ವಾರ್ತಾಭಾರತಿ
‘ಇತ್ತುಗಳ ಧ್ವಜ'ವನ್ನು ಇನ್ನೆಷ್ಟು ದಿನ ಎತ್ತಿ ಹಿಡಿಯುವುದು?
ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ. ಹಲವು ದಶಕಗಳ ಹೋರಾಟಕ್ಕೆ, ಚಳವಳಿಗೆ ನ್ಯಾಯ ದೊರಕಿದೆ. ಕನ್ನಡ ಭಾಷೆಯ ಹಿರಿಮೆಯನ್ನು ದೇಶ ಮಾನ್ಯ ಮಾಡುವುದೆಂದರೆ, ಕನ್ನಡದ ಬದುಕು, ಸಂಸ್ಕೃತಿಯನ್ನು ಎತ್ತಿ ಹಿಡಿದಂತೆ. ಒಂದು ಭಾಷೆಯ ಪ್ರಾಚೀನತೆಯನ್ನು ಒಪ್ಪಿಕೊಳ್ಳುವುದೆಂದರೆ, ಆ ಭಾಷೆಯ ಮೂಲಕ ಬದುಕಿದ ಸಮುದಾಯದ ಜನರ ಪ್ರಾಚೀನತೆಯನ್ನು ಒಪ್ಪಿಕೊಂಡಂತೆ. ಕನ್ನಡಿಗರಿಗೆ ನಿಜಕ್ಕೂ ಇದು ಹೆಮ್ಮೆಯ ಕ್ಷಣ. ಈ ನಾಡು ನುಡಿಯನ್ನು ಕಟ್ಟಿದ ಮಹನೀಯರಿಗೆ ಈ ಕ್ಷಣ ಅರ್ಪಣೆಯಾಗಬೇಕು. ಹರಿದು ಹಂಚಿಹೋಗಿದ್ದ ಕನ್ನಡವನ್ನು ಏಕೀಕರಣಗೊಳಿಸಿ, ಆಧುನಿಕತೆಗೆ ಪೂರಕವಾಗಿ ಕನ್ನಡವನ್ನು ಬೆಳೆಸಿದ ಮಹನೀಯರೇ ಕನ್ನಡದ ಶಾಸ್ತ್ರೀಯ ಸ್ಥಾನಮಾನಕ್ಕೆ ಅಡಿಗಲ್ಲು ಹಾಕಿದವರು. ಇಂದು ಶಾಸ್ತ್ರೀಯ ಸ್ಥಾನಮಾನ ತಮ್ಮಿಂದ ದೊರಕಿದೆ ಎಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಎದೆ ತಟ್ಟಿಕೊಳ್ಳುತ್ತಿದ್ದಾರೆ. ಮುಂದೆ ಓದಿ »
ಭಟ್ಕಳದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ: ಬೆಚ್ಚಿಬಿದ್ದ ಜನತೆ
ಭಟ್ಕಳ, ಅ.೩೧: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಮುನ್ನ ದಿನವಾದ ಶುಕ್ರವಾರ ಭಟ್ಕಳದಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದ್ದು ಇಲ್ಲಿನ ಮೌಲಾನ ಅಝಾದ್ ರಸ್ತೆಯಲ್ಲಿರುವ ಕಳಿ ಹನುಮಂತ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಯಾರೋ ಕಿಡಿಗೇಡಿಗಳು ಬಾಂಬ್‌ನ್ನು ಹೋಲುವಂತಹ ವಸ್ತುವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿಟ್ಟ ಪರಿಣಾವಾಗಿ ಮಧ್ಯಾಹ್ನದ ವರೆಗೂ ಇಲ್ಲಿನ ಜನರಲ್ಲಿ ಭಯ ಹಾಗೂ ಆತಂಕವು ಮನೆಮಾಡಿಕೊಂಡಿತ್ತು. ಮುಂದೆ ಓದಿ »
ಕಾಡು ಮೃಗಗಳ ಚರ್ಮ ಮಾರಾಟ ಜಾಲ ಪತ್ತೆ: ಐವರ ಬಂಧನ
ಕುಂದಾಪುರ, ಅ.೩೧: ವಿವಿಧ ಕಾಡುಮೃಗಗಳ ಚರ್ಮಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಕುಂದಾಪುರ ಪೊಲೀಸರು ಈ ಸಂಬಂಧ ಐದು ಮಂದಿ ಆರೋಪಿಗಳನ್ನು ಬಂಸಿ, ಅಪಾರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂದೆ ಓದಿ »
ಬೈಕ್ ಢಿಕ್ಕಿ: ವಿದ್ಯಾರ್ಥಿ ಬಲಿ
ಇನ್ನೋರ್ವನಿಗೆ ಗಂಭೀರ ಗಾಯ
ಕಾಸರಗೋಡು, ಅ.೩೧: ರಾಷ್ಟ್ರೀಯ ಹೆದ್ದಾರಿ ಸಮೀಪದ ಚೆಂಗಳ ಸಂತೋಷ್ ನಗರದಲ್ಲಿ ಬೈಕ್ ಮತ್ತು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಮುಂದೆ ಓದಿ »
ಮನಪಾ ಸಭೆ: ಗದ್ದಲಕ್ಕೆ ಕಾರಣವಾದ ‘ಮನಪಾದ ಅಭಿವೃದ್ಧಿ'
ಮಂಗಳೂರು, ಅ.೩೧: ಮನಪಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ವಿಷಯಗಳಿಗೆ ಸಂಬಂಸಿ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಆರೋಪ ಪ್ರತ್ಯಾರೋಪಗಳಲ್ಲೇ ನಿರತವಾಗಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ವ್ಯಾಪಕ ಚರ್ಚೆಗೆ ಅವಕಾಶ ದೊರೆಯದ ಮನಪಾದ ಅಭಿವೃದ್ಧಿ ಚರ್ಚೆ ಗದ್ದಲಕ್ಕೆ ಕಾರಣವಾದ ಘಟನೆ ಶುಕ್ರವಾರ ಮನಪಾ ಸಾಮಾನ್ಯ ಸಭೆಯಲ್ಲಿ ನಡೆಯಿತು. ಮುಂದೆ ಓದಿ »
ಮೊಳಗಿದ ಕನ್ನಡ ಡಿಂಡಿಮ: ಶಾಸ್ತ್ರೀಯ ಸ್ಥಾನಮಾನ ಘೋಷಣೆ
ಹೊಸದಿಲ್ಲಿ, ಅ.೩೧: ಕನ್ನಡದ ಹಲವು ದಶಕಗಳ ಕನಸು ನನಸಾಗಿದೆ. ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಣೆಗೆ ನಿರ್ಧರಿಸಲಾಗಿದೆ. ಕನ್ನಡ ಜನತೆಯ ಪಾಲಿಗೆ ಇದು ರಾಜ್ಯೋತ್ಸವದ ಕೊಡುಗೆಯಾಗಿದೆ. ಮುಂದೆ ಓದಿ »
ಜೈಲಿನಲ್ಲಿ ‘ಕೇಸರಿ ಭಯೋತ್ಪಾದನೆ': ಮಂಗಳೂರಿನಲ್ಲಿ ಭಾರೀ ಪ್ರತಿಭಟನೆ
ಮಂಗಳೂರು, ಅ.೩೧: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಹಾಗೂ ಅವರ ಸಹಚರರು ಸಹ ಕೈದಿಗಳ ಮೇಲೆ ನಡೆಸಿದ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಫಾರಂ ಫಾರ್ ಡಿಗ್ನಿಟಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಕಾರಿ ಕಚೇರಿಯ ಎದುರು ಇಂದು ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಮುಂದೆ ಓದಿ »
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕ
ಬೆಂಗಳೂರು, ಅ.೩೧: ಮೀರಾಜುದ್ದೀನ್ ಪಟೇಲ್‌ರ ನಿಧನದಿಂದ ತೆರವಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸಸ್ವಾಮಿಯವರನ್ನು ನೇಮಿಸಲಾಗಿದೆ. ಮುಂದೆ ಓದಿ »
ಕಾಶ್ಮೀರಿ ಕವಿ ರಾಹಿಗೆ ಜ್ಞಾನ ಪೀಠ ಪ್ರಶಸ್ತಿ
ಹೊಸದಿಲ್ಸಿ, ಅ.೩೧: ಕಾಶ್ಮೀರಿ ಭಾಷೆಯನ್ನು ಶ್ರೀಮಂತಗೊಳಿಸುವುದಕ್ಕಾಗಿ ನೀಡಿದ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಖ್ಯಾತ ಕಾಶ್ಮೀರಿ ಕವಿ ರಹ್ಮಾನ್ ರಾಹಿಯವರಿಗೆ ‘ಜ್ಞಾನಪೀಠ' ಪುರಸ್ಕಾರ ನೀಡಲಾಗುವುದು. ಮುಂದೆ ಓದಿ »
ಇಂದು ಮಂಗಳೂರು ಖಾಝಿಯಾಗಿ ಸಿ.ಎಎಂ.ಅಬ್ದುಲ್ಲಾ ಮುಸ್ಲಿಯಾರ್ ಅಕಾರ ಸ್ವೀಕಾರ
ಮಂಗಳೂರು, ಅ.೨೫: ಮಂಗಳೂರು ಖಾಝಿಯಾಗಿ ಸುಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ, ಅಲ್ಹಾಜ್ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕರವರು ಅ.೨೬ರಂದು ಅಕಾರ ಸ್ವೀಕರಿಸಲಿದ್ದು, ಈ ಸಂಬಂಧ ಸಿದ್ಧತೆಗಳು ಪೂರ್ಣಗೊಂಡಿವೆ. ಮುಂದೆ ಓದಿ »
ಅಸಮಾನತೆ, ದಬ್ಬಾಳಿಕೆಯನ್ನು ಮೆಟ್ಟಿ ನಿಂತ ಕೋಟಿ-ಚೆನ್ನಯ: ಆಚಾರ್ಯ
ಕಾರ್ಕಳ, ಅ.೨೫: ಸುಮಾರು ೪೫೦ ವರ್ಷಗಳ ಹಿಂದೆ ಅಸಮಾನತೆ, ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಅಮರರಾದ ತುಳು ನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಸತ್ಯ, ಶೌರ್‍ಯ, ಧರ್ಮದ ನಿತ್ಯ ಸ್ಮರಣೆ ಹಾಗೂ ತ್ಯಾಗ ಬಲಿದಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಕೋಟಿ ಚೆನ್ನಯ ಥೀಮ್ ಪಾರ್ಕ್‌ನ ಪರಿಕಲ್ಪನೆಯನ್ನು ಮಾಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ. ಮುಂದೆ ಓದಿ »
ಉಡುಪಿಯಲ್ಲಿ ಮಳೆ; ಸಿಡಿಲಿಗೆ ಅಪಾರ ಹಾನಿ
ಉಡುಪಿ, ಅ.೨೫: ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಯಿಂದಾಗಿ ಭಾರೀ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಮುಂದೆ ಓದಿ »
ಪೆಟ್ರೋಲ್ ಬೆಲೆ ಇಳಿಸಿ: ವರದರಾಜನ್
ಸಿಪಿಎಂನಿಂದ ಹೋರಾಟದ ಎಚ್ಚರಿಕೆ
ಮಂಗಲೂರು, ಅ.೨೫: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನಗಳ ಬೆಲೆಗಳು ಇಳಿದಿರುವ ಕಾರಣ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಶೀಘ್ರವೇ ಇಳಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಿಪಿಎಂ ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯ ಕೆ.ವರದರಾಜನ್ ಎಚ್ಚರಿಸಿದ್ದಾರೆ. ಮುಂದೆ ಓದಿ »
ಇಂದು ಮಂಗಳೂರು ಖಾಝಿಯಾಗಿ ಸಿ.ಎಎಂ.ಅಬ್ದುಲ್ಲಾ ಮುಸ್ಲಿಯಾರ್ ಅಕಾರ ಸ್ವೀಕಾರ
ಮಂಗಳೂರು, ಅ.೨೫: ಮಂಗಳೂರು ಖಾಝಿಯಾಗಿ ಸುಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ, ಅಲ್ಹಾಜ್ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕರವರು ಅ.೨೬ರಂದು ಅಕಾರ ಸ್ವೀಕರಿಸಲಿದ್ದು, ಈ ಸಂಬಂಧ ಸಿದ್ಧತೆಗಳು ಪೂರ್ಣಗೊಂಡಿವೆ. ಮುಂದೆ ಓದಿ »
ಮಾಜಿ ಸೇನಾಕಾರಿಗಳ ವಿಚಾರಣೆ
ಮಾಲೆಗಾಂವ್ ಸೋಟ: ಚುರುಕುಗೊಂಡ ತನಿಖೆ
* ಇನ್ನೋರ್ವ ‘ಸ್ವಾ'ಯ ಬಂಧನ ಸಾಧ್ಯತೆ * ಕೇಸರಿ ಭಯೋತ್ಪಾದನೆಯ ವಿರುದ್ಧ ವಿವಿಧೆಡೆ ಪ್ರತಿಭಟನೆ
ಹೊಸದಿಲ್ಲಿ, ಅ.೨೫: ಮಾಲೆಗಾಂವ್ ಸೋಟ ಪ್ರಕರಣದಲ್ಲಿ ಸಂಘಪರಿವಾರದ ಸಂಬಂಧದ ಕುರಿತು ತನಿಖೆ ಮುಂದುವರಿದಿದ್ದು, ಈ ಸಂಬಂಧ ಇನ್ನೊಬ್ಬ ‘ಸ್ವಾ'ಯನ್ನು ಮಧ್ಯಪ್ರದೇಶದ ಭೋಪಾಲದಿಂದ ಬಂಸುವ ಸಾಧ್ಯತೆಯಿದೆಯನ್ನಲಾಗಿದೆ. ಇದೇ ಸಂದರ್ಭದಲ್ಲಿ ಕೆಲವು ನಿವೃತ್ತ ಸೇನಾಕಾರಿಗಳು ಸೋಟದಲ್ಲಿ ಶಾಮಿಲಾಗಿರುವ ಕುರಿತಂತೆ ಮಾಹಿತಿ ಲಭಿಸತೊಡಗಿದೆ. ಮುಂದೆ ಓದಿ »
ಕಾಂಗ್ರೆಸ್‌ನ ಜತೆ ಮೈತ್ರಿಯಿಲ್ಲ: ಗೌಡ
ಬೆಂಗಳೂರು, ಅ.೨೫: ರಾಜ್ಯದ ೮ ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗಿನ ಮೈತ್ರಿಯ ಕುರಿತು ಇನ್ನು ಮುಂದೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟವಾಗಿ ಹೇಳಿದ್ದಾರೆ. ಮುಂದೆ ಓದಿ »
ಕ್ರೈಸ್ತ ಸನ್ಯಾಸಿನಿಗೆ ರಕ್ಷಣೆಯ ಭರವಸೆ
ಭುವನೇಶ್ವರ, ಅ.೨೫: ಅತ್ಯಾಚಾರಿಗಳನ್ನು ಗುರುತಿಸಲು ಸಹಕಾರ ನೀಡುವಂತೆ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿಯಲ್ಲಿ ಮನವಿ ಮಾಡಿರುವ ಒರಿಸ್ಸಾ ಸರಕಾರ ಆಕೆಗೆ ಸಂಪೂರ್ಣ ರಕ್ಷಣೆಯ ಭರವಸೆ ನೀಡಿದೆ. ಮುಂದೆ ಓದಿ »
ಜಾತ್ಯತೀ ಶಕ್ತಿಗಲೊಂದಿಗೆ ಹೊಂದಾಣಿಕೆ: ಪೃಥ್ವಿರಾಜ್ ಚೌಹಾಣ್
ಮೈಸೂರು, ಅ.೨೫: ರಾಜ್ಯ ವಿಧಾನ ಸಭೆಯ ೮ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಾತ್ಯತೀತ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪೃಥ್ವಿರಾಜ್ ಚೌಹಾಣ್ ತಿಳಿಸಿದ್ದಾರೆ. ಮುಂದೆ ಓದಿ »
ವರ ಕೊಟ್ಟವನನ್ನೇ ಸುಡ ಹೊರಟವರು
ಮಾಲೆಗಾಂವ್ ಮತ್ತು ಗುಜರಾತ್‌ನ ಮೋಡಸ್‌ಗಳಲ್ಲಿ ಸಂಭವಿಸಿದ ಬಾಂಬ್ ಸ್ಪೊಟಗಳಲ್ಲಿ ಮತ್ತೊಮ್ಮೆ ಸಂಘಪರಿವಾರದ ಕೈವಾಡ ಬಹಿರಂಗವಾಗುವ ಮೂಲಕ, ದೇಶದಲ್ಲಿ ಭಯೋತ್ಪಾದನೆ, ಉಗ್ರವಾದಗಳು ಸಂಸ್ಕೃತಿ ಯ ರೂಪವನ್ನು ಪಡೆದುಕೊಳ್ಳುತ್ತಿವೆ. ಮುಂದೆ ಓದಿ »
ಕೂಲಿ ಕೆಲಸ ಮಾಡುವವನಿಗೆ ಭಯೋತ್ಪಾದಕರ ನಂಟು ಹೇಗೆ ಸಾಧ್ಯ?
ಬಂಧಿತ ಬೋಳಂತೂರು ರಫೀಕ್‌ನ ಮನೆಯವರ ಅಸಹಾಯಕ ಪ್ರಶ್ನೆ
ಮಂಗಳೂರು, ಅ.೨೪: ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಅ.೧೪ರಂದು ಪೊಲೀಸರು ವಶಕ್ಕೆ ತೆಗೆದುಕೊಂಡ ಬಂಟ್ವಾಳ ತಾಲೂಕಿನ ಬೋಳಂತೂರು ರಫೀಕ್‌ರ ಕುಟುಂಬವು ಪೊಲೀಸರು ಒಡ್ಡಿರುವ ಬೆದರಿಕೆಯಿಂದಾಗಿ ಭಯದ ವಾತವರಣದಲ್ಲಿ ಬದುಕುತ್ತಿದ್ದು, ರಫೀಕ್ ಹೇಗಿದ್ದಾನೆ, ಎಲ್ಲಿದ್ದಾನೆ ಎಂದು ಸಂಬಂಧಪಟ್ಟವರಲ್ಲಿ ವಿಚಾರಿಸುವ ಗೋಜಿಗೂ ಅವರು ಹೋಗಿಲ್ಲ. ಮುಂದೆ ಓದಿ »
