ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಹರಿದಾಸ ಸಂಪದ

Syndicate content
URL: http://haridasa.in
Updated: 27 min 51 sec ago

ಸಾರಿ ಬಂದನೆ ಪ್ರಾಣೇಶ ಬಂದನೆ

1 hour 23 min ago

ರಾಗ ಹಿಂದೂಸ್ಥಾನಿ ಕಾಪಿ/ಅಟ್ಟ ತಾಳ

ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ ||

ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು
ಧೀರನು ವಯ್ಯಾರದಿಂದ || ಅನು ಪಲ್ಲವಿ ||

ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ
ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ ||  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ನೋಡಿರಯ್ಯ ಹನುಮಂತನ ಮಹಿಮೆಯ

1 hour 30 min ago

ರಾಗ ಶಂಕರಾಭರಣ/ಚಾಪು ತಾಳ

ನೋಡಿರಯ್ಯ ಹನುಮಂತನ ಮಹಿಮೆಯ
ಬೇಡಿರೋ ವರಗಳನು || ಪಲ್ಲವಿ ||

ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ
ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ ||

ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಕಂದನ ಕಾಣಿರೇನೆ ಗೋಪಿಯ ಕಂದ

3 hours 58 min ago

ರಾಗ ಸಾವೇರಿ/ಚಾಪು ತಾಳ

ಕಂದನ ಕಾಣಿರೇನೆ ಗೋಪಿಯ ಕಂದ || ಪಲ್ಲವಿ ||

ಕಂದನಲ್ಲವೆ ಎನ್ನ ಕುಂದಣದರಗಿಣಿಯೆ || ಅನು ಪಲ್ಲವಿ ||

ಉಂಗುರನಿಟ್ಟಿದ್ದೆ ಉಡಿದಾರ ಕಟ್ಟಿದ್ದೆ
ಬಂಗಾರದ ಟೊಪ್ಪಿಗೆ ತಲೆಯ ಮೇಲಿಟ್ಟ || ೧ ||

ರೊಟ್ಟಿಯ ಸುಟ್ಟಿದ್ದೆ ತುಪ್ಪವ ಕಾಸಿದ್ದೆ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ತೆರಳಿದರು ಹರಿಪುರಕಿಂದು

7 hours 5 min ago

ತೆರಳಿದರು ಹರಿಪುರಕಿಂದು || ಪಲ್ಲವಿ ||

ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ ||

ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ
ಮುಕ್ತಿಗೈದಿದರು ಕೇಳಿ ಬುಧಜನರು || ೧ ||

ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ
ಶರೀರವನಿರಿಸಿ ಅನಾಥರನು ಹರಿಸಿ || ೨ ||  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಗುರುವಿನ ಗುಲಾಮನಾಗುವ

Wed, 2008-11-26 23:25

ಪಲ್ಲವಿ:

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ

ಚರಣ:

1:

ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳ್ದರಿಲ್ಲ ಧೀರನಾಗಿ ತಾ ಪೇಳಿದರಿಲ್ಲ

2:  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ರಂಗ ಬಂದ ಮನೆಗೆ

Wed, 2008-11-26 23:12

ಪಲ್ಲವಿ:

ರಂಗ ಬಂದ ಮನೆಗೆ ಶೃಂಗಾರ ನೋಡಿರೋ
ಹಿಂಗದಂಥ ಬಡತನ ಭಂಗವಾಗಿ ಹೋಯಿತೋ

ಚರಣಗಳು:

ಮಾನಾಭಿಮಾನವ ಬಿಟ್ಟು ನಾನಾರಣ್ಯ ತಿರುಗಿದರೆ
ಗೇಣು ಅರಿವೆ ಉಟ್ಟೇನೆನಲು ಹುಟ್ಟು ದೊರೆಯದು
ದಾನವಾಂತಕ ರಂಗ ಬರಲು ನಾನಾ ಪರಿಯ ಪಟ್ಟವಾಳಿ
ತಾನೇ ಬಂದು ಮನೆಯೊಳು ನಿದಾನವಾಯಿತೋ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ರಂಗ ಕೊಳಲಲೂದಲಾಗಿ

Tue, 2008-11-25 08:48

ರಂಗ ಕೊಳಲನೂದಲಾಗಿ. ರಾಗ: ಆರಭಿ. ಏಕ ತಾಳ.

ಪಲ್ಲವಿ:

ರಂಗ ಕೊಳಲನೂದಲಾಗಿ ಮಂಗಳಮಯವಾಯಿತು ಧರೆ
ಜಗಂಗಳು ಚೈತನ್ಯ ಮರೆದು ಅಂಗ ಪರವಶವಾದುವು

ಚರಣ

1:

ತೀಡಿದ ಮಾರುತ ಮಂದಗತಿಗೈದ ಪಾಡಿದ ಅಲರು ಬಲ ಗೊಂಚಲು ಬಿಡೆ
ಪಾಡಲೊಲ್ಲವಳಿ ಕುಲಗಳು ಪಾಡಿದ ಮಾಮರ ಚಿಗುರೊಡೆಯದು  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಅಂಗನೆಯರೆಲ್ಲ ನೆರೆದು

Tue, 2008-11-25 08:44

ಪಲ್ಲವಿ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು

ಚರಣ

1:

ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ
ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು

2:  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

Tue, 2008-11-25 03:49

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು.

ಮೊದಲಿಗೆ ಈ ಹಾಡನ್ನು ನೋಡೋಣ:  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಕರುಣಿಸೋ ರಂಗಾ

Thu, 2008-11-20 20:45

ರಚನೆ - ಪುರಂದರದಾಸರು

ಕರುಣಿಸೋ ರಂಗಾ ಕರುಣಿಸೋ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ||

ರುಕುಮಾಂಗದನಂತೆ ವ್ರತವ ನಾನರಿಯೆನೊ
ಶುಕ ಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆನೊ ||೧||  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ

Wed, 2008-11-19 06:11

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ ಹರಿಯೆ ಗತಿ ಸುರಪಸುರಾದಿಗಳಿಗೆ

ಚರಣ

1:
ರುಕ್ಮಿಣೀ ದೇವಿಯ ಶಿಶುಪಾಲಗೀವೆನೆಂದು ರುಕ್ಮ ಸಂಭ್ರಮಿಸಲು ಕೃಷ್ಣ ಬಂದು
ಸಕಲ ರಾಯರುಗಳು ಸನ್ನದ್ಧರಾಗಿರೆ ರುಕುಮಿಣೀಯನು ತಂದು ವರಿಸಿ ಅಳಿದನಾಗಿ

2:  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಅಂಬೆಗಾಲಿಕ್ಕುತಲಿ ಬಂದ ಗೋವಿಂದ

Wed, 2008-11-19 00:51

ಪಲ್ಲವಿ:
ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಅನುಪಲ್ಲವಿ :

ಅಂಬುಜನಾಭ ದಯದಿಂದ ಎನ್ನ ಮನೆಗೆ

ಚರಣಗಳು:

ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿಬಂದ
ಕುಲನಾಶ ವನವಾಸ ನವನೀತಚೋರನಿವ ಲಲನೆಯರ ವ್ರತಭಂಗ ವಾಹನ ತುರಂಗ || 1||  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಎಂಥವನೆಂಥವನೆ ರಂಗಯ್ಯ

Wed, 2008-11-19 00:47

ಪಲ್ಲವಿ:
ಎಂಥವನೆಂಥವನೆ ರಂಗಯ್ಯ ಎಂಥವನೆಂಥವನೆ

ಚರಣ:

೧:
ಆಗಮವನು ತಂದವನೆ ರಂಗ
ಬೇಗದಿ ಗಿರಿಯ ಪೊತ್ತವನೆ
ಮೂಗಿಂದ ಭೂಮಿಯನೆತ್ತಿದನೆ ಶಿಶು
ಕೂಗಲು ಕಂಭದಿಂದೊದಗಿದನೆ ಕೃಷ್ಣ

೨:
ಧರಣಿಯ ಈರಡಿ ಮಾಡಿದನೆ ಭೂ-
ಸುರನಾಗಿ ಪರಶುವ ಧರಿಸಿದನೆ
ಭರದಿ ಕೋಡಗ ಹಿಂಡ ಕೂಡಿದನೆ ಫಣಿ-  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಮಂಗಳಂ ಜಯ ಮಂಗಳಂ

Wed, 2008-11-19 00:44

ಮಂಗಳಂ ಜಯ ಮಂಗಳಂ ಜಯ ಮಂಗಳಂ ಜಯ ಮಂಗಳಂ ||ಪಲ್ಲವಿ||

ಚರಿಸುವ ಜಲದಲ್ಲಿ ಮತ್ಸ್ಯಾವತಾರಗೆ
ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹಾವತಾರಗೆ
ತರಳನ್ನ ಕಾಯ್ದಂಥ ನರಸಿಂಹಗೆ ||೧||

ಭೂಮಿಯ ದಾನವ ಬೇಡಿದವಗೆ
ಆ ಮಹಾಕ್ಷತ್ರಿಯರ ಗೆಲಿದವಗೆ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಇವಗೇಕೆ ಪರಿಮಳ ?

Wed, 2008-11-19 00:42

ಪಲ್ಲವಿ:

ಇವಗೇಕೆ ಪರಿಮಳ ಇವಗೇಕೆ ಶೃಂಗಾರ ?

ಅನುಪಲ್ಲವಿ:

ನವನೀತ ಚೋರ ನಾರುವ ಗೊಲ್ಲಗೆ ?

ಚರಣ:

ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ವಾಟ?
ತಲೆದೋರುವವಗೇಕೆ ದಟ್ಟ ಪುನುಗು ?
ಬಲು ಕೇಶದವಗೇಕೆ ಬಾವನ್ನದಾ ಲೇಪ ?
ಸಲೆಕುರೂಪಿನವಗೇಕೆ ಮಂಡೆಸಾದು* ?  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಇವಗೇಕೆ ಶೃಂಗಾರ?

Wed, 2008-11-19 00:41

ಪಲ್ಲವಿ:

ಇವಗೇಕೆ ಶೃಂಗಾರ? ಇವಗೇಕೆ ಬಂಗಾರ?

ಅನುಪಲ್ಲವಿ:

ಕಾಡ ಕರಡಿಯಂತೆ ಪೋಲುವ ದೇಹಕ್ಕೆ

ಚರಣಗಳು:

ನೀರೊಳಗೆ ಮುಳುಗಿದವಗೆ ಪರಿಮಳ ಗಂಧವೇಕೆ ಭಾರ ಪೊತ್ತವಗೆ ಪನ್ನೀರು ಏಕೆ?
ಕೋರೆ ದಾಡೆಯ ಘೋರ ಮುಖಗೇಕೆ ಕನ್ನಡಿ ಕರುಳ ಹಾರ ಧರಿಸಿದವಕೆ ಹಾರ ಪದಕವೇಕೆ?  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಪಂಕಜ ಮುಖಿಯರೆಲ್ಲರು ಬಂದು

Wed, 2008-11-19 00:39

ಪಲ್ಲವಿ:
ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ
ಚರಣ:
1:

ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ
ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಶ್ಮೀ ನರಸಿಂಹಗಾರತಿ ಎತ್ತಿರೆ

2:  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಮಕುಟಕ್ಕೆ ಮಂಗಳ

Wed, 2008-11-19 00:38

ಮಕುಟಕ್ಕೆ ಮಂಗಳ ಮಚ್ಚಾವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ
ಸುಕಂಠಕ್ಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಗಗೆ

ವಕ್ಷಕ್ಕೆ ಮಂಗಳ ವಟು ವಾಮನನಿಗೆ
ಪಕ್ಷಕ್ಕೆ ಮಂಗಳ ಭಾರ್ಗವಗೆ
ಕಕ್ಷಕ್ಕೆ ಮಂಗಳ ಕಾಕುತ್ಸ ರಾಮಗೆ
ಕುಕ್ಷಿಗೆ ಮಂಗಳ ಕೃಷ್ಣರಾಯಗೆ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ?

Wed, 2008-11-19 00:37

ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ?
ಕರಿಯ ಜಟೆಯ ಜೋಗಿಗಿಂತ ಉತ್ತಮನಲ್ಲವೇನೆ ?

ಜಲಧಿಯೊಳು ವಾಸವೇನೆ ಮನೆಗಳು ಇಲ್ಲವೆ ?
ಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೇ ?

ಮಂದರ ಗಿರಿಯ ಪೊತ್ತಿಹುದು ಏನು ಚಂದವೇ ?
ಕಂದನ ಒಯ್ದು ಅಡವಿಯಲ್ಲಿಡುವುದು ಯಾವ ನ್ಯಾಯವೇ ?  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಕಾಳಿಯ ಮರ್ದನ ರಂಗಗೆ ಹೇಳೆ

Wed, 2008-11-19 00:35

ಪಲ್ಲವಿ:

ಕಾಳಿಯ ಮರ್ದನ ರಂಗಗೆ ಹೇಳೆ ಗೋಪಮ್ಮ ಬುದ್ಧಿ
ಕೇಳಲೊಲ್ಲನು ಎನ್ನ ಮಾತನು

ಚರಣ:

ದಿಟ್ಟ ನೀರೊಳು ಕಣ್ಣ ಮುಚ್ಚನೆ ಹೋಗಿ ಬೆಟ್ಟಕೆ ಬೆನ್ನಾತು ನಿಂತನೆ
ಸಿಟ್ಟಲಿ ಕೋರೆದಾಡೆ ತಿವಿದನೆ ಅಹ ಗಟ್ಟಿ ಉಕ್ಕನು ಒಡೆದು ಬಂದನೆ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ
1234next ›last »

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator