ಇಂಡಿಯ ವಾಟರ್ ಪೋರ್ಟಲ್ - ಕನ್ನಡ
ಆಹೆಟ್ಟಿ - "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಚಿತ್ರ: ಕೇದಾರನಾಥ್, ಧಾರವಾಡ.
"ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
"ತಮ್ಮ..ಅದನೇನ್ ನೋಡ್ತಿ..ನಮ್ಮನೇನ್ ಕೇಳ್ತಿ..? ಒಂದ ಮಾತಿನ್ಯಾಗ ಹೇಳ್ಯಾ..?
- ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

ಆಹೆಟ್ಟಿ ಗ್ರಾಮದ ಕಮಲಮ್ಮನ ಮಾತುಗಳಿವು. ಕೇಳಿದ ನನಗೂ, ಗೆಳೆಯ ಛಾಯಾಪತ್ರಕರ್ತ ಕೇದಾರನಾಥ್ ಅವರಿಗೂ ಕರುಳು ಕಿತ್ತು ಬಂದಂತಹ ಅನುಭವ.
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಟ್ಟಕಡೆಯ ಹಳ್ಳಿ ಆಹೆಟ್ಟಿ (ಆಯಟ್ಟಿ). ಮೂರು ಸಾವಿರ ಜನಸಂಖ್ಯೆ. ಹದಿನೆಂಟುನೂರರಷ್ಟು ‘ಪ್ರೌಢ’ ಮತದಾರರನ್ನು ಹೊಂದಿರುವ ಗ್ರಾಮ. ಧಾರವಾಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ, ತೊಟ್ಟು ನೀರಿಗೂ ದೈನೇಸಿಯಾಗಿರುವ ಬಾಯಾರಿದ ಹಳ್ಳಿ. ಇಲ್ಲಿನ ಗ್ರಾಮಸ್ಥರ ದಾಹ ತೀರಿಸಿಕೊಳ್ಳುವ ಪರಿ ಶೋಚನೀಯ. ನಾಗರಿಕ ಸಮಾಜ ಮಾನವೀಯತೆಯ ನೆಲೆಯಲ್ಲಿ ಒಮ್ಮೆ ನಿಂತು ಯೋಚಿಸಬೇಕಾದಷ್ಟು ಗಂಭೀರ ಸ್ಥಿತಿ ಇಲ್ಲಿದೆ.
ಆಹೆಟ್ಟಿ ಗ್ರಾಮದ ಹೆಣ್ಣು ಮಕ್ಕಳು, ಗಂಡಸರು ತಮ್ಮ ಚಿಕ್ಕ ಮಕ್ಕಳೊಂದಿಗೆ ನೀರು ಹೊರುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ನಿತ್ಯ ೪-೬ ಕಿಲೋ ಮೀಟರ್ ದೂರ ಕ್ರಮಿಸಿ ಕುಡಿಯಲು ಕಲುಷಿತ ನೀರು ಒಗ್ಗೂಡಿಸುವುದೇ ಹರಸಾಹಸದ ಕೆಲಸ. ಗ್ರಾಮದ ಪಕ್ಕದಲ್ಲಿ ಹರಿದಿರುವ ‘ತುಪರಿ ಹಳ್ಳ’ ದಲ್ಲಿ ‘ಒರ್ತಿ’ ತೋಡಿ ಕಪ್ಪಾದ ನೀರನ್ನು ಪ್ಲಾಸ್ಟಿಕ್ ಬಿಂದಿಗೆಗಳಲ್ಲಿ ತಾಸುಗಟ್ಟಲೇ ತುಂಬಿಸುವುದು ಅವರಿಗೆ ಅನಿವಾರ್ಯ. ಹೊತ್ತುಕೊಂಡು, ಇಲ್ಲವೇ ಸೈಕಲ್, ಎತ್ತಿನ ಬಂಡಿ, ಕೈಗಾಡಿ, ಟ್ರ್ಯಾಕ್ಟರ್ ಹೀಗೆ ನೂರೊಂದು ರೀತಿಯಲ್ಲಿ ಬಣ್ಣದ ಪ್ಲಾಸ್ಟಿಕ್ ಕೊಡಗಳಲ್ಲಿ ಕಲುಷಿತ ನೀರು ‘ಕುಡಿಯಲು’ ಹೊತ್ತೊಯ್ಯದೇ ಉಪಾಯವಿಲ್ಲ.
ಈ ತುಪರಿಹಳ್ಳದಲ್ಲಿ ೮ ತಿಂಗಳು ಸಣ್ಣ ಗಟಾರಿನ ಗಾತ್ರದಲ್ಲಿ ಹರಿಯುವ ನೀರಿನ ಪರಿ ವರ್ಣಿಸಲು ನನ್ನಲ್ಲಿ ಶಬ್ದಗಳ ಕೊರತೆ ಕಾಡೀತು ಎಂಬ ಭಯವಿದೆ. ಉಪ್ಪಿನ ಬೆಟಗೇರಿ, ಇನಾಮಹೊಂಗಲ, ಹಾರೋ ಬೆಳವಡಿ ಹಾಗು ಶಿರೂರಗಳ ಮೂಲಕ ಹಾಯ್ದು ಬರುವ ಈ ಹಳ್ಳ, ಆಯಾ ಊರುಗಳ ಗಟಾರು ಮಲೀನವನ್ನು ಸಹ ಹೊತ್ತು ಆಹೆಟ್ಟಿಗೆ ಪೂರೈಸುತ್ತದೆ. ಇಂತಹ ಗಟಾರು ನೀರಿನ ಕೆರೆಯಲ್ಲಿ ಅಲ್ಲಲ್ಲಿ ‘ಒರ್ತಿ’ ಹೊಂಡಗಳನ್ನು ತೆರೆದು, ಮೂಗು ಮುಚ್ಚಿಕೊಂಡು ಜನ ನೀರನ್ನು ಬಿಂದಿಗೆಗಳಿಗೆ ಹಣಿಸಿಕೊಳ್ಳುತ್ತಾರೆ. ಹಾಗೆಯೇ, ಮೂಗು ಮುಚ್ಚಿಕೊಂಡು ಮನೆ ಮಂದಿಯೆಲ್ಲ ಕುಡಿಯುತ್ತಾರೆ! ಮುಂದೆ ಓದಿ »
(ಪುಟ ೨): "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಈ ಹಳ್ಳಿಯ ಜನ ಸದಾ ಒಂದಿಲ್ಲೊಂದು ಜಲಜನ್ಯ ಕಾಯಿಲೆಗಳಿಂದ ನರಳುತ್ತಲೇ ಇರುತ್ತಾರೆ. ವಾಂತಿ-ಬೇಧಿ, ಖೆಮ್ಮು, ಆಮಶಂಕೆ ಇಲ್ಲಿ ಎಲ್ಲರಿಗೂ ಖಾಯಂ. ಮಕ್ಕಳು, ಹೆಣ್ಣು ಮಕ್ಕಳು, ವಯೋವೃದ್ಧರು ಅತಿಸಾರ, ಅನಿಮೀಯಾ, ಅಶಕ್ತತೆ, ಮೂತ್ರಕೋಶದ ಹರಳು ಹಾಗು ಉದರ ಸಂಬಂಧಿ ರೋಗಗಳಿಂದ ನಿತ್ಯ ಪರಿತಪಿಸುತ್ತಿದ್ದಾರೆ. ಆಹೆಟ್ಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಸುಲಭ ಶೌಚಾಲಯ ವ್ಯವಸ್ಥೆ ಕೇಳುವಂತಿಲ್ಲ. ಕೇವಲ ಸರಕಾರಿ ಕಡತಗಳಲ್ಲಿ ಮಾಹಿತಿ ನೀಡಿದ್ದು, ಅಂಕಿ-ಅಂಶ ದಾಖಲಿಸಿದ್ದು ಮಾತ್ರ ಹೌದು. ಮಾಹಿತಿ ನೀಡುವುದಕ್ಕೂ, ತಿಳಿವಳಿಕೆ ಮೂಡಿಸಿ ಯೋಜನೆಗಳು ಹಾಗು ಹಕ್ಕಿನ ಪ್ರತಿ ಅರಿವು ಮೂಡಿಸುವುದು ಬೇರೆ! ಇಲ್ಲಿ ಆ ಪ್ರಮೇಯ ಸರಳವಾಗಿ ಸಾಧಿಸಬಹುದಾಗಿದೆ?
ಆಹೆಟ್ಟಿ ಗ್ರಾಮದ ಹಿರಿಯರಾದ ನಿಂಗಪ್ಪ ನಿಂಗಪ್ಪ ದೊಡ್ಮನಿ ಹಾಗು ಮಲಕಾಜಪ್ಪ ಮಹಾದೇವಪ್ಪ ಜಗದಣ್ಣವರ್ ಅವರು ಅಭಿಪ್ರಾಯ ಬೇರೆಯೇ ಇದೆ. ಇಲ್ಲಿನ ಗ್ರಾಮ ಪಂಚಾಯ್ತಿಗೆ ಪರಿಹಾರಗಳು ಬೇಕಿಲ್ಲವಂತೆ. (ಪಂಚಾಯತ್ ರಾಜ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ? ಎಷ್ಟು ಸ್ಥಳೀಯ ರಾಜಕಾರಣದಲ್ಲಿ ನರಳುತ್ತಿದೆ? ಎಂಬುದಕ್ಕೆ ತಾಜಾ ಉದಾಹರಣೆ!) ಇಲ್ಲಿನ ಸದಸ್ಯರಿಗೆ ತಾಳ-ಮೇಳ ಇಲ್ಲ. ಸಣ್ಣ ಹಾಗು ಮಧ್ಯಮ ಹಿಡುವಳಿ ಕಮತದವರಿಗೆ (೫ ಎಕರೆಗಿಂತ ಕಡಿಮೆ ಹೊಲ) ತಿಂಗಳಿಗೆ ೩೦/- ರುಪಾಯಿ ಹಾಗು ಹೆಚ್ಚು ಹಿಡುವಳಿ (೫ ಎಕರೆ ಮೇಲ್ಪಟ್ಟು) ತಿಂಗಳಿಗೆ ೬೦/- ರುಪಾಯಿ ನಳದ ಬಿಲ್ ಆಕರಿಸಲಾಗುತ್ತದೆ. ಆದರೆ ಬಹುತೇಕರು ಸಾವಿರಾರು ರುಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಾರಿಯ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ (ನವಲಗುಂದ ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಸಿ, ಆಯ್ಕೆಯಾಗಿದ್ದಾರೆ.) ಶಾಸಕ ಶಂಕರ ಪಾಟೀಲ್ ಮನೇನಕೊಪ್ಪ ಗ್ರಾಮಕ್ಕೆ ೧೦ ಸಾವಿರ ರುಪಾಯಿ ವಯುಕ್ತಿಕ ಧನ ಸಹಾಯ ಮಾಡಿ ಒಂದು ತಿಂಗಳ ಅವಧಿಗೆ ಕುಡಿಯುವ ನೀರು ಒದಗಿಸಿದ್ದರು! ಮತ್ತೆ ಯಥಾ ಸ್ಥಿತಿ. ಹೆಣ್ಣು ಮಕ್ಕಳ ಕರ್ಮ. ಮುಂದೆ ಓದಿ »
ಕ್ಲೀನ್ ಇಂಡಿಯಾ
WES-Net India ರವರು ಆಯೋಜಿಸಿದ್ದ "ಕ್ಲೀನ್ ಇಂಡಿಯ ಫೋಟೋ ಕಾಂಟೆಸ್ಟ್ - ೨೦೦೮"ರ ಸ್ಪರ್ಧೆಯಲ್ಲಿ consolation prize ಪಡೆದ ಚಿತ್ರ.
ಹೆಚ್ಚಿನ ಮಾಹಿತಿ ಇಲ್ಲಿದೆ.
ಫೋಟೋ: Dinesh Chandra
ಬತ್ತಿದ ಕೆರೆಯಲ್ಲಿ ಮಳೆ ನೀರು ಬಿತ್ತಿ
[ ಲೇಖನ ಸಂಪದ ಸಮುದಾಯದಿಂದ, ಲೇಖಕರ ಅನುಮತಿ ಪಡೆದು ತೆಗೆದುಕೊಳ್ಳಲಾಗಿದೆ.
ಲೇಖಕರು: ಚಾಮರಾಜ ಸವಡಿ ]
ಅದು ೨೦೦೩ರ ಸಮಯ.
ಗದಗ ಜಿಲ್ಲೆ ರೋಣ ತಾಲೂಕಿನ ಹಾಲಕೆರೆ ಅನ್ನದಾನಸ್ವಾಮಿಗಳು ಒಂದು ವಿಷಯದ ಬಗ್ಗೆ ಬಹಳ ಚಿಂತಿಸಿದ್ದರು. ನರೇಗಲ್‌ನ ತಮ್ಮ ಸಂಸ್ಥೆಯ ಪ್ರೌಢಶಾಲೆ ಮತ್ತು ಕಾಲೇಜುಗಳ ಬಳಕೆಗಾಗಿ ಕೊರೆಸಿದ್ದ ಏಳು ಕೊಳವೆ ಬಾವಿಗಳ ಪೈಕಿ ಐದು ಬಿಕ್ಕತೊಡಗಿದ್ದವು. ಇನ್ನೆರಡು ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ಕೇವಲ ಅರ್ಧ ಇಂಚು ನೀರು ಯಾವ ಕ್ಷಣದಲ್ಲಾದರೂ ಕಡಿಮೆಯಾಗುವ ಲಕ್ಷಣವಿತ್ತು. ಸತತ ಮೂರನೇ ವರ್ಷ ಬರ ಪರಿಸ್ಥಿತಿ ಎದುರಿಸುತ್ತಿದ್ದ ಈ ಪ್ರದೇಶದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಹೇಗೆ ನೀರು ಪೂರೈಸುವುದು? ಎಂದು ಸ್ವಾಮಿಗಳು ಚಿಂತಿತರಾಗಿದ್ದರು.
ಇಂಥದೇ ಚಿಂತೆ ನರೇಗಲ್ಲಿನ ದೊಡ್ಡ ಕೆರೆಯಲ್ಲಿ ಕೊಳವೆ ಬಾವಿ ತೋಡಿಸಿದವರಿಗೂ ಕಾಡತೊಡಗಿತ್ತು. ಎರಡು ದಶಕಗಳ ಹಿಂದೆ ಇಡೀ ಪಟ್ಟಣದ ನೀರಿನ ಅಗತ್ಯ ಪೂರೈಸಿ, ನೂರಾರು ಎಕರೆಗಳ ಪೈರಿಗೆ ಒಂದು ಅವಧಿಗೆ ನೀರುಣಿಸುತ್ತಿದ್ದ ನರೇಗಲ್ಲಿನ ಕೆರೆಯಲ್ಲಿ ಹೂಳು ತುಂಬಿ, ಮಳೆಯಿಲ್ಲದೇ ಬತ್ತಿಹೋಗಿತ್ತು. ಕೆರೆ ಅಂಗಳದಲ್ಲಿ ಕೊಳವೆ ಬಾವಿ ಕೊರೆಸಿ, ನೀರು ಮೊಗೆಯುವ ಉದ್ದೇಶ ಕೂಡ ವಿಫಲವಾಗುವ ಲಕ್ಷಣಗಳು ಕಂಡಾಗ ಈ ನೀರನ್ನೇ ನೆಚ್ಚಿಕೊಂಡವರು ಹತಾಶರಾಗಿದ್ದರು. ಮುಂದೆ ಓದಿ »
painting competition at Dharwad on 14th November
ªÁlgÀ °lgÀ¹ ¥sËAqÉñÀ£ï, zÉñÀ¥ÁAqÉ ¥sËAqÉñÀ£ï ºÀħâ½î
¸ÀÆÌ¯ï D¥sï Dlìð ºÁUÀÆ ¸ÀgÀPÁj ¥ËæqsÀ±Á¯É zsÁgÀªÁqÀ
EªÀgÀ ¸ÀAAiÀÄÄPÀÛ D±ÀæAiÀÄzÀ°è
ªÀÄ¼É ¤ÃgÀ ºÀ§â ºÁUÀÆ ªÀÄPÀ̼À ¢£ÁZÀgÀuÉ CAUÀªÁV
¥ËæqsÀ±Á¯Á ªÀÄPÀ̽UÁV avÀæPÀ¯Á ¸ÀàzsÉð
²Ã¶ðPÉ: “£Á¼ÉUÁV ¤ÃgÀÄ”
¸ÀܼÀ : ¸ÀgÀPÁj ¥sËæqsÀ±Á¯É, Dgï. J£ï. ±ÉnÖ QæÃqÁAUÀtzÀ JzÀÄgÀÄ zsÁgÀªÁqÀ ಮುಂದೆ ಓದಿ »
ಕ್ಲೀನ್ ಇಂಡಿಯಾ
WES-Net India ರವರು ಆಯೋಜಿಸಿದ್ದ "ಕ್ಲೀನ್ ಇಂಡಿಯ ಫೋಟೋ ಕಾಂಟೆಸ್ಟ್ - ೨೦೦೮"ರ ಸ್ಪರ್ಧೆಯಲ್ಲಿ consolation prize ಪಡೆದ ಚಿತ್ರ.
ಹೆಚ್ಚಿನ ಮಾಹಿತಿ ಇಲ್ಲಿದೆ.
ಫೋಟೋ: Sourav Karmakar
ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!
‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದು ಕಲ್ಲು ಹೋಯಿತಷ್ಟೇ?
ಇಂತಹುದೇ ಪ್ರಯೋಗ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು. ಪತ್ರಿಕೋದ್ಯಮದ ಆಯ್ದ ವಿದ್ಯಾರ್ಥಿ ಸಮುದಾಯವನ್ನು ಒಂದೆಡೆ ಸೇರಿಸಿ ‘ನೀರ ನಿಶ್ಚಿಂತೆ’- ಅನ್ನದ ನೆಲ..ಅರಿವಿನ ಮುಗಿಲು ಎಂಬ ಕಾರ್ಯಾಗಾರದ ಭಾಗೀದಾರರಾಗುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲ. ಆನ್ಲೈನ್ ‘ಬ್ಲಾಗೀ’ದಾರರಾಗಿ ಇಂತಹ ಸಮುದಾಯದತ್ತ ನೀರ ನಿಶ್ಚಿಂತೆ ಪ್ರಯೋಗಗಳನ್ನು ಬೆಳಕಿಗೆ ತರಲು ವೇದಿಕೆ ಸೃಷ್ಟಿಸಲಾಯಿತು. ಮುಂದೆ ಓದಿ »
ಬಂದರೆ ಮಳೆ ಹೀಗೆ
WES-Net India ರವರು ಆಯೋಜಿಸಿದ್ದ "ಕ್ಲೀನ್ ಇಂಡಿಯ ಫೋಟೋ ಕಾಂಟೆಸ್ಟ್ - ೨೦೦೮"ರ ಸ್ಪರ್ಧೆಯಲ್ಲಿ consolation prize ಪಡೆದ ಚಿತ್ರ.
ಹೆಚ್ಚಿನ ಮಾಹಿತಿ ಇಲ್ಲಿದೆ.
ಫೋಟೋ: ಸುಪ್ರಿಯ ಬಿಸ್ವಾಸ್
ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"
ಹುಬ್ಬಳ್ಳಿಯಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ!" ಕಾರ್ಯಕ್ರಮ. ಈಗಿನಂತೆ ಇರುವ ನೀರಿನ ಸೆಲೆಗಳನ್ನು ಹೇಗೆ ಚೆನ್ನಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ವಿಸ್ತೃತ ಚರ್ಚೆ.
ಕಾರ್ಯಕ್ರಮದ ವಿವರ ಕೆಳಗಿನಂತಿದೆ:
(ಕಾರ್ಯಕ್ರಮಕ್ಕೆ ಮುನ್ನುಡಿ)
ಮೊದಲನೆಯ ಅವಧಿ: ಕಾರ್ಯಕ್ರಮಕ್ಕೊಂದು ಮುನ್ನುಡಿ, (ಸುಮಾರು ೨೦ ನಿಮಿಷ)
ಎರಡನೆಯ ಅವಧಿ: ಸ್ಥಳೀಯ ಸಮುದಾಯದ ಪರಿಚಯ, ಸ್ಥಳೀಯ ಸಮಸ್ಯೆಗಳತ್ತ ಒಂದು ನೋಟ.
(ಸುಮಾರು ೩೦ ನಿಮಿಷ, ೧೫ ನಿಮಿಷ - ಪ್ರಶ್ನೋತ್ತರ)
(ಸಮುದಾಯ)
ಮೂರನೆಯ ಅವಧಿ: ಆನ್ಲೈನ್ ಸಮುದಾಯದ ಪರಿಚಯ ಹಾಗು ಅದರಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ.
ನಾಲ್ಕನೆಯ ಅವಧಿ: ಕಂಪ್ಯೂಟರಿನಲ್ಲಿ ಕನ್ನಡ ಬಳಸಿ ನೀರ ಸಮಸ್ಯೆಗಳು ಮತ್ತದರ ಪರಿಹಾರಗಳ ಕುರಿತು ಬರೆದು ಅರಿವು ಮೂಡಿಸುವುದರ ಬಗ್ಗೆ ಒಂದು ಪುಟ್ಟ ದೃಶ್ಯಾವಳಿ.
ವಿರಾಮ
(ದೃಶ್ಯಾವಳಿ)
ಐದನೆಯ ಅವಧಿ: "ಕಾಲಿ ಬೇಯ್ನ್" (ಸಾಕ್ಷ್ಯಚಿತ್ರ)
ಮರುಪೂರಣ ಕುರಿತ ದೃಶ್ಯಾವಳಿ
(ಚರ್ಚೆ)
ಆರನೆಯ ಅವಧಿ: ಚರ್ಚೆ.
ಮುಂದೆ ಓದಿ »
ನಲುಗಿದ ಬದುಕು... ಮಂಕಾದ ಅರಿವಿನ ಮುಗಿಲು
ವಾರ್ಷಿಕ ಸರಾಸರಿ ೩೦೦೦ ಮಿಲಿ ಮೀಟರ್ ಮಳೆ ಬೀಳುವ, ೪೪ ನದಿಗಳನ್ನು ಹೊಂದಿರುವ ಕೇರಳ ಇಂದು ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರವಾಗಿ ತಲ್ಲಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದೇ ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಮೊದಲ ಭರವಸೆ ಆಗಿತ್ತು. ಚುನಾವಣೆಯ ಸಂದರ್ಭದಲ್ಲಿ ೧೦,೦೦೦ ಕ್ಕೂ ಹೆಚ್ಚು ನೀರಿನ ಟ್ಯಾಂಕರ್ ಗಳನ್ನು ಕೇರಳದ ಉದ್ದಗಲಕ್ಕೆ ಹರಿದಾಡಿಸಿ ನೀರು ಹಂಚಿದ್ದರು ಮುಂಚೂಣಿ ನಾಯಕರು. ಹಾಗೆಯೇ ೨೦೦೭-೦೮ನೇ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ೨೮೪೪ ಕೋಟಿ ರೂಪಾಯಿಗಳಷ್ಟು ಕೇರಳ ರಾಜ್ಯ ನಷ್ಟ ಅನುಭವಿಸಿರುವುದಾಗಿ ಅಂದಾಜು ಮಾಡಲಾಗಿತ್ತು. ಇದು ಜಮ್ಮು ಕಾಶ್ಮೀರ ರಾಜ್ಯದ ೧ ವರ್ಷದ ಆಯವ್ಯಯ ಮೊತ್ತಕ್ಕೆ ಸಮ!
ಚಿತ್ರ ಕೃಪೆ: ದಿ ಹಿಂದೂ, ಪಿ ಟಿ ಐ
ದಕ್ಷಿಣ ಭಾರತದ ರಾಜ್ಯವೊಂದರ ಕಥೆ ಇದಾದರೆ ಉತ್ತರ ಭಾರತದ ಹಲವು ರಾಜ್ಯಗಳ ಪ್ರವಾಹ ಸಂಬಂಧಿ 'ಕಾದಂಬರಿ' ದೇವರಿಗೇ ಪ್ರೀತಿ. ಸಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ತೀವ್ರ ಮಳೆಯಾಗಿ ಒರಿಸ್ಸಾ ರಾಜ್ಯ ಅಕ್ಷರಶ: ನಡುಗಡ್ಡೆಯಂತಾಗಿ ಜನ-ಜಾನುವಾರು-ಪೀಕು ಎಲ್ಲರ ಬದುಕು ನೀರುಪಾಲಾಯಿತು. ಸತತವಾಗಿ ಸುರಿದ ಮಳೆಯಿಂದಾಗಿ ಒರಿಸ್ಸಾ ರಾಜ್ಯದ ೧೨ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ. ನೆರೆ ಭೀತಿ ಆವರಿಸಿ, ೩೦ ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತಗೊಂಡು ಅಪಾಯದ ಮಟ್ಟ ತಲುಪಿದವು. ಮುಂದೆ ಓದಿ »
