ವಿಶೇಷಾಂಕದಲ್ಲಿ ಬಂದಿದ್ದ ನನ್ನ ಕವಿತೆ ‘ಮಿ ಅಂಡ್ ಮಿಸೆಸ್ ಅಯ್ಯರ್’ ಕುರಿತು ಮಾತನಾಡಿದ್ದರು. ಒಂದು ನಿಮಿಷ ನಾನು ರೆಕ್ಕೆ ಪಡೆದು ಎಲ್ಲೆಲ್ಲಿಗೋ ಹಾರಿದೆ. [...]
Categories: ಕನ್ನಡ ಪುಟಗಳು

ಅನಂತ

ಕೂಗು - 8 hours 41 min ago
ಈ ಅನಂತ
ಮೌನ
ಚಿಂತನ, ಮಂಥನ
ಚಿರಯೌವನ

ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ
ರುದ್ರನರ್ತನ

ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ

ಈ ಹಾದಿಯಲ್ಲಿಲ್ಲ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು

ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು

ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ

ಕ್ಷಣ, ಕ್ಷಣ ಎದಸಿರು
ಹೊಸ ಉಸಿರು
ರಭಸದ ಜೋರು
ಮರಳಿ ಮತ್ತದೇ ಮೌನ
Categories: ಕನ್ನಡ ಪುಟಗಳು

ಒ೦ದು ನೆನಪು

ಸಂಪದ - 'ಹೊಸ ಚಿಗುರು, ಹಳೆ ಬೇರು' - 9 hours 17 min ago

ನೀರು ಬತ್ತಿದ ಮೇಲೆ ಬಾಯರಿದರೆನು.....

ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು....

ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ.........

ನಡೆವ ದಾರಿಯು ಕಾಣದಾಗಿದೆ.............

ನೋಟಕ್ಕೆ ಎಲ್ಲವು ಚ೦ದವಾಗಿದೆ.....

ಆದರೆ ಎಲ್ಲವು ನನ್ನದ್ದಲ್ಲವಲ್ಲ.............

ಬೇಕೆ೦ದಾಗ ಮಾತ್ರ ಅದು ನನ್ನದು....

ಬೇಡ ವಾದಾಗ ಅದು ಮತ್ಯಾರದ್ದೋ.......

ನೆನಪುಗಳು ಕಾಡುತಿವೆ ನನ್ನ.........  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಎಂ ವ್ಯಾಸ ಇನ್ನಿಲ್ಲ.

ಅವಧಿ - 9 hours 26 min ago
ಎಂ ವ್ಯಾಸ ಇನ್ನಿಲ್ಲ. ಅರ್ಧ ಗಂಟೆಯ ಹಿಂದೆ ಕಾಸರಗೋಡಿನ ಮಧೂರು ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕನ್ನಡದ ಕಥಾಲೋಕವನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದ್ದ ವ್ಯಾಸ ಕಳೆದ ನಾಲ್ಕು ದಿನಗಳಿಂದ ಅಸ್ವಸ್ಥರಾಗಿದ್ದರು. ಇದರೊಂದಿಗೆ ಸೇರಿದ ಚಿಕೂನ್ ಗುನ್ಯ ಅವರನ್ನು ಹಣ್ಣು ಮಾಡಿತ್ತು. ಕನ್ನಡ ಕಥಾ ಲೋಕ ನಿಜಕ್ಕೂ ಬಡವಾಗಿದೆ.
Categories: ಕನ್ನಡ ಪುಟಗಳು

‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಸಂಪದ - 'ಹೊಸ ಚಿಗುರು, ಹಳೆ ಬೇರು' - 10 hours 28 min ago

ನಮ್ಮ ಧಾರವಾಡ ಎರಡು ಸಂಗತಿಗಳಿಗಾಗಿ ತುಂಬ ಪ್ರಸಿದ್ಧ. ಒಂದು ಧಾರವಾಡದ ಲೈನ್ ಬಜಾರದ ಬಾಬುಸಿಂಗ ಠಾಕೂರ್ ಅವರ ಪೇಢ ರುಚಿಗಾಗಿ. ಮತ್ತೊಂದು ಬೆಳಗಾವಿ ರಸ್ತೆಯ..ಹುಚ್ಚರ ಆಸ್ಪತ್ರೆಗಾಗಿ!  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ninna manasina aytke....

ಸಂಪದ - 'ಹೊಸ ಚಿಗುರು, ಹಳೆ ಬೇರು' - 10 hours 50 min ago

Nanna manadali ninna maneya angaladi naniruve

ninna hridayadi nanna maneya vilhasa naanariye

avarivaru bandu ninna manadangaladi kulhithare

aaga.... 

ninna manasisna ayke enendu na ariye............

 

Bahala dinagala maathu ninna nodida dina

Nanna na marethu gaaliyali thelida aa kshana

Jothe nee baa endu kareda madhura ghalige

Aadarooo,

ninna manasisna ayke enendu na ariye.

 

Nannodane nee jagalavadi munisikonda aa kaala,

nanna jeevandi kaleda vanavasada kaapu dinaglu

ninna manasannu geddu santhoshada shikharadalliduvase

aadarooo

ninna manasisna ayke enendu na ariye  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಈ ಹಾಡನ್ನು ಹಾಡಿ, ಕೇಳಿಸಿರಿ ದಯವಟ್ಟು!

ಸಂಪದ - 'ಹೊಸ ಚಿಗುರು, ಹಳೆ ಬೇರು' - 11 hours 1 min ago

ನಾನು ಶಾಲೆಯಲ್ಲಿ ಕಲಿತ ಹಾಡಿದು...

ಇದನ್ನು ಹಾಡಿ( ಹಿನ್ನಲೆ ಇನಿ ಇದ್ದರೂ ಒಳ್ಳೇದು ) ಕೇಳಿಸಿರಿ...

ಇದನ್ನ ನಮ್ಮ ಕನ್ನಡತರಗತಿಯವರು ಅಗಸ್ಟ್ ೧೫ಕ್ಕೆ ಹಾಡ್ತಾರಂತೆ

ಹಾಡು:

ಇದು ನಮ್ಮ ದೇಶ, ನಮ್ಮ ನಾಡು, ಭಾರತ ನೆಲವು
ನಾವೆಲ್ಲ ಒಂದುಗೂಡಲದುವೆ ನಲ್ಮೆಗೆ ಗೆಲುವು

ಹಕ್ಕಬುಕ್ಕರಾಳಿದಂತ ವೀರ ನಾಡಿದು
ನಾಟ್ಯರಾಣಿ ಶಾಂತಲೆಯ ಕಲೆಯ ಬೀಡಿದು
||ಕನ್ನಡ ಕನ್ನಡ ಕನ್ನಡ||  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ವಿಪರ್ಯಾಸ

ಕೂಗು - 11 hours 9 min ago
ಮೋಡ ತಡೆದು
ಮಳೆ ಸುರಿಸಿದ
ಬೆಟ್ಟಕ್ಕೆ
ನೀರಿನ ಅಭಾವ

ಬೆಟ್ಟದಿಳಿಜಾರಿನಲಿ
ನೀರು ನಿಲ್ಲಲು
ಸಾಧ್ಯವೆ
ತಡೆಗೋಡೆ ವಿರಳ

ಕೆಳಗೆಲ್ಲೋ
ಕಟ್ಚಲೂ ಬಹುದೊಂದು
ಅಣೆಕಟ್ಟು
ಅದಕೇನು ಲಾಭ

ಆದರೂ ಅದಕೆ
ನಿಶ್ಚಿಂತೆ
ಇಲ್ಲವೇ ಕಿಂಚಿತ್ತು
ಹಸಿರಿನ ಕೊರತೆ

ಶಾಂತಿ, ನೆಮ್ಮದಿಗೆ
ಭಂಗವಿಲ್ಲ
ಸರಳ ಜೀವನ
ಅಲ್ಲವೇ ಅದ್ಭುತ

ಕುಡಿಯಲು ನೀರು
ಉರಿಬಿಸಿಲಿಗೆ ನೆರಳು
ಗುಂಡುಕಲ್ಲಿನಡಿ
ಬೀಸಲು ತಂಗಾಳಿ

ಜೀವಜಂತುಗಳಿಹವು
ಸಾವಿರ
ಕುತೂಹಲ ಕೆರಳಿಸುವ
ಕಾಲಹರಣ

ಏರುವ ರವಿ ,
ಜಾರುವ ಕವಿಗೆ
ಇಲ್ಲಿರುವುದೊಂದು
ವಿಶೇಷ ಸ್ಥಾನ
Categories: ಕನ್ನಡ ಪುಟಗಳು

ಮಿಂಚಿನ ಓಟ

ಸಂಪದ - 'ಹೊಸ ಚಿಗುರು, ಹಳೆ ಬೇರು' - 11 hours 25 min ago

ನೆನ್ನೆ ಮಿಂಚಿನ ಓಟ ಚಿತ್ರ ವಿಕ್ಷಿಸಲಾಯಿತು. ಮೊದಲರ್ಧ ಸ್ವಲ್ಪ ಅತಿಯೆನ್ನುವ ನಾಟಕೀಯತೆಯ ಸೀನುಗಳು ಉಪ್ಪಿದಾದಾ ಎಂಬಿಬಿಎಸ್ ಚಿತ್ರವನ್ನು ನೆನಪಿಸುತ್ತವೆ. ಸುಮಾರು ಮುಕ್ಕಾಲು ತಾಸಿನ ನಂತರವಷ್ಟೇ ಸಿನಿಮಾ ವೇಗ ಪಡೆಯುತ್ತದೆ. ನಿಮ್ಮಲ್ಲಿ ಮೊದಲ ಈ ೪೫ ನಿಮಿಷಗಳು ಕುಳಿತುಕೊಳ್ಳುವ ಸಹನೆಯಿದ್ದಲ್ಲಿ ಮುಂದೈತೆ ಊರ ಹಬ್ಬ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಯೋಗವಾಹಕ

ಸಂಪದ - 'ಹೊಸ ಚಿಗುರು, ಹಳೆ ಬೇರು' - 11 hours 29 min ago

ಮಂತ್ರವಾಗದೆ ಇರುವ ಅಕ್ಷರವಿಲ್ಲ.. ಅಂತ ಒಂದು ಸಂಸ್ಕೃತದ ಸುಭಾಷಿತ ದಲ್ಲಿ ಓದಿದ ನೆನಪು. ನನಗೆ ಗೊತ್ತಿರುವಂತೆ ಈ ಅಕ್ಷರಗಳಿಗೂ , ಮಂತ್ರ ಗಳಿಗೂ ಯೋಗಕ್ಕೂ ತುಂಬಾ ಹತ್ತಿರದ ನಂಟು.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಸಿಟಿಯ ಮೇಲಣ ಗುಳ್ಳೆ

ಸಂಪದ - 'ಹೊಸ ಚಿಗುರು, ಹಳೆ ಬೇರು' - 11 hours 45 min ago

ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ.

ಒಂದು ದಿನ ಒಬ್ಬ ದೊಡ್ಡ ದೊಡ್ಡ ಸೋಪ್ನೀರಿನ ಗುಳ್ಳೆ ಮಾಡಿ ಹಾರಿ ಬಿಡುತ್ತಾ ಬಸ್ಕ್ ಮಾಡುತ್ತಿದ್ದ.

   ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕನ್ನಡಿಯೊಳಗಿನ ಗಂಟು

ಸಂಪದ - 'ಹೊಸ ಚಿಗುರು, ಹಳೆ ಬೇರು' - 12 hours 53 min ago

ಕಾಲೇಜಿನ ಕಡೆಯ ದಿನವದು, ಕೊನೆಯ ದಿನವಾದ್ದರಿಂದ ಸಹಜವಾಗಿ ಅಗಲಿಕೆಯ ನೋವು ಎಲ್ಲರಲ್ಲೂ ಇತ್ತು, ವಿದಾಯಗಳು ಸಂದಾಯವಾಗುತ್ತಿತ್ತು. ಆಟೋ ಗ್ರಾಫ್ ವಿನಿಮಯ, ಭವಿಷ್ಯದ ಚಿಂತನೆ, ಯಾಕೋ ಯಾರದು ಮಾತುಗಳೇ ಮುಗಿಯುತ್ತಿರಲಿಲ್ಲ,  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಅಭಿಮಾನಿ

ಸಂಪದ - 'ಹೊಸ ಚಿಗುರು, ಹಳೆ ಬೇರು' - 13 hours 9 min ago

ಚಿತ್ರರಂಗದಲ್ಲಿ ಒಂದೊಮ್ಮೆ ಖ್ಯಾತ ನಟಿಯಾಗಿದ್ದೊಬ್ಬಳ ಮರು ಪ್ರವೇಶ. ಆ ಚಿತ್ರ ನೂರು ದಿನಗಳಿಗಿಂತಲೂ ಹೆಚ್ಚು ಪ್ರದರ್ಶನ ಕಂಡು ಸೂಪರ್ ಹಿಟ್ ಎನಿಸಿಕೊಂಡಿದೆ. ಆತನ ಕೈಯಲ್ಲಿ ಹಣ ಇಲ್ಲ. ಆತ ಆ ಚಿತ್ರ ನೋಡಲೆಂದು ಎಷ್ಟೋ ಕಷ್ಟ ಪಟ್ಟ. ಯಾರಿಂದಲೋ ದುಡ್ಡು ಸಾಲ ತಂದ. ಎಷ್ಟೋ ವರ್ಷಗಳ ನಂತರ ಆಕೆಯ ಚಿತ್ರ ನೋಡುವ ಭಾಗ್ಯ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಗೂದೆ ಹಣ್ಣು

ಸಂಪದ - 'ಹೊಸ ಚಿಗುರು, ಹಳೆ ಬೇರು' - 13 hours 27 min ago

ಮಾನ್ಯ ಗಣೇಶರವರು ಈ ಪದವನ್ನು ನನಗೆ ಪರಿಚಯಿಸಿದ್ದರು. ಕಿಟ್ಟೆಲ್ ಪದಕೋಶದಲ್ಲೂ ಈ ಪದವಿದೆ. ಗೂದೆ=ಗೊಂದ=ಟೊಮೆಟೋ. ಗೂದೆ ಹಣ್ಣು=ಟೊಮೆಟೋ ಹಣ್ಣು.

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ದೇವಸ್ಥಾನ ಮತ್ತು ಕ್ಯಾಮೆರ

ಸಂಪದ - 'ಹೊಸ ಚಿಗುರು, ಹಳೆ ಬೇರು' - 13 hours 36 min ago

ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಮೊಬೈಲ್ ಮತ್ತು ಕ್ಯಾಮೆರ ಒಳಗಡೆ ಬಿಡುವುದಿಲ್ಲ. ಫೋಟೋ ತೆಗೆದರೆ ಪುರಾತನ ವಿಗ್ರಹ ಹಾಗೂ ಕಟ್ಟಡಗಳಿಗೆ ಏನಾದ್ರೂ ತೊಂದರೆ ಆಗುತ್ತಾ? ಆದರೆ ಅದೇ ದೇವಸ್ಠಾನದ ಕಮಿಟಿ ದುಡ್ಡಿಗೆ ಅಂತಹ ಫೋಟೋ ಮಾರುತ್ತಾರೆ. ಏಲ್ಲಾ ದುಡ್ಡಿಗಾಗಿ. ನಿಮಗೆ ಏನು ಅನ್ನಿಸುತ್ತೆ ?

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು
123456789…next ›last »
Syndicate content

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator