ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಚೆಂಡೆಮದ್ದಳೆ

Syndicate content
ಕಡಲಿಗೆ ಹೆಬ್ಬಾಗಿಲುಗಳಿಲ್ಲ...
URL: http://chendemaddale.wordpress.com
Updated: 32 min 35 sec ago

ಈ ಬುಧವಾರದ ಕ್ರೌರ್ಯ !

Fri, 2008-11-28 00:27
ನಿಜಕ್ಕೂ ಘೋರ. ಬುಧವಾರ ರಾತ್ರಿ ೧೧ ರಿಂದ ಕಣ್ಣು ಕೀಳದೇ ಸುಮಾರು ಬೆಳಗಿನ ಜಾವ ೩. ೩೦ ವರೆಗೂ ಟಿ. ವಿ. ಮುಂದೆ ಕುಳಿತಿದ್ದೆ. ಪ್ರತಿ ಕ್ಷಣದ ಆತಂಕ ನಮ್ಮ ವ್ಯವಸ್ಥೆಯ ಬಗ್ಗೆಯೇ ಅಸಹನೆ ಹುಟ್ಟಿಸಿತು. ರೋಸಿ ಹೋಗಿ ಮಲಗಿಕೊಂಡೆ. ಗುರುವಾರ ಬೆಳಗ್ಗೆ ಎಲ್ಲವೂ ಮುಗಿದು, ಸಾವಿನ ಸಂಖ್ಯೆಗೂ ವಿರಾಮ ಸಿಕ್ಕಿ, ಒಳಗಿದ್ದ ಉಗ್ರರೆಲ್ಲಾ ಸತ್ತು ಇಲ್ಲವೋ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುತ್ತಾರೆಂದು ಬೆಳಗ್ಗೆ ೯ ಕ್ಕೆ ಟಿ. ವಿ. ಹಾಕಿದರೆ ಮತ್ತಷ್ಟು ವಿಷಾದ ಆವರಿಸಿಕೊಂಡಿತು. ನಂತರ [...]
Categories: ಕನ್ನಡ ಪುಟಗಳು

ನಮ್ಮ ಚಿತ್ರೋತ್ಸವ-ಅಂತಿಮ ಕಂತು…

Fri, 2008-11-21 23:01
ನಮಸ್ಕಾರ. ಈಗಾಗಲೇ ತಿಳಿಸಿದಂತೆ ಜ. 3 ಮತ್ತು 4 ರಂದು ಕುಪ್ಪಳ್ಳಿಯಲ್ಲಿ ಹಮ್ಮಿಕೊಳ್ಳುತ್ತಿರುವ ಚಿತ್ರೋತ್ಸವಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಅವಧಿಯವರು ಒಂದು ನೋಟ್ ಹಾಕಿ ಪ್ರಶಂಸಿದರು. ಹಾಗೆಯೇ ಹಲವು ಗೆಳೆಯರು ಸಲಹೆಗಳನ್ನು ನೀಡಿದರು. ಕೇಳಿದ್ದಕ್ಕೆ ಒಳ್ಳೆ ಚಿತ್ರಗಳ ಪಟ್ಟಿಯನ್ನೂ ಕೊಟ್ಟರು. ಆ ಪೈಕಿ ಕೆಲವನ್ನೂ ತೆಗೆದುಕೊಳ್ಳುತ್ತಿದ್ದೇವೆ. ಇದೆಲ್ಲದಕ್ಕಿಂತ ಮೊದಲು ಒಂದನ್ನು ಸ್ಪಷ್ಟಪಡಿಸಬೇಕು. ಈ ಚಿತ್ರೋತ್ಸವದ ಹಿಂದೆ ನಾನೊಬ್ಬನೇ ಇಲ್ಲ. ಮಂಥನದ ವಾದಿರಾಜ್ ಮತ್ತು ಹಲವು ಗೆಳೆಯರು ಇದ್ದಾರೆ. ಚಿತ್ರೋತ್ಸವದಂಥ ಚಟುವಟಿಕೆಗಳಿಗೆಂದೇ ನಮ್ಮ ಗುಂಪಿಗೆ ಇಟ್ಟುಕೊಂಡ ಹೊಸ ಹೆಸರು ‘ಸಾಂಗತ್ಯ’-ಜತೆಗಾಗಿ [...]
Categories: ಕನ್ನಡ ಪುಟಗಳು

ಸಹ್ಯಾದ್ರಿ ತಪ್ಪಲಲ್ಲಿ ನಮ್ಮ ಚಿತ್ರೋತ್ಸವ

Sat, 2008-11-15 20:07
ನಾವು ನೋಡುವ ದಿನ ನಿಗದಿಯಾಗಿದೆ. ಜತೆಗೆ ಸ್ಥಳವೂ ಸಹ. ಇನ್ನು ಉಳಿದಿರುವುದು ನೀವು ಹೊರಡಲು ನಿರ್ಧರಿಸಬೇಕಷ್ಟೇ. ಕಳೆದ ನನ್ನ ಬರಹದಲ್ಲಿ ತಿಳಿಸಿದಂತೆಯೇ ನಮ್ಮ ಫಿಲ್ಮ್ ಫೆಸ್ಟಿವಲ್ ಜ. ೩ ಮತ್ತು ೪ ರಂದು ನಿಗದಿಯಾಗಿದೆ. ಸ್ಥಳ ಎಲ್ಲರಿಗೂ ಇಷ್ಟವಾಗುವ ಕುಪ್ಪಳ್ಳಿ. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯ ಕವಿಶೈಲ ರಾಷ್ಟ್ರಕವಿ ಕುವೆಂಪು ಹುಟ್ಟಿದ ಸ್ಥಳ. ಅಲ್ಲಿರುವ ಪ್ರಕೃತಿ ಅನನ್ಯ ; ಅದ್ಭುತ. ಕುವೆಂಪು ನಡೆದಾಡಿದ ಪರಿಸರ. ಅಲ್ಲಿ ಕುವೆಂಪು ಟ್ರಸ್ಟ್ ಕಟ್ಟಿದ ಹೇಮಾಂಗಣವಿದೆ. ಅಲ್ಲಿ ನಮ್ಮ ಚಿತ್ರೋತ್ಸವ ನಡೆಸಬೇಕೆಂದಿದ್ದೇವೆ. ಮೂವತ್ತರಿಂದ ನಲವತ್ತು ಮಂದಿ ಸೇರಿಕೊಳ್ಳೋಣ [...]
Categories: ಕನ್ನಡ ಪುಟಗಳು

ನಮ್ಮ ಚಿತ್ರೋತ್ಸವಕ್ಕೆ ಫಿಲ್ಮ್ ಗಳ ಹೆಸರು ಹೇಳಿ…

Thu, 2008-11-13 20:27
ನಮ್ಮ ಚಿತ್ರೋತ್ಸವದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಎರಡು ದಿನಗಳೊಳಗೆ ನಿರ್ಧಾರವಾಗುತ್ತೆ. ತಕ್ಷಣವೇ ದಿನಾಂಕ ಪ್ರಕಟಿಸ್ತೇನೆ. ಆಸಕ್ತರು ಬರಬಹುದು. ಮಿಕ್ಕೆಲ್ಲಾ ವಿವರಗಳನ್ನೂ ತಿಳಿಸುತ್ತೇನೆ. ಅಂದಹಾಗೆ, ನಾವು ಒಂದಿಷ್ಟು ಚಿತ್ರಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಕನ್ನಡ ಚಿತ್ರಗಳೂ ಇವೆ. ಆದರೆ ಬೇರೆ ಭಾಷೆ-ವಿದೇಶಿ ಭಾಷೆಗಳ ಚಿತ್ರಗಳನ್ನು ಆರಿಸುತ್ತಿದ್ದೇವೆ. ನೀವು ನೋಡಿದ ಒಳ್ಳೆಯ ಚಿತ್ರಗಳಿದ್ದರೆ ದಯವಿಟ್ಟು ತಿಳಿಸಿ. ನಾವೂ ನೋಡುತ್ತೇವೆ. ನೀವು ನೀಡಿದ ಪಟ್ಟಿಯಲ್ಲೂ ಒಂದಿಷ್ಟನ್ನು ಆರಿಸಿಕೊಂಡು ವೀಕ್ಷಿಸುತ್ತೇವೆ. ಫಿಲ್ಮ್ ಹೆಸರು ಹೇಳಿ ದಯವಿಟ್ಟು… Posted in ಹಲವು   Tagged: ಫಿಲ್ಮ್ ಫೆಸ್ಟಿವಲ್, ಲಿಸ್ಟ್, ಹೆಸರು    [...]
Categories: ಕನ್ನಡ ಪುಟಗಳು

ನಮ್ಮ ಫಿಲ್ಮ್ ಫೆಸ್ಟಿವಲ್ ಸದ್ಯದಲ್ಲೇ !

Tue, 2008-11-11 20:31
ಒಂದಿಷ್ಟು ಗೆಳೆಯರು ಸೇರಿ ಒಂದಷ್ಟು ಫಿಲ್ಮ್‌ಗಳನ್ನು ನೋಡಲು ನಿರ್ಧರಿಸಿದ್ದೇವೆ. ಒಂದೆಡೆ ಕುಳಿತು, ಚಿತ್ರ ನೋಡಿ ನಮಗನ್ನಿಸಿದ್ದನ್ನು ಅಂದುಕೊಳ್ಳುವುದು ಬಹಿರಂಗವಾಗಿ, ಅದೇ ಚರ್ಚೆಯಂತಿರಬಹುದು. ಆದರೆ ಎಲ್ಲವೂ ಅನೌಪಚಾರಿಕವಾಗಿ. ನಮ್ಮ ಕನ್ನಡದ ಕೆಲ ನಿರ್ದೇಶಕರನ್ನೂ ನಮ್ಮೊಂದಿಗೆ ಸೇರಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದೇವೆ. ಇನ್ನೂ ದಿನಾಂಕ ನಿರ್ಧಾರವಾಗಬೇಕಿದೆ. ಬಹುಶಃ ಡಿಸೆಂಬರ್ ಮಧ್ಯಭಾಗ ಅಥವಾ ಜನವರಿ ಮೊದಲನೇ ವಾರದಲ್ಲಿ. ದಿನಾಂಕ ಯಾವುದೇ ಆದರೂ ವಾರ ಮಾತ್ರ ಶನಿವಾರ ಮತ್ತು ಭಾನುವಾರ. ಒಂದೆರಡು ದಿನ ಯಾವುದೋ ಮೂಲೆಯಲ್ಲಿ ಕುಳಿತು ಒಂದಿಷ್ಟು ಮಂದಿ ಕುಳಿತು ಏಳೆಂಟು ಫಿಲ್ಮ್ ಗಳನ್ನು ನೋಡುವುದು [...]
Categories: ಕನ್ನಡ ಪುಟಗಳು

ಆ ಕನಸು ಈಡೇರಿದ್ದೇ ಸೋಜಿಗ

Mon, 2008-11-10 14:22
ಭಾರತರತ್ನ ಪುರಸ್ಕಾರ ನಮ್ಮ ಭೀಮಸೇನ್ ಜೋಷಿಯವರಿಗೆ ಬಂದಿದೆ. ನದಿ ಹರಿಯುವ ಹಾಗೆ ಹಾಡುವ ಭೀಮಸೇನ್ ಜೋಷಿಯವರೊಂದಿಗಿನ ದಿನಗಳ ಬಗ್ಗೆ ಪ್ರಸಿದ್ಧ ತಬಲಾ ವಾದಕ ರವೀಂದ್ರ ಯಾವಗಲ್ ರೊಂದಿಗೆ ಮಾತನಾಡಿದ್ದನ್ನು ವಿಜಯ ಕರ್ನಾಟಕದ ಸಾಪ್ತಾಹಿಕ “ಭೀಮಸೇನ ವಿಜಯ’ ಕ್ಕೆ ಬರೆದಿದ್ದೆ. ಅದನ್ನೇ ಇಲ್ಲಿ ಹಾಕಿದ್ದೇನೆ. ಮಾತನ್ನು ಹೀಗೆಯೇ ಆರಂಭಿಸುವ ಪ್ರಸಿದ್ಧ ತಬಲಾ ವಾದಕ ಪಂಡಿತ್ ರವೀಂದ್ರ ಯಾವಗಲ್, ಈ ಕನಸು ಈಡೇರಿಸಿದವರಿಗೆ ಧನ್ಯವಾದಗಳನ್ನು ಹೇಳಲು ಮರೆಯುವುದಿಲ್ಲ. ಅವರೊಂದಿಗೆ ನುಡಿಸುವುದೇ ಒಂದು ಕನಸು ಕಂಡ ಹಾಗೆ. ನಿಜವಾಗಿ ನಮ್ಮ ಆ ವಯಸ್ಸಿನಲ್ಲಿ [...]
Categories: ಕನ್ನಡ ಪುಟಗಳು

ಮಳೆ ಇನ್ನೂ ನಿಂತಿಲ್ಲ…!

Tue, 2008-11-04 20:55
ಮೊನ್ನೆ ಮುಗಿದ ಮಳೆಗಾಲದ ಒಂದು ರಾತ್ರಿಯ ಕೆಲವು ಕ್ಷಣ. ಊರ ದೀಪಗಳೆಲ್ಲಾ ಹೊತ್ತಿ ಕೊಂಡಿದ್ದವು. ಆದರೂ ಕತ್ತಲೆ ಕಳೆದಿರಲಿಲ್ಲ. ಅಲ್ಲಲ್ಲಿ ಚಂದ್ರನ ಬೆಳಂದಿಂಗಳು ಮಾಡಿಗೆ ಹೊದಿಸಿದ ತೆಂಗಿನಗರಿ (ಮಡ್ಲೆಡೆ)ಗಳ ತೂತುಗಳಿಂದ ಬಿದ್ದಂತೆ ಕತ್ತಲೆಯೂ ಅಲ್ಲಲ್ಲಿ ಹೊಳೆಯುತ್ತಿತ್ತು. ಅಷ್ಟು ಬೆಳಕಿನ ಮಧ್ಯೆ ಕತ್ತಲೆ ಹೊಳೆದಿದ್ದನ್ನು ಕಂಡದ್ದು ಅಂದೇ. ಹತ್ತಿರದ ಪೇಟೆ ಬದಿಯಿಂದ ಮನೆಗೆ ನಡೆದು ಬರುತ್ತಿದ್ದೆ. ಚಿಕ್ಕದಾದ ದಾರಿ. ಪಕ್ಕದಲ್ಲಿ ಹರಿಯುತ್ತಿದ್ದ ತೋಡು. ಮಳೆ ಹನಿ ಬೀಳುತ್ತಿದ್ದುದು ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಯಾಕೋ, ನನಗೂ ತಿಳಿದಿಲ್ಲ. ನನ್ನ ಹೆಜ್ಜೆಗಳು ಭಾರವಾಗುತ್ತಿದ್ದವು. ಆಕಾಶದ ಕಡೆ [...]
Categories: ಕನ್ನಡ ಪುಟಗಳು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ-ಮಾಹಿತಿ

Fri, 2008-10-31 21:33
ಕನ್ನಡಕ್ಕೆ ತಡವಾಗಿಯಾದರೂ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಕೇಂದ್ರ ಸರಕಾರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿದೆ. ೨೦೦೫ ರಿಂದಲೂ ನಿರಂತರವಾಗಿ ನಡೆದ ಹೋರಾಟಕ್ಕೆ ಸಿಕ್ಕ ಜಯವಿದು ಎನ್ನುವುದರಲ್ಲಿ ಸಂದೇಹವಿಲ್ಲ. ಈ ದಿಸೆಯಲ್ಲಿ ಲಭ್ಯವಿದ್ದ ಮಾಹಿತಿಯನ್ನು ಇಲ್ಲಿ ನೀಡಿದ್ದೇನೆ. ಶಾಸ್ತ್ರೀಯ ಭಾಷೆ- ಏನು ಪ್ರಯೋಜನ ?  - ಶಾಸ್ತ್ರೀಯ ಭಾಷೆಯ  ಕುರಿತಂತೆ  ಕೆಲಸ ಮಾಡಿದ  ಇಬ್ಬರು  ಶ್ರೇಷ್ಠ  ವಿದ್ವಾಂಸರಿಗೆ  ಪ್ರತಿವರ್ಷ  ಅಂತಾರಾಷ್ಟ್ರೀಯ  ಪ್ರಶಸ್ತಿ - ಭಾಷೆಯ ಅಧ್ಯಯನಕ್ಕೆ  ಉನ್ನತ  ಅಧ್ಯಯನ  ಕೇಂದ್ರ  ಸ್ಥಾಪನೆ - ಕೇಂದ್ರೀಯ  ವಿವಿಗಳಲ್ಲಿ  ಅಧ್ಯಯನ  ಪೀಠಗಳ  [...]
Categories: ಕನ್ನಡ ಪುಟಗಳು

