ಚಂದನ
ಸಹಾಯ
೧.
“ಆರಾದ್ಯ ಅವರಿಗೆ ಹುಶಾರಿಲ್ಲವಂತೆ ಸಾರ್”, ವರದಿಗಾರ ದಿವಾಕರನ ದನಿಗೆ ತಲೆಯೆತ್ತಿ ನೋಡಿದೆ, “ಪಂಡಿತ್ ಅರಾಧ್ಯ ರವರೇನ್ರಿ?” ಎಂದೆ
“ಹೌದು ಸಾರ್” ಎಂದ ದಿವಾಕರ.
“ಏನಾಗಿದೆಯಂತ್ರಿ” ಎಂದಿದ್ದಕ್ಕೆ, “ನನಗೆ ಡೀಟೈಲ್ಸ್ ಗೊತ್ತಿಲ್ಲಾಸಾರ್, ಬರೀ ವಿಶಯ ತಿಳಿತು” ಎಂದ ದಿವಾಕರ್.
ಇಡೀ ನಾಡಿನಲ್ಲೇ ಪಂಡಿತ ಅರಾದ್ಯರವರ ಸಂಗೀತ ಕೇಳದವರಿರಲಿಲ್ಲ, ಎಲ್ಲ ಪ್ರತಿಷ್ಟಿತ ಅವಾರ್ಡ್ ಗಳು ಅರಾದ್ಯ ಅವರನ್ನು ಅರಸಿಬಂದಿದ್ದವು. ಆರಾದ್ಯರವರು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದರು. ನನ್ನ ಅಚ್ಚುಮೆಚ್ಚಿನ ಸಂಗೀತಗಾರನಿಗೆ ಹುಶಾರಿಲ್ಲ ವೆಂದು ತಿಳಿದ ಮೇಲೆ, ನಾನು ಮಾಡುತಿದ್ದ ಕೆಲಸವನ್ನು ಅಲ್ಲೇ ನಿಲ್ಲಿಸಿ, ಸಂಪಾದಕರಿಗೆ ಸುದ್ದಿ ತಿಳಿಸಿ, ಆರಾದ್ಯ ಅವರನ್ನೊಮ್ಮೆ ಮಾತಾಡಿಸಿ [...]
Categories: ಕನ್ನಡ ಪುಟಗಳು
ಎಲ್ಲಿ ಜಾರಿತೋ ನನ್ನ ಗುಂಡಿ!!
ಬೆಳಿಗ್ಗೆ ನನಗೆ ತುಂಬಾ ಇಷ್ಟವಾದ ಶರಟನ್ನು ಇಸ್ತ್ರೀ ಮಾಡುತ್ತಿರುವಾಗ, ಶರಟಿನ ಮಧ್ಯದ ಒಂದು ಗುಂಡಿ ಸಡಿಲವಾಗಿದ್ದು ಕಾಣಿಸಿತು, ಗುಂಡಿಯನ್ನು ಸ್ವಲ್ಪ ಎಳೆದು ನೋಡಿದೆ, ನಾಲ್ಕೋ ಐದೊ ದಾರಗಳಿದ್ದು ಸ್ವಲ್ಪ ಲೂಸಾಗಿದ್ದುದು ಕಂಡುಬಂತು. ಈ ಗುಂಡಿ ಇವತ್ತು ಕಿತ್ತು ಹೋಗುತ್ತೆ ಅನ್ನಿಸಿತು. ಆದರೆ, ಆಫೀಸಿಗೆ ಹೊರಡುವ ಸಮಯವಾಗಿದ್ದು, ಮತ್ತೊಂದು ಶರಟನ್ನು ಇಸ್ತ್ರೀಮಾಡುವಷ್ಟು ಸಮಯವಿರಲಿಲ್ಲ, ಇಷ್ಟು ದಿನ ಬದುಕಿದ ಗುಂಡಿ, ಇವತ್ತೊಂದು ದಿನ ಬದುಕತ್ತೆ, ಅಲ್ಲದೇ ಇದು ಮಧ್ಯದ ಗುಂಡಿಯಾದ್ದರಿಂದ ಇದು ಇವತ್ತು ಬಧುಕುವ ಸಾಧ್ಯತೆ ಇದೇ ಎಂದುಕೊಂಡು ಶರಟನ್ನ ಮೈಯಿಗೇರಿಸಿದೆ.
ಮೆಟ್ರೋ ರೈಲಿನಲ್ಲಿ ಕೂತು, ಪುಸ್ತಕ [...]
