ನನ್ನ ಹಾಡು
ಏನು ಬರೆಯಲಿ ಹೇಳು...?
ಬರೆಯಲು ಹೊರಟವನಅಂತರಂಗವೆಲ್ಲ ಖಾಲಿಯಾದಾಗ
ಸುಟ್ಟು ಹೋದ ಕನಸುಗಳ
ವಾಸನೆ ಮೂಗಿಗೆ ಅಡರುತ್ತಿರುವಾಗ
ಬರೆಯುವದಾದರು ಹೇಗೆ ಹೇಳು..?
ಆಗುಂತಕಳಾಗಿ ಎದುರಾಗಿ, ಮರೆಯಾದೆ
ಮರೆಯಾಗುವ ಮುನ್ನ
ಮಾಸಲಾರದ ಬರೆ ಹಾಕಿದೆ
ಬರೆ ಇನ್ನು ಹಸಿ ಹಸಿಯಾಗಿರುವಾಗಲೇ
ಹಾಳೆಯ ಮೇಲೆ ಗೆರೆಯಾದ್ರೂ
ಹೇಗೆ ಮೊಡಿತು ಹೇಳು...?
ಬದುಕಿದ್ದು ಸತ್ತಂತಿರುವಾಗ
ಭಾವವಾಗುವ ಅಕ್ಷರಗಳಿಗೆ
ಜೀವವನ್ನಾದರೂ ಹೇಗೆ ತುಂಬಲಿ...?
ನಾ ಹಾಳಾಗುವ ಮುನ್ನ
ಒಮ್ಮೆ ನೀ ಹರಸು
ಎಂದೆಂದಿಗೂ ನಾ ನಿನ್ನ
ನೀ ನನ್ನ ನೋಡದಂತೆ
Categories: ಕನ್ನಡ ಪುಟಗಳು
ಮರೆಯೋದಲ್ಲ
ಮಳೆಗೆ ಅಳೋದು ಮಾತ್ರ ಗೊತ್ತು
ನಗೋದಲ್ಲ
ಸೂರ್ಯನಿಗೆ ಸುಡೋದು ಗೊತ್ತು
ಆರಿಸೋದಲ್ಲ
ಆದರೆ
ನನಗೆ ನಿನ್ನ ನೆನಪು
ಮಾಡಿಕೊಳ್ಳುದು ಗೊತ್ತು
ಮರೆಯೋದಲ್ಲ
- ಇದು ನನಗೆ ಇಷ್ಟವಾದ ಒಂದು ಶಾಯರಿಯ ಭಾವಾನುವಾದ
Categories: ಕನ್ನಡ ಪುಟಗಳು
ಅಲೆಗಳು ಏಳುತ್ತವೆ

ಶಾಯರಿಗಳಿಗೂ ಕೆಲವು ಅಂದಾಜು ಇರತವೆಕನಸುಗಳು ತೆರೆದ ಕಣ್ಣುಗಳಲ್ಲೂ ಒಡಮೂಡುತ್ತವೆದುಃಖದಲ್ಲಿ ಕಣ್ಣೀರುಬರಲೇಬೇಕೆನಿಲ್ಲ ನಗುವ ನಯನಗಳಲ್ಲು ಅಲೆಗಳು ಏಳುತ್ತವೆ -------- ಇದು ಹಿಂದಿ ಶಾಯರಿಯ ಭಾವಾನುವಾದ. ಇದು ಮನಸು ಕಾಡುವ ಶಾಯರಿ ಎಂಬಭಾವನೆ ನನ್ನದು.. ನಿಮ್ಮದು ...?
Categories: ಕನ್ನಡ ಪುಟಗಳು