ಎಲ್ಲವೂ ಮುಗಿದಿದೆ…

Wed, 2008-10-29 18:49
ಅವನ ಬಳಿ ಹೇಳುವುದೇನಿಲ್ಲ ಎಲ್ಲವೂ ಮುಗಿದಿದೆ ನನ್ನದೆಲ್ಲವನ್ನೂ ಕಳೆದುಕೊಂಡು ಅವನಿಂದ ಪಡೆದದ್ದನ್ನೇ ನನ್ನದೆಂದುಕೊಂತಿಡ ಕ್ಷಣದಿಂದ ಹೀಗನಿಸಿದ್ದು ನಿಜ ನಾನು ಅವನಿಗೆ ಅರ್ಥವಾಗಿದ್ದೇನೆ ! ಅವನೂ ಹಾಗೇ ಅಂದುಕೊಂಡನೇನೋ? ನನಗೆ ಗೊತ್ತಿಲ್ಲ ಅಂದಿನಿಂದ ನನ್ನ ಹೆಜ್ಜೆಯ ನೆರಳನ್ನೂ ನೋಡಲು ಹೋಗಲಿಲ್ಲ ಆತನ ನೆರಳು ನನ್ನ ಹೆಜ್ಜೆಯೊಂದಿಗೆ ಕೂಡಿ ನಡೆಯುತ್ತಿರಬಹುದೆಂದುಕೊಂಡೆ ಪ್ರತಿ ಮಾತಿನ ಮಧ್ಯೆ ಉದ್ಭವವಾಗುತ್ತಿದ್ದ ಪುಟ್ಟ ಮೌನಕ್ಕೆ ದೊಡ್ಡ ಅರ್ಥ ಕಲ್ಪಿಸಲಿಲ್ಲ ಮೌನದ ನಾದವನ್ನು ಸವಿದೆ ಅರ್ಥವಾಗದ್ದೂ ಅರ್ಥವಾಯಿತೆಂಬ ಭಾವ ನನಗೆ ಕಲಿಸಿದ್ದು ಅದೇ ಇರಬೇಕು ಎಂಬುದೀಗ ಅರ್ಥವಾಗಿದೆ ಅವನೀಗ ನನ್ನೊಂದಿಗೆ ಮಾತು ನಿಲ್ಲಿಸುವವನಿದ್ದಾನೆ, ನಾಳೆ, ಆತ ಕೊಟ್ಟದ್ದನ್ನೆಲ್ಲಾ ವಾಪಸು ಪಡೆಯಲು ಬರುತ್ತಾನೆ ಸರಿ, ಅದನ್ನೆಲ್ಲಾ ಮರಳಿಸಲು ಮನಸ್ಸೂ ಸಿದ್ಧವಿದೆ ಕಳೆದುಕೊಂಡ ನನ್ನದನ್ನು ಮರಳಿಸಿಕೊಳ್ಳಲು ತಯಾರಿಲ್ಲ ಆ ಕ್ಷಣ, ಮನದೊಳಗೆ ವಿಷಾದದ ಸಸಿ ಹುಟ್ಟಬಹುದು ಚಿಗುರಿದ್ದಾಗಲೇ ಕೊಲ್ಲುವ ಅಭ್ಯಾಸವನ್ನೂ ಆತನೇ ಕಲಿಸಿದ್ದಾನೆ ಜತೆಗೆ ವಿಷಾದದ ಚಿತ್ರಕ್ಕೆ ಹೊಸ [...]
Categories: ಕನ್ನಡ ಪುಟಗಳು

ಬೆಳಕು ಎಲ್ಲರ ಬೆಳಗಲಿ

Sun, 2008-10-26 15:23
ಬೆಳಕು… ಬೆರಗು… ! ಮೆರುಗು… ! ಬೆಳಕೆಂಬ ಬೆರಗಿನ ಬಗ್ಗೆ ಕಾವ್ಯ ಬರೆಯಲು ಹೊರಟರೇ ಹೀಗೆ ಪದಗಳು ಸಾಲು ದೀಪಾವಳಿ ಸಂಭ್ರಮ ತುಂಬಿಕೊಂಡ ಮನೆಯ ಅಂಗಳದಲ್ಲಿ ಜೋಡಿಸಿ ಸಾಲಾಗಿ ಇಟ್ಟ ದೀಪಗಳಂತೆ ಮೆರವಣಿಗೆ ಹೊರಡುತ್ತವೆ. ಬೆಳಕಿಗೆ ಆ ಮೆರವಣಿಗೆಯ ವೈಭವವಿದೆ. ಕಣ್ತುಂಬಿಕೊಳ್ಳುತ್ತಾ ಕುಳಿತರೆ ಮನದೊಳಗಿನ ಕತ್ತಲೆಗೆ ಹಣತೆ ಹಚ್ಚಿಟ್ಟಂತೆಯೇ. ಬೆಳಕೆಂದರೆ ಸಂಭ್ರಮ. ನಮ್ಮೊಳಗು-ಹೊರಗನ್ನು ಆವರಿಸಿಕೊಳ್ಳುವಂಥದ್ದು. ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಮಾತಿದೆ. ಅದರಂತೆಯೇ ದೀಪ ಹಚ್ಚಿ ಬರಿಯ ಮನೆಯ ಒಳ-ಹೊರಗನ್ನು ಬೆಳಗಿಕೊಳ್ಳುವುದಿಲ್ಲ. ನಮ್ಮೊಳಗೂ ಬೆಳಗಿಕೊಳ್ಳುತ್ತೇವೆ.  ಅಧ್ಯಾತ್ಮದಲ್ಲಿ ನಮ್ಮೊಳಗೆ ಬೆಳಗಿಕೊಳ್ಳುವುದೆಂದರೆ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಿಕೊಳ್ಳುವುದು. ಅಲ್ಲಿಗೆ [...]
Categories: ಕನ್ನಡ ಪುಟಗಳು

ಆಕೆ ಯಾರಿಗೆ ರೂಪಕ !

