ಸಮುದಾಯ ತಾಣಗಳು
ಮುತ್ತಿನ-ಶೃಂಗಾರ
ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ ಮುಂದೆ ಓದಿ »
ನಾನಿರುವುದೆ ನಿಮಗಾಗಿ :REMIX
ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ನಿಮ್ಮೊಡನಿಂದು ನಾನು ಬಂದು
ನಿಮ್ಮೊಡನಿಂದು ನಾನು ಬಂದು ಮುಂದೆ ಓದಿ »
ಚಾ(ವ)ಡಿ ಪಟ್ಟಾಂಗ
ಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ! ಮುಂದೆ ಓದಿ »
ಒ೦ದು ನೆನಪು
ನೀರು ಬತ್ತಿದ ಮೇಲೆ ಬಾಯರಿದರೆನು.....
ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು....
ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ.........
ನಡೆವ ದಾರಿಯು ಕಾಣದಾಗಿದೆ.............
ನೋಟಕ್ಕೆ ಎಲ್ಲವು ಚ೦ದವಾಗಿದೆ.....
ಆದರೆ ಎಲ್ಲವು ನನ್ನದ್ದಲ್ಲವಲ್ಲ.............
ಬೇಕೆ೦ದಾಗ ಮಾತ್ರ ಅದು ನನ್ನದು....
ಬೇಡ ವಾದಾಗ ಅದು ಮತ್ಯಾರದ್ದೋ.......
ನೆನಪುಗಳು ಕಾಡುತಿವೆ ನನ್ನ......... ಮುಂದೆ ಓದಿ »
‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
ನಮ್ಮ ಧಾರವಾಡ ಎರಡು ಸಂಗತಿಗಳಿಗಾಗಿ ತುಂಬ ಪ್ರಸಿದ್ಧ. ಒಂದು ಧಾರವಾಡದ ಲೈನ್ ಬಜಾರದ ಬಾಬುಸಿಂಗ ಠಾಕೂರ್ ಅವರ ಪೇಢ ರುಚಿಗಾಗಿ. ಮತ್ತೊಂದು ಬೆಳಗಾವಿ ರಸ್ತೆಯ..ಹುಚ್ಚರ ಆಸ್ಪತ್ರೆಗಾಗಿ! ಮುಂದೆ ಓದಿ »
ninna manasina aytke....
Nanna manadali ninna maneya angaladi naniruve
ninna hridayadi nanna maneya vilhasa naanariye
avarivaru bandu ninna manadangaladi kulhithare
aaga....
ninna manasisna ayke enendu na ariye............
Bahala dinagala maathu ninna nodida dina
Nanna na marethu gaaliyali thelida aa kshana
Jothe nee baa endu kareda madhura ghalige
Aadarooo,
ninna manasisna ayke enendu na ariye.
Nannodane nee jagalavadi munisikonda aa kaala,
nanna jeevandi kaleda vanavasada kaapu dinaglu
ninna manasannu geddu santhoshada shikharadalliduvase
aadarooo
ninna manasisna ayke enendu na ariye ಮುಂದೆ ಓದಿ »
ಈ ಹಾಡನ್ನು ಹಾಡಿ, ಕೇಳಿಸಿರಿ ದಯವಟ್ಟು!
ನಾನು ಶಾಲೆಯಲ್ಲಿ ಕಲಿತ ಹಾಡಿದು...
ಇದನ್ನು ಹಾಡಿ( ಹಿನ್ನಲೆ ಇನಿ ಇದ್ದರೂ ಒಳ್ಳೇದು ) ಕೇಳಿಸಿರಿ...
ಇದನ್ನ ನಮ್ಮ ಕನ್ನಡತರಗತಿಯವರು ಅಗಸ್ಟ್ ೧೫ಕ್ಕೆ ಹಾಡ್ತಾರಂತೆ
ಹಾಡು:
ಇದು ನಮ್ಮ ದೇಶ, ನಮ್ಮ ನಾಡು, ಭಾರತ ನೆಲವು
ನಾವೆಲ್ಲ ಒಂದುಗೂಡಲದುವೆ ನಲ್ಮೆಗೆ ಗೆಲುವು
ಹಕ್ಕಬುಕ್ಕರಾಳಿದಂತ ವೀರ ನಾಡಿದು
ನಾಟ್ಯರಾಣಿ ಶಾಂತಲೆಯ ಕಲೆಯ ಬೀಡಿದು
||ಕನ್ನಡ ಕನ್ನಡ ಕನ್ನಡ|| ಮುಂದೆ ಓದಿ »
ಮಿಂಚಿನ ಓಟ
ನೆನ್ನೆ ಮಿಂಚಿನ ಓಟ ಚಿತ್ರ ವಿಕ್ಷಿಸಲಾಯಿತು. ಮೊದಲರ್ಧ ಸ್ವಲ್ಪ ಅತಿಯೆನ್ನುವ ನಾಟಕೀಯತೆಯ ಸೀನುಗಳು ಉಪ್ಪಿದಾದಾ ಎಂಬಿಬಿಎಸ್ ಚಿತ್ರವನ್ನು ನೆನಪಿಸುತ್ತವೆ. ಸುಮಾರು ಮುಕ್ಕಾಲು ತಾಸಿನ ನಂತರವಷ್ಟೇ ಸಿನಿಮಾ ವೇಗ ಪಡೆಯುತ್ತದೆ. ನಿಮ್ಮಲ್ಲಿ ಮೊದಲ ಈ ೪೫ ನಿಮಿಷಗಳು ಕುಳಿತುಕೊಳ್ಳುವ ಸಹನೆಯಿದ್ದಲ್ಲಿ ಮುಂದೈತೆ ಊರ ಹಬ್ಬ. ಮುಂದೆ ಓದಿ »
ಯೋಗವಾಹಕ
ಮಂತ್ರವಾಗದೆ ಇರುವ ಅಕ್ಷರವಿಲ್ಲ.. ಅಂತ ಒಂದು ಸಂಸ್ಕೃತದ ಸುಭಾಷಿತ ದಲ್ಲಿ ಓದಿದ ನೆನಪು. ನನಗೆ ಗೊತ್ತಿರುವಂತೆ ಈ ಅಕ್ಷರಗಳಿಗೂ , ಮಂತ್ರ ಗಳಿಗೂ ಯೋಗಕ್ಕೂ ತುಂಬಾ ಹತ್ತಿರದ ನಂಟು. ಮುಂದೆ ಓದಿ »
ಸಿಟಿಯ ಮೇಲಣ ಗುಳ್ಳೆ
ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ.
ಒಂದು ದಿನ ಒಬ್ಬ ದೊಡ್ಡ ದೊಡ್ಡ ಸೋಪ್ನೀರಿನ ಗುಳ್ಳೆ ಮಾಡಿ ಹಾರಿ ಬಿಡುತ್ತಾ ಬಸ್ಕ್ ಮಾಡುತ್ತಿದ್ದ.
ಕನ್ನಡಿಯೊಳಗಿನ ಗಂಟು
ಕಾಲೇಜಿನ ಕಡೆಯ ದಿನವದು, ಕೊನೆಯ ದಿನವಾದ್ದರಿಂದ ಸಹಜವಾಗಿ ಅಗಲಿಕೆಯ ನೋವು ಎಲ್ಲರಲ್ಲೂ ಇತ್ತು, ವಿದಾಯಗಳು ಸಂದಾಯವಾಗುತ್ತಿತ್ತು. ಆಟೋ ಗ್ರಾಫ್ ವಿನಿಮಯ, ಭವಿಷ್ಯದ ಚಿಂತನೆ, ಯಾಕೋ ಯಾರದು ಮಾತುಗಳೇ ಮುಗಿಯುತ್ತಿರಲಿಲ್ಲ, ಮುಂದೆ ಓದಿ »
ಅಭಿಮಾನಿ
ಚಿತ್ರರಂಗದಲ್ಲಿ ಒಂದೊಮ್ಮೆ ಖ್ಯಾತ ನಟಿಯಾಗಿದ್ದೊಬ್ಬಳ ಮರು ಪ್ರವೇಶ. ಆ ಚಿತ್ರ ನೂರು ದಿನಗಳಿಗಿಂತಲೂ ಹೆಚ್ಚು ಪ್ರದರ್ಶನ ಕಂಡು ಸೂಪರ್ ಹಿಟ್ ಎನಿಸಿಕೊಂಡಿದೆ. ಆತನ ಕೈಯಲ್ಲಿ ಹಣ ಇಲ್ಲ. ಆತ ಆ ಚಿತ್ರ ನೋಡಲೆಂದು ಎಷ್ಟೋ ಕಷ್ಟ ಪಟ್ಟ. ಯಾರಿಂದಲೋ ದುಡ್ಡು ಸಾಲ ತಂದ. ಎಷ್ಟೋ ವರ್ಷಗಳ ನಂತರ ಆಕೆಯ ಚಿತ್ರ ನೋಡುವ ಭಾಗ್ಯ. ಮುಂದೆ ಓದಿ »
ಗೂದೆ ಹಣ್ಣು
ಮಾನ್ಯ ಗಣೇಶರವರು ಈ ಪದವನ್ನು ನನಗೆ ಪರಿಚಯಿಸಿದ್ದರು. ಕಿಟ್ಟೆಲ್ ಪದಕೋಶದಲ್ಲೂ ಈ ಪದವಿದೆ. ಗೂದೆ=ಗೊಂದ=ಟೊಮೆಟೋ. ಗೂದೆ ಹಣ್ಣು=ಟೊಮೆಟೋ ಹಣ್ಣು.
ದೇವಸ್ಥಾನ ಮತ್ತು ಕ್ಯಾಮೆರ
ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಮೊಬೈಲ್ ಮತ್ತು ಕ್ಯಾಮೆರ ಒಳಗಡೆ ಬಿಡುವುದಿಲ್ಲ. ಫೋಟೋ ತೆಗೆದರೆ ಪುರಾತನ ವಿಗ್ರಹ ಹಾಗೂ ಕಟ್ಟಡಗಳಿಗೆ ಏನಾದ್ರೂ ತೊಂದರೆ ಆಗುತ್ತಾ? ಆದರೆ ಅದೇ ದೇವಸ್ಠಾನದ ಕಮಿಟಿ ದುಡ್ಡಿಗೆ ಅಂತಹ ಫೋಟೋ ಮಾರುತ್ತಾರೆ. ಏಲ್ಲಾ ದುಡ್ಡಿಗಾಗಿ. ನಿಮಗೆ ಏನು ಅನ್ನಿಸುತ್ತೆ ?
ಕುಮಾರವ್ಯಾಸ ಭಾರತ
ಕುಮಾರವ್ಯಾಸ ಭಾರತ ಒಂದು ಸಮಗ್ರ ಕನ್ನಡ ಪುರಾಣ ಕಾವ್ಯ. ಇದರಲ್ಲಿ ಎಲ್ಲ ಸಂದರ್ಭಗಳನ್ನು ರಸವತ್ತಾಗಿ ವರ್ಣಿಸಿ ಪ್ರತಿಯೊಂದು ಘಟನಾವಳಿಗಳ ಹಿನ್ನೆಲೆ ಯನ್ನು ಅದರ ಕಾರಣ ಸಮೇತ ವರ್ಣಿಸಿದ್ದಾನೆ ಕವಿ. ಆದರೂ ಕರ್ನಾಟಕದಲ್ಲಿ ಕುಮಾರವ್ಯಾಸ ಭಾರತ ಕೇವಲ ಗಮಕವಾಚನಕಾರರಿಗೆ ಮಾತ್ರ ಸೀಮಿತವಾಗಿದೆಯೇನೋ ಅನ್ನಿಸುತ್ತದೆ. ಮುಂದೆ ಓದಿ »
ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?
ಅಂತೂ ಇಂತೂ ನಂಮಾಪೀಸಲ್ಲಿ ಕಂನಡ ಕಲಿಕೆ ಮೊದಲಾಯ್ತು. ನೆಂನೆಯಿಂದ ಮೊಗಸು.
ಇವೊತ್ತು ಅವರ ಡವ್ಟುಗಳಂನು ಟೀ-ಟಯ್ಮಲ್ಲಿ ಕೇಳ್ತಾ ಇದ್ರು.
ಹೇಳಿ ಕೊಡವರು "ನಾವು ಬಾರತೀಯರು", "ನಾವು ಉದ್ಯೋಗಿಗಳು" ಎಂದು ಹೇಳಿಕೊಟ್ಟಿದ್ದಾರಂತೆ.
ಅದಕ್ಕೆ ಬಾರತೀಯ + ರು = ಬಾರತೀಯರು. ಆದರೆ ಉದ್ಯೋಗಿ + ರು = ಉದ್ಯೋಗಿರು ಯಾಕೆ ಆಗಲ್ಲ ಅಂತ ಅವರ ಪ್ರಶ್ನೆ? ಮುಂದೆ ಓದಿ »
ಯು.ಪಿ.ಎ.- ‘ವೋಟ್ಸ್ ವನ್ ಬಟ್ ಟ್ರಸ್ಟ್ ಲಾಸ್ಟ್’
ಲೋಕಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಕಲಾಪ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ‘ಮತಕ್ಕಾಗಿ ಲಂಚ’ ಎಂಬ ಹೊಸ ಪ್ರಹಸನಕ್ಕೆ ಲೋಕಸಭೆ ಸಾಕ್ಷಿಯಾಯಿತು. ಮುಂದೆ ಓದಿ »
ಮುಗಿ
ಮುಗಿ=ಆವರಿಸು, ಮುಚ್ಚು, ಮುದುಡು. ಇದು ನಿಜವಾದ ಅರ್ಥ ಈ ಪದಗಳಿಗಿರುವುದು. ಸಾಮಾನ್ಯವಾಗಿ ಕೊನೆಗೊಳಿಸು ಎಂಬ ಅರ್ಥ ಜನ ತಿಳಿದಿದ್ದಾರೆ. ಇದಕ್ಕೆ ಕಾರಣ ನಾಟಕ ಅಥವಾ ಸಿನೆಮಾಗಳ ಕೊನೆಯಲ್ಲಿ ತೆರೆ ಮುಚ್ಚಿ ಕೊನೆಯನ್ನು ಸೂಚಿಸುವುದಱಿಂದ ಮುಗಿ=ಕೊನೆ ಎಂದು ಜನ ತಿಳಿದಿದ್ದಾರೆ. ಮುಂದೆ ಓದಿ »
ಬನವಾಸಿ ಆಸುಪಾಸಿನ ಕನ್ನಡ
ಬನವಾಸಿಯ ಕೆಲವೆಡೆ ಕಂಡ/ಕೇಳಿದ ಕೆಲವು ಕನ್ನಡದ ಬಳಕೆಗಳು. ಎಷ್ಟು ಸರಳವಾಗಿ ಇರತ್ತೆ ನೋಡಿ. ಮುಂದೆ ಓದಿ »
ಬಾರೋ ಸಾಧನಕೇರಿಗೆ...
ಬಾರೋ ಸಾಧನಕೇರಿಗೆ...
ಅದೊಂದು ಸುಂದರ ಕೆರೆ.
ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.
ಅದು ಧಾರವಾಡದ ಸಾಧನಕೇರಿಯ ಕೆರೆ. ಮುಂದೆ ಓದಿ »