Categories: ಕನ್ನಡ ಪುಟಗಳು
ಸತ್ಯದ ನಿಜವಾದ ಧ್ವನಿ
ಸದಾನಂದ ಗುರುಕುಲದಲ್ಲಿದ್ದ ಶಿಷ್ಯರಲ್ಲೆಲ್ಲಾ ಅತಿ ಬುದ್ದಿವಂತ. ಈತ ಒಂದು ಮುಖ್ಯವಾದ ಮಂತ್ರವೊಂದನ್ನು ಕುರಿತು ಬಹಳ ಆಳವಾಗಿ ಅಭ್ಯಾಸ ಮಾಡಿದ್ದ. ವಿಧ್ಯಾಬ್ಯಾಸವಾದ ಮೇಲೆ, ಗುರುಕುಲದವರು ಅವನನ್ನು ಗುರುವಾಗಿ ನೇಮಿಸಿದರು. ಎರಡು ವರ್ಷಗಳಕಾಲ ಗುರುಕುಲದಲ್ಲಿ ಪಾಠ ಹೇಳಿದ ಸದಾನಂದ, ತನಗೀಗಾಗಲೇ ಎಲ್ಲಾ ತಿಳಿದಿದೆ, ತಾನಿನ್ನೇನನ್ನೂ ಕಲಿಯುವಂತಿಲ್ಲಾ ಎಂಬ ಧೊರಣೆ ತಳೆದಿದ್ದ. ಆಷ್ಟಾದರೂ, ಒಮ್ಮೆ ಹತ್ತಿರದ ದ್ವೀಪದಲ್ಲೊಬ್ಬ ಮಹಾತ್ಮನಿರುವುದು ಇವನ ಗಮನಕ್ಕೆ ಬಂತು, ಮಹಾತ್ಮನ ಮಹಿಮೆಯನ್ನು ಕೇಳಿ, ತಾನು ಈ ಮಹಾತ್ಮನಲ್ಲಿ ಹೋಗಿ ಹೆಚ್ಚಿನದನ್ನು ಕಲಿಯಬೇಕೆಂದು ನಿರ್ಧರಿಸಿದ. ಅಂಬಿಗನೊಬ್ಬನ ಸಹಾಯದಿಂದ ದೋಣಿಯೇರಿ ಕೆರೆಯ ಮಧ್ಯದಲ್ಲಿದ್ದ , ಮಹಾತ್ಮನ [...]
Categories: ಕನ್ನಡ ಪುಟಗಳು
ಆಲೋಚನೆ ಸ್ವಭಾವವಾಗುವ ಪರಿ
The thought manifests as the word;
The word manifests as the deed;
The deed develops into habit;
And habit hardens into character;
So watch the thought and its ways with care,
And let it spring from love
Born out of concern for all beings
-Buddha
ಅಲೋಚನೆಗಳು ಪದಗಳಾಗಿ ತೋರ್ಪಡಿಸಿಕೊಂಡು
ಪದಗಳು ಕಾರ್ಯದ ಕಾರಣೀಭೂತವಾಗಿ
ಕಾರ್ಯವು ಗುಣವಾಗಿ ಬೆಳೆದು
ಘನೀಭೂತವಾದ ಗುಣಗಳು ಸ್ವಭಾವವಾಗೆ
ಆಲೋಚನೆ ಸ್ವಭಾವವಾಗುವ ಪರಿಯ
ಅರಿವಿನ ಚಿಲುಮೆ
ಸಕಲಪ್ರಾಣಿಗಳಲ್ಲಿನ ಕರುಣೆಯಿಂದುದಿಸಿದ
ಪ್ರೀತಿಯಿಂದ ಹರಿಯಲಿ
[...]
Categories: ಕನ್ನಡ ಪುಟಗಳು
ಕೇಳಿಸಿಕೊಳ್ಳುವಿಕೆ
So when you are listening to somebody, completely, attentively, then you are listening not only to the words, but also to the feeling of what is being conveyed, to the whole of it, not part of it. - Jiddu Krishnamurti
ಜಿದ್ದೂ ಕೃಷ್ಣಮೂರ್ತಿಯವರ ಮೇಲಿನ ಹೇಳಿಕೆ, ಮನುಷ್ಯನ ಜೀವನದಲ್ಲಿ ಕೇಳಿಸಿಕೊಳ್ಲುವಿಕೆಯ (Listening) ಬಗೆ ಹಾಗೂ ಪ್ರಾಮುಖ್ಯತೆಯನ್ನು ತಿಳಿಸುತ್ತದೆ . ತೆರೆದ ಮನಸ್ಸಿನಿಂದ, ಪೂರ್ವಾಗ್ರಹ ಪೀಡಿತರಾಗಿರದೆ, ತದೇಕ ಚಿತ್ತದಿಂದ ಇನ್ನೊಬ್ಬರ ಮಾತನ್ನು ಅವರ [...]
Categories: ಕನ್ನಡ ಪುಟಗಳು
ಹೊಸ ಮಾನವತೆಗಾಗಿ ಮೈತ್ರಿ
Dr. Deepak Chopra ರವರ ಹೊಸ ಮಾನವತೆಗಾಗಿ ಮೈತ್ರಿ (Alliance for a new mankind) ಎಂಬ ಸಂಸ್ಥೆಯ ವೆಬ್ ಸೈಟಿಗೆ ಒಮ್ಮೆ ಭೇಟಿ ಕೊಡಿ.
http://www.anhglobal.org/
Categories: ಕನ್ನಡ ಪುಟಗಳು