Wed, 2008-10-22 12:49
ಆಕೆ…ಆಕೆ ಯಾರಿಗೆ ರೂಪಕ ? ಅವನಿಗೋ ? ಪ್ರೀತಿಗೋ? ಅಂಗಳದಿ ಅರಳಿದ ಹೂವ ಕಂಡು ಸೊಗಸ ಕಣ್ಣ ತುಂಬಿಕೊಂಡಳಲ್ಲ, ಬರಿದೇ ಇರಲಿಲ್ಲ ಮನದೊಳಗೂ ತುಂಬಿಹೋದದ್ದು ಅರಿವೇ ಬರಲಿಲ್ಲ ಕಣಿವೇಲಿ ನಡೆಯುವಾಗ ಆದ ಹೆಜ್ಜೆಯ ಸದ್ದ ಆಲಿಸಿದ್ದಷ್ಟೇ, ಕಣ್ಣನೆತ್ತಿಯೂ ನೋಡಲಿಲ್ಲ, ಅದೆಂಥದೋ ಭಾವ ಅವಳ ಬಿಡಲಿಲ್ಲ ತಣ್ಣನೆ ಹರಿಯುವ ಝರಿ, ಸುಮ್ಮನೆ ಬೀಸುವ ಗಾಳಿ, ಮಧ್ಯೆ ತೇಲಿ ಬರುವ ಕೊಳಲ ಉಸಿರಿನೋನ್ಮಾದ ಮೋಹಗೊಳ್ಳಲಿಲ್ಲ ಆಕೆ, ಕರಗಿ ಹೋದಳು ಅವನ ಪಡೆಯಲಿಲ್ಲ ಆಕೆ, ಅದನೂ ಬಯಸಿದವಳಲ್ಲ ಹೂವ ಮುಡಿದು ಚೆಲುವೆಯಾಗ ಮನಸು ಒಪ್ಪಲಿಲ್ಲ್ಲ ಏಕೋ ಏನೋ ಆಕೆಗೂ ತಿಳಿಯದು ಹೂವ ಸೊಬಗ ಅಷ್ಟೇ ಸಾಕು, ಅವನು ಸಿಕ್ಕಿದ ಹಾಗೆ ಆಕೆ…ಆಕೆ.. ಯಾರಿಗೆ ರೂಪಕ ? ಪ್ರೀತಿಗೋ? ಅವನಿಗೋ ? ( ಈ ಪದ್ಯ ನನಗೂ ತೃಪ್ತಿ ನೀಡಿಲ್ಲ. ಸುಮ್ಮನೆ ಸಾಲುಗಳು ಬಂದವು, ಜೋಡಿಸಿಟ್ಟಿದ್ದೇನೆ) Posted in ಪದ್ಯ   Tagged: [...]
Categories: ಕನ್ನಡ ಪುಟಗಳು

ಜಂಬೂ ಸವಾರಿ ಎಂದ್ರೆ ನಮ್ಮೂರ ತೇರು !

Thu, 2008-10-16 00:15
ದಸರೆಯ ಸಂಭ್ರಮ ಮುಗಿಯಿತು. ಸುಮಾರು ಹದಿನೈದು ದಿನಗಳಿಂದ ಬ್ಲಾಗಿನತ್ತ ತಲೆಯೇ ಹಾಕಿರಲಿಲ್ಲ. ನಮ್ಮೂರಿನಲ್ಲಿ ದಸರೆಯ ಸಂಭ್ರಮ ಎಲ್ಲರನ್ನೂ-ಎಲ್ಲವನ್ನೂ ಆವರಿಸಿತ್ತು. ಅದರಲ್ಲೂ ಸುದ್ದಿಜೀವಿಯಾದ ನನಗೆ ಹಾಗೆ ಆವರಿಸಿಕೊಂಡ ಸಂಭ್ರಮವನ್ನು ಮೊಗೆ ಮೊಗೆದು ಎಲ್ಲರಿಗೂ ನೀಡಬೇಕಾದ ಹೊಣೆಗಾರಿಕೆಯಿತ್ತು. ನನ್ನ ಸಹೋದ್ಯೋಗಿಗಳು ಅಂಥದೊಂದು ಕಾರ್‍ಯವನ್ನು ಅತ್ಯಂತ ಉಲ್ಲಸಿತವಾಗಿ ಮಾಡಿದರು. ಬಹಳ ವಿಭಿನ್ನವಾಗಿ ದಸರೆಯ ಸಂಭ್ರಮವನ್ನು ನಮ್ಮ ಬೊಗಸೆಯಲ್ಲಿ ಹಿಡಿದು ಕೊಟ್ಟೆವು ಎನ್ನಲಡ್ಡಿಯಿಲ್ಲ. ಇದು ನನಗೆ ಎರಡನೇ ದಸರೆ. ಕಳೆದ ದಸರೆಯಷ್ಟೊತ್ತಿಗೆ  ಇದೇ ಜಂಬೂಸವಾರಿಯ ಊರಿನಲ್ಲಿದ್ದೆ. ದಸರೆಯನ್ನು ಬಹಳ ವಿಶಿಷ್ಟವಾಗಿ ನೋಡುವ ಪ್ರಯತ್ನ  ಮಾಡಿದೆವು. ಅದೆಲ್ಲವೂ [...]
Categories: ಕನ್ನಡ ಪುಟಗಳು

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator