ತುಳಸೀವನ
ಮತ್ತೊಂದು ಜನುಮ ದಿನ - ಶುಭಾಶಯಗಳು!
ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು!
ಚಿತ್ರ - ಪೋಲಿ ಹುಡುಗ (೧೯೮೯)
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ
ಗಾಯಕರು - ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು
ಜನನ ಮರಣಗಳೆರಡು ಕುರುಡು
ಮುಂದೆ ಹೋಗದು
ಹಿಂದೆ ಬಾರದು
ನಿಂತಲ್ಲಿ ನಿಲ್ಲದು
ಸ್ನೇಹ ಪ್ರೀತಿಗಳೆರಡು ಕುರುಡು
ದೂರ ಹೋಗದು
ಬೇರೆಯಾಗದು
ಕಣ್ಣಿಗೆ ಕಾಣದು
ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!
ಕುಣಿಯುವ ಸಡಗರ ನಮಗೆ ಇದೆ
ಕುಣಿಸುವ ಡಮರುಗ ಯಾರಲಿದೆ?
ಯಾರಲಿದೆ? ಹೆಣ್ಣಲಿದೆ
ನಲಿಸುವ ರಾಗ
ಒಲಿಸುವ ವೇಗ
ಆ ಹೆಣ್ಣಿನಲ್ಲಿದೆ
ಆ ಕಣ್ಣಿನಲ್ಲಿದೆ
ಆ ನೋಟದಲ್ಲಿದೆ
ಮೈಮಾಟದಲ್ಲಿದೆ||೧||
ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!
ಹೂವಿಗೆ ಪ್ರತಿದಿನ ಜನುಮದಿನ
ಹಾರುವ ದುಂಬಿಗೆ ಏನು [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಸೂಪರ್ ಸ್ಟಾರ್ - ಬಿಟ್ಟಾಕ್ ಬಿಟ್ಟಾಕ್
ಚಿತ್ರ : ಸೂಪರ್ ಸ್ಟಾರ್ (೨೦೦೧)
ಗಾಯಕರು - ಅದ್ನಾನ್ ಸಾಮಿ, ಲತ ಹಂಸಲೇಖ
ಸಾಹಿತ್ಯ, ಸಂಗೀತ - ಹಂಸಲೇಖ
ಹಾಡು ಕೇಳಿ
ಅದ್ನಾನ್ : ಡೋಂಟ್ ವರಿ ಮಾಡಬೇಡಾ
ಡರ್ಪೋಕ್ ಆಗಬೇಡಾ
ಲವ್ ಅಂಡ್ ವಾರಿನಲ್ಲಿ
ಎಸ್ಕೇಪ್ ಆಗಬೇಡ
ಕಂಗಾಲ್ ಆಗಬೇಡ
ಬಿಟ್ಟ್ ಹಾಕ್ ಬಿಟ್ಟ್ ಹಾಕ್
ಬ್ಯಾಡ್ ಟೈಮ್ ಅನ್ನಬೇಡ
ಮೂಡ್ ಔಟ್ ಆಗಬೇಡ
ಬ್ಲಡ್ ಚೆಕ್ ಮಾಡಬೇಡ
ಲವ್ ಲಾಕ್ ಬಿಚ್ಚಬೇಡ
ಬಿಟ್ಟೆಲ್ಲೂ ಹೋಗಬೇಡ
ಬಿಟ್ಟ್ ಹಾಕ್ ಬಿಟ್ಟ್ ಹಾಕ್
ಒಳಗೆ ಏನೇನಿದೆ?
ಲತ ಹಂಸ್: ತುಂಬಾ ಹೇಳೋದಿದೆ
ಅದ್ನಾನ್ : ಹೋ ಕೇಳೋದಿನ್ನೇನಿದೆ?
ಲತ ಹಂಸ್: ಇಷ್ಟ ಕಷ್ಟ ಇದೆ
ಅದ್ನಾನ್ : ಹೋ ಕಷ್ಟವೇನು?
ಲತ ಹಂಸ್: ಅಪ್ಪ ಇಲ್ಲ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಒಮ್ಮೊಮ್ಮೆ ಹೀಗೂ ಆಗುವುದು!
ಒಮ್ಮೊಮ್ಮೆ ಹೀಗೂ ಆಗುವುದು … ಯಾರನ್ನೋ ಜೀವ ಬೇಡುವುದು…
ಸಂಜೆ ಆಫೀಸಿನಿಂದ ಮನೆಗೆ ಹೋಗಲು ಸುದೀಪ ಎದ್ದಾಗ ಪ್ಯೂನ್ ರಂಗ ಹಲ್ಲು ಕಿರಿಯುತ್ತಾ ದರ್ಶನ ನೀಡಿದ
`ಆರಾಮಾ ಸಾ..’ಅಂತಾ ಕೈ ಮುಂದೆ ಚಾಚಿ `ನೀವೇನೂ ನಮ್ಮುನ್ನ ಇತ್ತೀಚಿಗೆ ನೋಡ್ ಕೊಳದೇ ಇಲ್ಲಾ…’ಅಂತ ತನ್ನ ಎಂದಿನ ಪಲ್ಲವಿ ಹಾಡಿದ
ರಂಗನ ಪ್ರಕಾರ `ನೋಡ್ ಕೊಳದೂ’ ಅಂದ್ರೆ ಅವನ ಕಾಫಿಗೆ ,ಬೀಡಿಗೆ ದುಡ್ಡು ಕೊಡೋದು ಎಂಬುದು ಸುದೀಪನಿಗೆ ಸರ್ವವಿದಿತವಾಗಿದ್ದರಿಂದ ರಂಗನ ಕೈಗೆ ಇಪ್ಪತ್ತು ತುರುಕಿ
ಅವನು ಕೊಟ್ಟ ಕಾಗದದ ಕಡೆಗೆ ಆತುರದಿಂದ ಗಮನ ಹರಿಸಿದ.
ಅಮ್ಮನ ಕಾಗದ…ಊರಿಂದ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಮುಗಿಯದಿರಲಿ ಬಂಧನ…..
ಇಳಿಸಂಜೆಗೆ ಕರೆಗಂಟೆಯ ಸದ್ದಿಗೆ ಎಚ್ಚರಾಗಿ ಬಾಗಿಲು ತೆರೆದವನಿಗೆ ಕಾಣಿಸಿದ್ದು ಯಾಮಿನಿಯ ತಂದೆ!
ನಿದ್ದೆ ತುಂಬಿದ ತನ್ನ ಕಣ್ಣುಗಳು… ಮುದುರಿದ ತನ್ನ ಬಟ್ಟೆಗಳು… ಕೊಳಕಾದ ತನ್ನ ರೂಮು…ಅವರನ್ನು ಒಳಗೆ ಕರೆಯಲೂ ಸಂಕೋಚವೆನಿಸಿತು ಅವನಿಗೆ…
`ಅಯ್ಯೋ ತಾವು ನನ್ನನ್ನ ಹುಡುಕಿಕೊಂಡು ಇಷ್ಟು ದೂರ ಯಾಕೆ ಬರಕ್ಕೆ ಹೋದ್ರೀ…ಯಾಮಿನೀ ಹತ್ರ ಹೇಳಿ ಕಳಿಸಿದ್ದರೆ ನಾನೇ ಬಂದು ನಿಮ್ಮನ್ನ ನೋಡ್ತಿದ್ದೆ’ಎಂದ
ಅದಕ್ಕವರು `ಇಲ್ಲಪ್ಪಾ…ಕೆಲವು ಕೆಲಸ ಮಾಡುವಾಗ ಯಾವುದು ಸಂಪ್ರದಾಯವೋ ಹಾಗೇ ಮಾಡಬೇಕೂ.. ಈಗ ನಾನೇ ನಿಮ್ಮನೆಗೆ ಬರಬೇಕಿತ್ತು …ಹಾಗೆಲ್ಲಾ
ನಿಮಗೆ ಹೇಳಿಕರೆಸಿ ಹೇಳಲಾಗುವಂಥಾ ಸಮಾಚಾರವಲ್ಲ ಇದೂ…’ ಎನ್ನುತ್ತಾ ಕುರ್ಚಿಯ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಮುಂದೇನು ಎಂದು ಹೇಳುವರು ಯಾರು?
ಪರಸ್ಪರ “ಹೇಗಿದ್ದೀ?” “ಚೆನ್ನಾಗಿದ್ದೇನೆ”ಗಳ ನಂತರ “ಪರದೇಶ ಹೇಗಿತ್ತು?” ಪ್ರಶ್ನೆ ಅಚಾನಕ್ಕಾಗಿ ಸುದೀಪನ ಬಾಯಿಂದ ಹೊರಬಿತ್ತು. ಒಂದೆರಡು ಕ್ಷಣಗಳ ಮೌನದ ಮೇಲೆ ಬಂದ ಉತ್ತರ ಸುನಯನಳದ್ದೇ ಹೌದಾ ಅನ್ನುವ ಸಂಶಯವೂ ಅವನಿಗೆ ಬರುವಂತಾಯ್ತು. “ಪರದೇಶವೇನೋ ಚೆನ್ನಾಗಿದೆ ಸುದೀಪ, ಆದರೆ ಪರದೇಶಿಯೊಡನೆ ಜೀವನ ಸರಿಯಾಗಲಿಲ್ಲ” ಅಂದಳು. “ಯಾಕೇಂತ ನಾನು ಕೇಳಲ್ಲ, ನಿನ್ನ ನೋವನ್ನು ಕೆದಕಲ್ಲ” ಅಂದ. “ಇಲ್ಲ, ನಿನ್ನ ಜೊತೆ ಹೇಳಿಕೊಳ್ಳಕ್ಕೆ ನನಗೇನೂ ತೊಂದರೆಯಿಲ್ಲ. ಸುದೀಪ, ನೀನಾದರೂ ನನ್ನ ಕಥೆ ಕೇಳುತ್ತೀ ಅನ್ನುವ ನಂಬಿಕೆ ನನಗಿತ್ತು. ಅಪ್ಪ-ಅಮ್ಮನಿಗೂ ಇದನ್ನ ಹೇಳಿಲ್ಲ, [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
New Domain~
Tulasivana can now be accessed from: http://tulasivana.com !!
You will be re-directed back here. But, for your convenience, use the new, shorter address.
Categories: ಕನ್ನಡ ಪುಟಗಳು
ಯಾರ ಒಲವು ಯಾರ ಕಡೆಗೋ? - 5
ಬೆಳಗಿನ ಸೂರ್ಯನ ಕಿರಣಗಳು ಕಿಟಕಿಯ ಒಳಗೆ ತೂರಿ ಸುದೀಪನನ್ನು ಎಚ್ಚರಗೊಳಿಸಿದವು. ಸುದೀಪನ ಮನಸ್ಸಿನಲ್ಲಿದ್ದ ಭ್ರಮೆಗಳೂ ಕತ್ತಲಿನೊಂದಿಗೆ ಕರಗಿಹೋಗಿತ್ತು. ವಾಸ್ತವ ಬೆಳಗಿನ ಸೂರ್ಯನಂತೆ ನಿಚ್ಚಳವಾಗಿ ಕಣ್ಣೆದುರು ಹೊಳೆಯುತ್ತಿತ್ತು. ಸುದೀಪ ಹುಸಿ ಆದರ್ಶವಾದಿಯಲ್ಲ. ಭಾವನೆಗಳಿಗಿಂತ ಬದುಕೇ ಮುಖ್ಯವೆಂದು ನಂಬಿದವನು. ತಾನು ಯಾಮಿನಿಯಂತೆ ಆದರ್ಶದ ಬೆನ್ನುಹತ್ತಿ ಹೋಗುವ ಶಕ್ತಿ ಇಲ್ಲದವನು ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಸೃಷ್ಟಿ ಯಾಮಿನಿಯ ಮಗಳೇ ಆಗಿದ್ದರೆ ಆ ಸತ್ಯವನ್ನು ಅರಗಿಸಿಕೊಳ್ಳುವ ವಿಶಾಲ ಹೃದಯ ತನಗಿದೆಯೇ? ಆ ಪ್ರಶ್ನೆಯನ್ನು ತನ್ನನ್ನೇ ತಾನು ಮತ್ತೊಮ್ಮೆ ಕೇಳಿಕೊಂಡ. ಇಲ್ಲವೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿತು ಅವನ ಮನಸ್ಸು.
ಒಂದು ವೇಳೆ ತಾನು ಒಪ್ಪಿದರೂ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ರಾಧೇ - ಎಚ್. ಎಸ್. ವೆಂಕಟೇಶಮೂರ್ತಿ
ಕವಿ : ಎಚ್. ಎಸ್. ವೆಂಕಟೇಶಮೂರ್ತಿ
ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು
ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ
ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳೀ ದಾರಿ
ಮಹಾ ಪ್ರವಾಹ ಪೊರೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆಯದೇ ತನ್ನ ತೊರೆಯದು ಪ್ರಿಯನ ರಾಧೆಯ ಪ್ರೀತಿಯ ರೀತಿ
***
Categories: ಕನ್ನಡ ಪುಟಗಳು
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ!
ಸೃಷ್ಟಿ! - ನಿಜವಾಗಿ ಆ ಮಗು ಜಗತ್ತಿನ ಒಂದು ಅದ್ಭುತ ಸೃಷ್ಟಿಯೇ! ಅವಳ ಚುರುಕುತನ, ಮುದ್ದು ಮಾತಿಗೆ ಸುದೀಪ ಬೆರಗಾಗಿದ್ದ. ಸೃಷ್ಟಿಯ ಬುದ್ಧಿ ಶಕ್ತಿ ಅಸಾಧಾರಣವಾಗಿರುವುದನ್ನು ಸುದೀಪ ಗಮನಿಸಿದ. ಅವಳ ಮಾತಿನಲ್ಲಿ ವಯಸ್ಸಿಗೆ ಮೀರಿದ ಪ್ರೌಢತೆ ಇತ್ತು. ಬಿಳುಪಾದ ಗುಂಡು ಮುಖದಲ್ಲಿ ಗಾಜಿನ ಗೋಲಿಯಂತಹ ನೀಲಿ ಕಣ್ಣುಗಳು! ಅರೆ ಈ ನೀಲಿ ಕಣ್ಣುಗಳು ಎಲ್ಲಿಂದ ಬಂದವು? ಯಾಮಿನಿ ಕಪ್ಪು ಕಂಗಳ ಚೆಲುವೆ. ಬಹುಶಃ ತಂದೆಯಿಂದ? ಉಹುಂ.. ಯಾಮಿನಿಯನ್ನು ಇನ್ನೊಬ್ಬನೊಡನೆ ಕಲ್ಪಿಸಿಕೊಳ್ಳುವುದೂ ಅವನಿಂದಾಗಲಿಲ್ಲ.
ತಟ್ಟನೆ ಅವನಿಗೊಂದು ಘಟನೆ ನೆನಪಾಯಿತು. ಒಂದು [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಕಥೆ ಬಗ್ಗೆ ಇಲ್ಲಿ ಮಾತಾಡೋಣ..
ಕಥೆ ಬಗ್ಗೆ ಮಾತು - ಕಥೆ ನಡೆಸಲು ಈಗಿರುವ “ಕಥೆ ಕಟ್ಟೋಣ ಬನ್ನಿ” ದಾರ ತುಂಬಾ ಉದ್ದವಾಗಿ ಬೆಳೆದಿರುವುದರಿಂದ, ಕಥೆ ಕಟ್ಟುವವರ ಅನುಕೂಲಕ್ಕೆಂದು ಈ ಹೊಸ ಸೂತ್ರ . ಬನ್ನಿ ಇಲ್ಲೇ ಮಾತಾಡಿ.
ಸುನಯನ , ಕನ್ನಿಕಾ ಪಾತ್ರಗಳು ಮರೆಯಾಗಿ, ಆ ಜಾಗದಲ್ಲಿ ಈಗ ಯಾಮಿನಿ, ಸೃಷ್ಟಿ ಎಂಬ ಮತ್ತೆರಡು ಸುಂದರ ಹೆಸರುಗಳುಳ್ಳ ಪಾತ್ರಗಳು ಅರಳಿ ನಿಂತಿವೆ.
ಮುಂದ….??
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಸ್ವಾಗತ!
Categories: ಇಂಗ್ಲೀಷ್ ಪುಟಗಳು, ಕನ್ನಡ ಪುಟಗಳು
ಸವಿ ನೆನಪಾಗಿ ಕಾಡುವ ಸುನಯನಾ…
ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಸುನಯನ ಮತ್ತೆ ಮತ್ತೆ ಕಾಡ ಹತ್ತಿದಳು….
***************************
“ಬನ್ನಿ ಒಳಗೆ” ….ಮನೆಯ ಮುಖ್ಯದ್ವಾರದ ಎರಡೂ ಬದಿಗೆ ಕೈ ಆನಿಸಿ ನಿಂತ ಸುನಯನ. ಹೊಳೆಯುವ ಕಣ್ಣು, ದುಂಡುಮುಖ, ಅರೆಬಿರಿದ ತುಟಿ, ತಿದ್ದಿದ ಹುಬ್ಬು, ಹಣೆಯನ್ನು ಸ್ವಲ್ಪವೇ ಸ್ವಲ್ಪ ಆವರಿಸಿದ್ದ ಮೋಹಕ ಮುಂಗುರುಳು, ಸ್ನಿಗ್ಧನಗು… ಮತ್ತದೆಲ್ಲಕ್ಕೂ ಕಳಶವಿಟ್ಟಂತಿದ್ದ ಆಕೆಯ ಗುಳಿಬಿದ್ದ ಕೆನ್ನೆ….ಸುನಯನಳನ್ನು ಅದೇ ಮೊದಲ ಬಾರಿ ನೊಡುತ್ತಿದ್ದ ಸುದೀಪ ಸ್ತಭ್ದನಾದ…
“ಏನು ಹಾಗೆ ನೋಡ್ತಿದೀರಾ? ದಾಕ್ಷಿಣ್ಯ ಬೇಡ. ಬನ್ನಿ ಒಳಗೆ”…..
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಕಥೆ ಹು(ಕ)ಟ್ಟುವ ಸಮಯ…2
ಕತೆಗಾರರು:- sritri, ಶ್ರೀನಿಧಿ.ಡಿ.ಎಸ್ , ಸುನಾಥ, ಮನಸ್ವಿನಿ, ಜಗಲಿ ಭಾಗವತ, ಸುಶ್ರುತ ದೊಡ್ಡೇರಿ, shiv, ಜ್ಯೋತಿ, mala
ಸುದೀಪ ಬೆಂಗಳೂರಿಗೆ ವಾಪಸ್ಸಾಗಿ ವಾರವಾಗಿದೆ.ಈ ಬಾರಿಯೂ ಕನ್ನಿಕೆಯನ್ನು ಸೊಸೆ ಮಾಡಿಕೊಳ್ಳುವ ವಿಷಯದಲ್ಲಿ ಬಗ್ಗೆ ಯಾವ ಪ್ರಗತಿಯೂ ಕಾಣಬರದದ್ದಕ್ಕೆ ಸೀತಾಬಾಯಿಗೆ ನಿರಾಸೆ
ನಾರ್ಣಪ್ಪನವರಿಗೂ…ಆದರೆ ಅದನ್ನೆಲ್ಲಾ ರಂಪ ಮಾಡುವಷ್ಟು ಪೆದ್ದರಲ್ಲ ಸೀತಾಬಾಯಿ ಜೊತೆಗೆ ಮಗನ ಸುಕೋಮಲ ಮನಸ್ಸನ್ನು ನೋಯಿಸ ಬಾರದೆಂಬ ಎಚ್ಚರವೂ ಇದೆ.
ಅಂದು ಆಫೀಸಿಗೆ ಬಂದಾಗ ಕಂಡ ಹೊಸಮುಖ!
`ತುಂಬಾ ಎಫಿಶಿಯಂಟಂತೆ ಕಣಪ್ಪಾ.. ಬಾಸ್ ಹೊಗಳಿ ಅಟ್ಟಕ್ಕೇರಿಸಿದ್ದರು ಇವರು ಬರುವ ಮುಂಚೆನೇ…ನೀನು ಇರಲಿಲ್ಲವಲ್ಲಾ
ನಿಂಗೆ ವಿಶ್ಯ ಗೊತ್ತಿಲ್ಲಾ [...]
Categories: ಕನ್ನಡ ಪುಟಗಳು
ಅಮ್ಮ - ಬಿ. ಆರ್. ಲಕ್ಷ್ಮಣರಾವ್
ಕವಿ - ಬಿ. ಆರ್. ಲಕ್ಷ್ಮಣರಾವ್
ಹಾಡು ಕೇಳಿ
ಅಮ್ಮ….
ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ಈ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ !
ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು
ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ !
* * * * * *
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಕಥೆ ಹು(ಕ)ಟ್ಟುವ ಸಮಯ…
ಕತೆಗಾರರು:
—————————————————————————————————————————-
’ಈ ಬೆಂಗಳೂರಿನ ಹೊಗೆ, ಧೂಳು ಕುಡಿದು ಸಾಕಾಗಿದೆ ಕಣ್ರೊ. ಒಂದು ಹದಿನೈದು ದಿನಗಳಾದರೂ ಊರಿನಲ್ಲಿ ನೆಮ್ಮದಿಯಾಗಿದ್ದು ಬರುತ್ತೀನಿ’- ಎಂದು ಗೆಳೆಯರಿಗೆಲ್ಲಾ ಹೇಳಿ ಬಂದಿದ್ದ ಸುದೀಪನಿಗೆ ಎರಡನೆಯ ದಿನಕ್ಕೇ ಬೆಂಗಳೂರು ನೆನಪಾಗತೊಡಗಿತ್ತು. ’ಈ ಬೆಂಗಳೂರಿನ ಗುಣವೇ ಹಾಗೆ. ಒಮ್ಮೆ ಈ ಮಾಯಾನಗರಿ ಹೊಕ್ಕವರಾರು ಹೊರಗೆ ಹೋಗಲು ಬಯಸುವುದಿಲ್ಲ. ಈ ಊರನ್ನು ಮೇಲೆ ದೂರುತ್ತಲೇ ಒಳಗೇ ಪ್ರೀತಿಸತೊಡಗುತ್ತಾರೆ’- ಎಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಹುಟ್ಟಿ ಬೆಳೆದು, ಅದನ್ನೇ ಜಗತ್ತೆಂದು ಭಾವಿಸಿಕೊಂಡಿರುವ ಗೆಳೆಯ ಕಿಟ್ಟಿ ಹೇಳುತ್ತಿದ್ದ ಮಾತು ನಿಜವೆನ್ನಿಸಿತು. ಅಲ್ಲಿದ್ದಾಗ ಪೇಪರ್ ಓದಲೂ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಕತೆ ಕಟ್ಟೋಣ ಬನ್ನಿ..
ಕನ್ನಡ ಆಡಿಯೋ ಸಮುದಾಯದಲ್ಲಿ ಹೀಗೊಂದು ಆಟವಿದೆ. ಅದು ಕತೆ ಬರೆಯುವ ಆಟ. ಕತೆಯನ್ನು ಸಾಲಿನಿಂದ ಸಾಲಿಗೆ ಮುಂದುವರೆಸುವ ಆಟ. ಒಂದೇ ಕತೆಯನ್ನು ಹೆಣೆಯುವ ಹಲವಾರು ಕತೆಗಾರರು. ನನಗೆ ತುಂಬಾ ಇಷ್ಟದ ಆಟವಿದು. ಅದೇ ರೀತಿ ನಾವೂ ಇಲ್ಲೊಂದು ಕತೆ ಬರೆಯೋಣವೇ? ನೀವು ಕಾಮೆಂಟುಗಳ ರೂಪದಲ್ಲಿ ಮುಂದುವರೆಸುವ ಭಾಗವನ್ನು ನಾನು ಕತೆಗೆ ಜೋಡಿಸುತ್ತಾ ಹೋಗುತ್ತೇನೆ.
ಕತೆ ಸುಗಮವಾಗಿ ಸಾಗಲು ಕೆಲವು ನಿಯಮಗಳನ್ನು ತಿಳಿಸುತ್ತೇನೆ. ಆದರೆ ಯಾವುದೂ ಕಡ್ಡಾಯವಲ್ಲ!
* ಕತೆಯ ಗಾತ್ರ - ೪-೫ ಪುಟಗಳು
* ಕತೆ ಮುಂದುವರೆಸಿಕೊಂಡು ಹೋಗುವವರು ಕನಿಷ್ಟ ೩-೪ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ತೂಗು ಮಂಚ - ಎಚ್.ಎಸ್.ವೆಂಕಟೇಶ್ ಮೂರ್ತಿ
ಕವಿ - ಎಚ್.ಎಸ್.ವೆಂಕಟೇಶ್ ಮೂರ್ತಿ
ಸಂಗೀತ - ಸಿ. ಅಶ್ವಥ್
ಗಾಯಕಿ - ರತ್ನಮಾಲಾ ಪ್ರಕಾಶ್
ಆಲ್ಬಂ - “ತೂಗು ಮಂಚ”
ಹಾಡು ಕೇಳಿ
ತೂಗು ಮಂಚದಲ್ಲಿ ಕೂತು
ಮೇಘಶಾಮ ರಾಧೆಗಾತು
ಆಡುತಿಹನು ಏನೋ ಮಾತು
ರಾಧೆ ನಾಚುತಿದ್ದಳು
ಸೆರಗ ಬೆರಳಿನಲ್ಲಿ ಸುತ್ತಿ
ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ
ಕಣ್ಣ ಮುಚ್ಚುತ್ತಿದ್ದಳು
ಮುಖವ ಎದೆಯ ನಡುವೆ ಒತ್ತಿ
ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಒತ್ತಿ
ಕಮ್ಮನುಸಿರ ಬಿಟ್ಟಳು
ಸೆರಗು ಜಾರುತಿರಲು ಕೆಳಗೆ
ಬಾನು ಭೂಮಿ ಮೇಲು ಕೆಳಗೆ
ಅದುರುತಿರುವ ಅಧರಗಳಿಗೆ
ಬೆಳ್ಳಿ ಹಾಲ ಬಟ್ಟಲು
ಚಾಚುತಿರಲು ಅರಳಿದರಳು
ಯಮುನೆಯೆಡೆಗೆ ಚಂದ್ರ ಬರಲು
ಮೇಲೆ ತಾರೆಗಣ್ಣ ಹೊರಳು
ಹಾಯಿ ದೋಣಿ ತೇಲಿತು
ತನಗೆ ತಾನೇ ತೂಗುಮಂಚ
ತಾಗುತ್ತಿತ್ತು ದೂರದಂಚ
ತೆಗೆಯೊ ಗರುಡ ನಿನ್ನ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಜ್ವರ..ಒಂಥರ ಜ್ವರ..
ಜ್ವರ, ನೆಗಡಿಯ ಕೆಟ್ಟ ಪರಿಣಾಮಗಳು ಎಲ್ಲರಿಗೂ ತಿಳಿದೇ ಇರುತ್ತವೆ. ಆದರೆ ನೀವು ಕೆಟ್ಟದರಲ್ಲಿಯೂ ಒಳ್ಳೆಯದನ್ನೇ ಹುಡುಕುವ ಆಶಾವಾದಿಯಾಗಿದ್ದರೆ, ಜ್ವರದಲ್ಲೂ ಕೆಲವು ಪ್ರಯೋಜನಗಳನ್ನು ಕಾಣಬಹುದು. ಕಳೆದೆರಡು-ಮೂರು ದಿನಗಳು ಜ್ವರದ ಕುಲುಮೆಯಲ್ಲಿ ಬೇಯುತ್ತಿದ್ದಾಗ, ಮನಸ್ಸಿನಲ್ಲಿಯೇ ನಾನು ಜ್ವರದ ಪಾಸಿಟಿವ್ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೆ. ಮರೆಯುವ ಮುನ್ನ, ನೆನಪಿರುವುದನ್ನು ಬರಹಕ್ಕಿಳಿಸಿ ಬಿಡುತ್ತೇನೆ. ನಿಮ್ಮ ಅನುಭವಕ್ಕೆ ಬಂದಿರುವ ಸಂಗತಿಗಳೇನಾದರೂ ಇದ್ದರೆ ಈಗಲೇ ತಿಳಿಸಿ. ಜ್ವರ ಬರುವ ತನಕ ಕಾಯಬೇಡಿ!
* ಹಾಡ ಹಗಲೇ ಮೈತುಂಬಾ ಹೊದ್ದು ಮಲಗಿದಾಗ ಪಾಪಪ್ರಜ್ಞೆ ಕಾಡುವುದಿಲ್ಲ. ಜ್ವರ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
ಬಾ ಮಲ್ಲಿಗೆ - ಚೆನ್ನವೀರ ಕಣವಿ
ಸಾಹಿತ್ಯ - ಚೆನ್ನವೀರ ಕಣವಿ
ಸಂಗೀತ - ಸಿ.ಅಶ್ವಥ್
ಗಾಯಕರು - ಶ್ರೀನಿವಾಸ ಉಡುಪ, ಇಂದು ವಿಶ್ವನಾಥ್
ಹಾಡು ಕೇಳಿ
ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ
ಇಳಿಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ
ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು
ಉಸಿರುಸಿರಿಗೂ ತಂಪೆರಚಿದೆ ನಿನ್ನೆದೆ ಪರಿಮಳವು
ತಿಂಗಳ ತನಿವೆಳಕಲಿ ಮೈದೊಳೆದಿಹ ಮನದನ್ನೆ
ಮಂಗಳವೀ ಮನೆಯಂಗಳ ಚೆಂಗಲವೆಯ ಚೆನ್ನೆ
ಹಿತವಾಗಿದೆ ಮೆಲ್ಲಲರುಲಿ ಹಿತವಾಗಿದೆ ಮೌನ
ಜೊತೆಗೂಡುತ ಮಾತಾಡಿವೆ ಅರೆನಿದ್ದೆಯೊಳೇನ?
ಲೋಕದ ಮೈನೋವಿಗೆ ಶ್ರೀಗಂಧದ ತನಿಲೇಪ
ಆಕಾಶದ ಗುಡಿಯಿಂದಲಿ ಹೊರ ಸೂಸಿದ ಧೂಪ!
ಒಳಿತೆಲ್ಲವೂ ಬೆಳಕಾಯಿತು ಬಾನ್ ಕರೆಯಿತು ಜೇನು
ಆನಂದದ ಕಡಲಾಳದಿ ನಾವಾದೆವೇ ಮೀನು
ಎವೆಯಿಕ್ಕದೆ ಮಿನುಗುತ್ತಿದೆ ಚಿಕ್ಕೆಯ ಹನಿ ದೀಪ
ತಮ್ಮಷ್ಟಕೆ [...]
Categories: ಕನ್ನಡ ಪುಟಗಳು
