ಕುಂಟಿನಿ
ಒಳಗೆ ಕೆಲಸ ನಡೆಯುತ್ತಿದೆ
ಪ್ರಿಯ ಓದುಗ ಗೆಳತಿ- ಗೆಳೆಯರೇ,
ಬ್ಲಾಗ್ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಒಳಗೆ ದುರಸ್ತಿ ಕಾರ್ಯ ನಡೆಯುತ್ತಿದೆ,ನನ್ನೊಳಗೂ..ರಿಪೇರಿ ಕೆಲಸ ಸಾವಧಾನವಾಗಿ ನಡೆಯುತ್ತಿದೆ, ಸ್ವಲ್ಪ ಸಮಯದಲ್ಲೇ ಮತ್ತೆ ತೆರೆದುಕೊಳ್ಳಬಹುದು..ಅಲ್ಲಿಯ ತನಕ ಶಾಂತಂ ಪಾಪಂ..!ಇಷ್ಟಕ್ಕೂ ನನ್ನ ಬ್ಲಾಗು ಮುಚ್ಚಿಯೇ ಇದ್ದರೆ ಅದರಿಂದ ಯಾರಿಗೂ ನಷ್ಟವಾಗುವುದಿಲ್ಲ, ಇದೇನೂ ಅನಿವಾರ್ಯವೂ ಅಲ್ಲ..ಹಾಗಂತ ನಾನು ತಿಳಿದುಕೊಂಡಿದ್ದೇನೆಇಂತಿ ನಿಮ್ಮ ಗೆಳೆಯ
Categories: ಕನ್ನಡ ಪುಟಗಳು
ನಾಲ್ಕು ಸಾಲು
೧.
ಯಾರಿಗೂ ನಿಲುಕದಸಾವುಎಲ್ಲರನ್ನೂ ಸ್ವೀಕರಿಸುವುದುಹುಟ್ಟಿನ ಆಯ್ಕೆಯಲ್ಲಿಸಾವಿನ ಉಡುಗೊರೆ ಉಚಿತ
೨.ದೇಹದ ಸಾವಿಗೆ ಅಂಜುವವನುಮನಸ್ಸಿನ ಸಾವನ್ನು ಮರೆಯುವನು
೩.
ಎಲ್ಲರಿಗೂ ಒಪ್ಪುವಸಾವನ್ನುದೇವರೂ ಸೃಷ್ಟಿಸಲಾಗದೇಒದ್ದಾಡಿದ.
೪.
ಮರೆಯುವುದುಕೂಡಾಸಾವೇಎಂದರೆಪ್ರೇಮಿಗಳುಮಾತ್ರಾಅಂಜುವರು.
Categories: ಕನ್ನಡ ಪುಟಗಳು
ಹಾಡು-ಪಾಡು-೨
ವಿರಹ ಎಂದರೆನಕ್ಷತ್ರಗಳಿಲ್ಲದರಾತ್ರಿ
ವಿರಹಎಂದರೆಅರುಣೋದಯಕ್ಕೆಅಸ್ತಮಾನ
ವಿರಹಎಂದರೆಗಾಳಿಬೀಸದಮುಗಿಲು
ವಿರಹಎಂದರೆಭೂಮಿಗೆ ಚಲನೆಯ ಮರೆವು
ವಿರಹ ಎಂದರೆಪಕಳೆಗಳುರುಳಿದಗುಲಾಬಿ
ವಿರಹ ಎಂದರೆಹಾರಲಾರದದುಂಬಿ
ವಿರಹ ಎಂದರೆಕಂತಿದ ಭೂಮಿಚಿಮ್ಮಿದಬಾನು
ವಿರಹಎಂದರೆಕನಸೇಇಲ್ಲದ ನಿದ್ದೆಅವಳು ಇನ್ಯಾರಿಗೋ ನೆನಪುಸಂಭ್ರಮ..
Categories: ಕನ್ನಡ ಪುಟಗಳು
ಮುದ್ದಿನಮೂಟೇ ಉರುಳೇ ಹೋಯ್ತು..

ಐವತ್ತನೇ ತಿಂಗಳಿಗೆ ಹೊರಟು ನಿಂತಳು.ಬೇಜಾರು ಮಾಡ್ಕೋಬಾರದು ನೀನು. ಎಷ್ಟೊಂದು ರೀತಿಯಲ್ಲಿ ಹೀಗೆ ಮಾಡಲೇ ಬೇಡವೇ ಅಂತ ಯೋಚಿಸಿದ್ದೆ.ಕೊನೆಗೂ ಬೀಳ್ಕೊಳ್ಳುತ್ತಿದ್ದೇನೆ,ಪ್ರೀತಿಯಿಂದ ಕಳುಹಿಸಿಕೊಡೋ..ಮಾತಾಡಲಿಲ್ಲ.ಎಲ್ಲಿಂದ ಹೊರಡುವುದು ಮಾತು? ಅದೇ ಗಂಟಲಿನಿಂದ ಭಾವನೆಗಳನ್ನು ಕಟ್ಟಿಕೊಂಡು ಮಾತು ನಾಲಗೆ ಮೇಲೆ ಹೊರಳಬೇಕಾಗಿದೆ ತಾನೇ..ಸಾಧ್ಯವೇ ಇಲ್ಲ. ಗಂಟಲು ತುಂಬಿಕೊಂಡಿದೆ. ಭಾವನೆ ಆಳದಲ್ಲಿ ಹೂತುಹೋಗಿದೆ. ಹೃದಯವೇ ಕರಗಿ ಹಾದಿ ಮುಚ್ಚಿದಂತಿದೆ.ನಾಲಗೆ ಕಟ್ಟಿಕೊಂಡಿದೆ.ಉಬ್ಬಸದ ಅನುಭವ.ಅಂದು ಹೀಗೆ ಆಕೆ ಹೇಳಿದ್ದಳು.ನಿನ್ನನ್ನು ಪ್ರೀತಿಸಿಬಿಟ್ಟೆ.. ಏನು ಮಾಡುತ್ತಿಯೋ ನನಗೆ ಗೊತ್ತಿಲ್ಲ.
@@@@@@@@@@@@@@@@@@@@
ಆ ಬೆಳಗು ಜೀವನದಲ್ಲಿ ಹೀಗೊಂದು ಸೃಷ್ಟಿಯನ್ನು ತಂದೊಪ್ಪಿಸೀತು ಎಂದು ಎಂದೂ ಎಂದೆಂದೂ ನೆನೆಸಿರಲಿಲ್ಲ.ಹಾಗೇ ಕಛೇರಿಯಲ್ಲಿ ಕುಳಿತವನಿಗೆ ಅವಳ ನಿರೀಕ್ಷೆ ಇತ್ತು. ಹಿಂದಿನ ದಿನವಷ್ಟೇ ಆಕೆ ಕಿಸೆಯಲ್ಲಿದ್ದ ಸೆಲ್‌ಫೋನ್‌ಗೆ ಕರೆಮಾಡಿದಾಗ ಗುರ್ ಎಂದಂತಾಗಿತು. ಎಂದೂ ಸೆಲ್‌ನ್ನು ಅಲ್ಲಾಡುವ ಸ್ಥಿತಿಯಲ್ಲಿಡುವ ಜಾಯಮಾನ. ಎತ್ತಿಕೊಂಖಡರೆ ಹುಡುಗಿ.ಪುಳಕಿತಯಾಮಿನೀ ಆಗಿ ಸಲ್ಲದ ಸ್ಟೈಲ್ಲಲ್ಲಿ ಮಾತನಾಡಿದ್ದಾಯಿತು.ನಾಳೆ ಬರುತ್ತೇನೆ ॒ಮೀಟ್ ಮಾಡಬೇಕು. ಹಾಗಂತ ಕೇಳಿಕೊಂಡೇ ಬರುತ್ತೇನೆ.ಶಿಷ್ಟಾಚಾರ ಅಂದಳು.ಈಗ ಹೇಳಿಕೊಂಡು ಹೋಗುವುದು ಶಿಷ್ಟಾಚಾರವೇ ಇರಬೇಕು.ಕಛೇರಿಗೆ ಹೊರಡುತ್ತಿದ್ದಂತೆ ಎಂದೂ ಮುಟ್ಟದ ಪರಿಮಳದ್ರವ್ಯವನ್ನು ಎತ್ತಿಕೊಂಡು ಅತ್ತಿತ್ತ ನೋಡಿ ಫುಫ್ ಅಂತ ಬಡಿ ಮೇಲೆ ಸಿಂಪರಿಸಿಕೊಂಡಾಯಿತು.ಯಾಕೆ ಮಾಡಿದ್ದೋ ಈಗಲೂ ಗೊತ್ತಿಲ್ಲ. ಯಾವಾಗಿನ ಧಿರಸನ್ನು ಕೈಬಿಟ್ಟು ಎತ್ತಿಕೊಂಡದ್ದು ಟೀ ಶರಟು ಮತ್ತು ನೀಲಿ ಜೀನ್ಸ್..ಬಂಗಾರದ ಬೊಟ್ಟಿನ ಪೆನ್ನನ್ನೇ ಕಿಸೆಗೆ ಸಿಕ್ಕಿಸಿಕೊಂಡಾಗ ಅದೆಂಥದ್ದೋ ಹುಕ್ಕಿ ಹರಿದಾಡಿದಂತಾಗಿ ಫುಲ್ಲಕುಸುಮಿತಾಂ..
@@@@@@@@@@@@@@@@
ಅದು ನಿರೀಕ್ಷೆ ಹೇಗಾದೀತು, ಪ್ರತೀಕ್ಷೆಯೇ..ಆ ಕ್ಷಣಕ್ಕೆ ಅದೂ ನಡೆದೇಹೋಯಿತು.ಕಮ್‌ಇನ್..ಸರಸಿ ಯಲಾ ಇವನಾ..ಸರಸೀ ಅಂತ ಹೇಳೇ ಬಿಟ್ಟ.ಮೊನ್ನೆಯ ದಿನದಿಂದ ಇವನು ಹೇಗಿರಬಹುದು ಅಂತ ಅದೆಷ್ಟು ರೀತಿ ಊಹಿಸಿದ್ದೆ,ಅದಕ್ಕಿಂತ ಸುಂದರವಾಗಿದ್ದಾನೆ.ದುಷ್ಟ.ಇಷ್ಟೊಂದು ಇನ್‌ಫಾರ್ಮಲ್ ಆಗಿ ಇರುತ್ತಾನೆ ಅಂದರೆ ನಂಬುವುದು ಹೇಗೆ ಫಟಿಂಗ.ಸರಸಿ,ಪ್ಲೀಸ್ ಬಿ ಸೀಟೆಡ್..ಕೂತದ್ದಾಯಿತು. ಎದುರಲ್ಲಿ ಈ ಹಾಫ್ ತೋಳಂಗಿಯ ಹುಡುಗ.ಬೇಕೆಂದೇ ಹಾಕಿದ್ದಿರಬೇಕು,ಕೈ ತುಂಬಾ ಕಪ್ಪುಗೂದಲ ರಾಶಿ.ಅರೆ,ಎದೆಯಲ್ಲಿ ತುಂಬಿ ತುಳುಕಿದ ರೋಮರಾಶಿ ಟೀಶರಟನ್ನೂ ಉಲ್ಲಂಘಿಸಿ ಇಣುಕುತ್ತಿದೆ,ನನ್ನನ್ನು ಆಹ್ವಾನಿಸಲೆಂದೇ..ಕರಡಿ ಬೋಳಿಮಗ.ಸೆಕ್ಸೀ ಇದ್ದಾನೆ ಅಂತ ಒದ್ದಾಡಿದಾಗ ನೆನಪಾದದ್ದು ಒಳಗೆ ಪ್ಯಾಡ್ ಛೇಂಜ್ ಮಾಡಬೇಕಾಗಿದೆ.ಇವನ ಕಛೇರಿಗೆ ಟಾಯ್ಲೆಟ್ಟು ಅಂತ ಎಲ್ಲಿದೆಯೋ ಕೇಳುವುದಾದರೂ ಈಗ ಹೇಗೆ ?ಸರಸೀ.. ಹೊರಡೋಣ್ವಾ..ಹೂಂ..ನಾನು ರೆಡೀ..ಭೂಪ ಸೀದಾ ಟಾಯ್ಲೆಟ್ಟು ಬಾಗಿಲು ತಳ್ಳಿ ಒಳಗೆ ಹೋದವನು ಬಂದು ನಿಂತು ಪುಶಪ್..ಎಂದು ಪ್ಯಾಂಟನ್ನು ಅಡ್ಜಸ್ಟ್ ಮಾಡಿದ ರೀತಿಗೆ ಛಳಿ ಛಳಿ..
@@@@@@@@@@@@@@@@@@@@@@@@@@
ಆ ಕ್ಷಣಕ್ಕೇ ಪ್ರೀತಿಸಿಬಿಟ್ಟಳೇ..ಗೊತ್ತಾಗಲಿಲ್ಲ.ಆದರೆ ಆ ದಿನ ಆ ಚಪ್ಪರದ ಮಲ್ಲಿಗೆ ಮಾಲೆ ಮುಡಿದು ಬಂದಳಲ್ಲ.ಎಲ್ಲರಿಗಿಂತಲೂ ಮೊದಲು ಎಂಬ ಹಾಗೇ.ಹಿಂದಿನಿಂದ ಬಂದಿ ಕಣ್ಣುಮುಚ್ಚಿಹಿಡಿಯೋಣ ಎಂದನಿಸಿತಲ್ಲಾ ಆ ವೇಳೆಗೆ..ಆ ಮೋಹಕ ನಗುವಿನಲ್ಲೇ ಎದೆಯ ಅಗ್ಗಿಷ್ಟಿಕೆಗೆ ಅರಣೀಮಥನ ಮಾಡಿದಳು.ಅಂದು ಕಾರಲ್ಲಿ ಕುಳಿತಿದ್ದಾಗ ಯಾವುದೋ ಮಾತಿಗೆ ..ಯಾಕೋ ಆ ದಿನ ನೀನು ಚಪ್ಪರದ ಮಲ್ಲಿಗೆಗೆ ಸೋತಿದ್ದೆ ಎಂಬುದು ಗೊತ್ತಾಗಿ ಹೋಗಿತ್ತು ಎಂದು ಹೇಳಿಯೇ ಬಿಟ್ಟಿದ್ದಳು..ಎಂಥಾ ಸೇಡು! ಏನೆಂದು ಆರಂಭಿಸಲಿ ಎಂದುಕೊಳ್ಳುವ ಹೊತ್ತಿಗೆ ಒಮ್ಮೆ ಹಗ್ ಮಾಡು ಗಟ್ಟಿಯಾಗಿ ಅಷ್ಟೇ ಸಾಕು ಎಂದಳು..ಪ್ರೀತಿಸಬಾರದು..ಎಂದು ಎಲ್ಲರೂ ಹೇಳುತ್ತಾರೆ, ಆದರೆ ಪ್ರೀತಿಸದೇ ಇರೋದು ಹೇಗೆ ಎಂದು ಯಾರೂ ಹೇಳಿಲ್ಲ. ಅವಳಿಗೂ ಹೀಗೆಯೇ ಆಗಿತ್ತಾ .. ಅಥವಾ ಈಗ ಹೀಗೆ ಅನಿಸಲೂಬಹುದಾ.? ಯಾಕೆ ಕೇಳಬೇಕು. ಅವಳೇನು ಇನ್ನು ಈ ಜೀವಕ್ಕೆ ತಟ್ಟುವವಳಲ್ಲ. ಹಾಗಾದರೆ ಅಂದೇಕೆ ತಟ್ಟಿದಳು, ಈ ಪಾಳುಮನೆಯ ಗಟ್ಟಿಬಾಗಿಲನ್ನು ? ಅದು ಏಕೆ ಆ ತಾಳಕ್ಕೆ ಸಂವಾದಿಯಾಗಿ ತೆರೆಯಬೇಕಿತ್ತು ಆ ಗಟ್ಟಿ ಚಿಲಕವನ್ನು ?ಗೊತ್ತಿಲ್ಲ,ವೇದನೆಯಾಗುತ್ತಿದೆ,ಇನ್ನು ಮುಂದೆ ಇವಳು ನನ್ನ ಹುಡುಗಿ ಅಲ್ಲ ಎಂಬುದನ್ನು ನೆನೆಯಲಾರೆ..ಆ ಮಿಲನದ ಕ್ಷಣಗಳನ್ನು ಊಹಿಸಲಾರೆ.. ಏನಿತ್ತು ಅಲ್ಲಿ ? ಪ್ರೀತಿಯೇ ಅಲ್ಲವೇ ?
@@@@@@@@@@@@@@@@@@
ನಾವು ತಪ್ಪು ಮಾಡಿದ್ದೇವೆ ಅಂತ ನನಗೆ ಈಗಲೂ ಅನಿಸುತ್ತಿಲ್ಲ..ಎಂದಳು.ನಾನೂ ಹಾಗೆಂದು ಊಹಿಸಿಲ್ಲವಲ್ಲಾ.ಏನು ತಪ್ಪು ಎಂದರೆ. ಸರಿಯಾದುದು ಇದು ಅಂತ ಹೇಳಿದರೆ ಅಲ್ಲದ್ದು ತಪ್ಪು ಎಂದಾಗುತ್ತದಾ ?ಇಷ್ಟಕ್ಕೂ ಇದು ಸರಿ ಇದೇ ಸರಿ ಅಂತ ಹೇಳಿದ್ದು ಯಾರು?ತಪ್ಪು ಎಲ್ಲಿದೆ ?ನಮ್ಮ ಮನಸ್ಸಿಗೆ ಹಿತ ಅಂತ ಆಗದಿದ್ದರೆ ಅದು ತಪ್ಪು ಅಂತ ಆಗಿಬಿಡುತ್ತದೆ.ನನಗೆ ಈ ಕ್ಷಣವೂ ಮಾಡಿದ್ದೆಲ್ಲಾ ಹಿತವಾಗಿಯೇ ಇದೆ.ಆ ಕಾಡು ದಾರಿಗೆ ಹೆಸರಿಟ್ಟವಳು ಅವಳೇ..ಬೃಂದಾವನ..ಮೊದಲಬಾರಿಗೆ ಕರೆದವಳೂ ಅವಳೇ..ಒಮ್ಮೆ ಹೋಗಿಬರೋಣ.ಯಾಕೆ ಕರೆದಳು?ಆ ಫೆಬ್ರವರಿ ಇಪ್ಪತ್ತೆರಡನೇ ತಾರೀಕಿಗೆ ಮೊದಲ ಬಾರಿಗೆ ಅಲ್ಲಿಗೆ ಹೋಗುತ್ತಿದ್ದಾಗ..ಉಫ್.. ನೀನು ಬಂದಿದ್ದೀ ಎಂದರೆ ನನಗೆ ಈಗಲೂ ನಂಬಲಾಗುತ್ತಿಲ್ಲ.. ಎಂದಳು.ಬೆನ್ನಹಿಂದೆ ಅವಳು ಬರಸೆಳೆದು ಅಪ್ಪಿಕೊಂಡು ಕೊರಳು ತುಂಬಾ ಪೋಣಿಸಿದ ಮುತ್ತಿನಹಾರದಲ್ಲಿ ರಾತ್ರಿ ಮನೆಗೆ ಬಂದು ಹುಡುಕಿದಾಗ ಕಂಡದ್ದು ಅವಳ ಹಲ್ಲಿನ ಗುರುತು ಅಂದರೆ ಒಂದು ಕಪ್ಪು ಕಲೆ.ಹಾಗೆಂದು ಹೇಳಿದರೆ,ನನ್ನ ತೊಡೆಯಲ್ಲಿ ನೀನು ಒತ್ತಿದ ಬೆರಳಚ್ಚು ಇನ್ನೂ ಹಾಗೇ ಇದೆ ವಾರ ಕಳೆದರೂ ಎಂದಿದ್ದಳು.ಎಷ್ಟು ಬಾರಿ ಬೃಂದಾವನದಲ್ಲಿ ಓಡಿಯಾಡಿದೆವು ಅಂತ ಅವಳಿಗೆ ಲೆಕ್ಕ ಸಿಕ್ಕಿರಲಿಲ್ಲ,ಹೇಳಿದಾಗ ನಂಬಲೂ ಇಲ್ಲ.ಇಪ್ಪತ್ತೊಂದು ಬಾರಿ..ಇನ್ನೊಂದೇ ಒಂದು ಸಾರಿ ಹೋಗೋಣ..ಎಂದಿದ್ದಳು..ಹಬ್ಬಾ ಅಷ್ಟೊಂದು ಬಾರಿ ಹೋಗಿಯೂ ನಮ್ಮ ಸಂಯಮವನ್ನು ನಾವು ಕಳೆದುಕೊಳ್ಳಲಿಲ್ಲ ಅಲ್ಲಾ ಏಕೋ ಕಳೆದುಕೊಳ್ಳಬೇಕಿತ್ತಾ..ಊಹೂಂ..ಅದನ್ನೇ ಡಿವೈನಿಟಿ ಅಂತ ನೀನು ಅನೇಕ ಬಾರಿ ಕರೆದಿದ್ದೆ.ಒಮ್ಮೆ ಆ ಸಂಯಮ ಕಳೆದವಳಂತೆ ಆಹ್ವಾನಿಸಿದ್ದೆ..ಹಬ್ಬಾ..ಈಗ ಊಹಿಸಿದರೆ ನಿನ್ನ ಸಂಯಮ ಅಚ್ಚರಿ ಹುಟ್ಟಿಸುತ್ತದೆ..ನನ್ನೊಳಗೆ ಒಮ್ಮೆ ಬಂದು ಬಿಡು ಎಂದುಬಿಟ್ಟೆ.ನೀನು ಆಗ ಅದು ಹೇಗೆ ನನ್ನನ್ನು ಸಂತೈಸಿದೆ ಮುಠ್ಠಾಳ..ಈಗ ಹಾಯೆನಿಸುತ್ತದೆ.ಹಗ್..ಬರೀ ಹಗ್..ಮತ್ತು ಅದೇ ಹಗ್..ಅದರಲ್ಲಿ ಅಷ್ಟೊಂದು ಆಪ್ತ ಎನಿಸಿಬಿಟ್ಟೆ.ಅಷ್ಟು ಸಾಕು.
@@@@@@@@@@@@@@@@@@@@@@@@@@
ಏನಿದೆ ಅಂತ ನನ್ನಲ್ಲಿ ನೀನು ಹುಡುಕಿದ್ದು.ಒಡೆದು ಬಿದ್ದ ಕೊಳಲು ನಾನೀಗ.ಇದರಲ್ಲಿ ಎಲ್ಲಿದೆ ನಾದ ? ಕೇಳಬೇಕು ಹಾಗೇ ಅಂದರೆ ಹೊರಟವಳ ಸಂತೋಷವನ್ನು ಕಸಿಯಬಾರದು ಎಂದು ಮನಸ್ಸು ಮುಂದಾಗಿ ಬೋಧಿಸುತ್ತದೆ.ಅಂದೆಲ್ಲಾ..ಪ್ರತೀ ನಿತ್ಯ ಮಾತನಾಡದಿದ್ದರೆ ಏನೋ ಕಾಣದಂಥ ಅನುಭವ. ಮಾತನಾಡಿದ ಮೇಲೆ ಇನ್ನೇನೋ ಬಾಕಿ ಇತ್ತು ಎಂಬ ಸಂಕಟ..ಇಂದೂ ಹಾಗೇ ಆಗುತ್ತಿದೆ,ಮಾತನಾಡಲಾರೆ ಮಾತಾಡದೇ ಉಳಿಯಲಾರೆ..ಇವಳಿಲ್ಲದೇ ಇರೋದಾದರೂ ಹೇಗೆ ಅವಳಿಗೂ ಹಾಗೇ ಅನಿಸಬಹುದಾ ?ಎಲ್ಲಾ ನನಗೇ ಬಿಟ್ಟುಬಿಡು ಎಂದಳು.ನಿನ್ನ ಬಿಟ್ಟುಹೋಗುತ್ತಿದ್ದೇನೆ ನಿಜ,ಆದರೆ ನಿನ್ನನ್ನು ಬಿಟ್ಟೇ ಬಿಟ್ಟೇ ಎಂದರ್ಥ ಅಲ್ಲ ಎಂದಳು.ಅವಳು ಹಾಗೆಂದಾಗ ದುಃಖ ಉಮ್ಮಳಿಸಿದಂತಾಗುತ್ತದೆ,ಅದು ಅವಳಿಗೂ ಗೊತ್ತಾಗುತ್ತದೆ.ನನಗೆ ಅವನ ಸಾನ್ನಿಧ್ಯದಲ್ಲಿ ಸೆಕ್ಯೂರ್ ಅನಿಸುತ್ತಿದೆ ಎನ್ನುತ್ತಾಳೆನಿನ್ನ ಜೊತೆ ಆ ಕಾರಲ್ಲಿ ಬೃಂದಾವನಕ್ಕೆ ಹೋಗುತ್ತಿದ್ದಾಗಲೆಲ್ಲಾ ನೀನು ಡ್ರೈವ್ ಮಾಡ್ತಾ ಇದ್ದರೆ ನಾನು ನಿನ್ನ ತೊಡೆ ಮೇಲೆ ಮಲಗಿ ಕಣ್ಣುಮುಚ್ಚಿ ಅನುಭವಿಸುತ್ತಿದ್ದೆ ನೋಡು ಆ ಭದ್ರತೆ..ಆಗ ನೀನು ಒಂದು ಕೈಯಲ್ಲಿ ನನ್ನ ತಲೆ ನೇವರಿಸುತ್ತಿದ್ದೆ..ಆ ಸೆಕ್ಯೂರ್ ಇವನಲ್ಲಿ ಹುಡುಕುತ್ತೇನೆ..ಸಿಕ್ಕರೆ ಅದು ನಿನ್ನದು ಅಂತ ತಿಳ್ಕೊಳ್ಳುವೆ..ಒಂದೇ ಒಂದು ಬಾರಿ ಹಗ್ ಮಾಡು.. ನಾನು ಹೊರಡುವ ಮೊದಲು..॒ಯಾರನ್ನು ಹಗ್ ಮಾಡಲಿ,ನೀನೇ ಇಲ್ಲದ ಮೇಲೆ..ಎಂದರೆ,ನನ್ನ ಎಂದು ಮುಂದಾದಳು..ಸರಸೀ ನೀನು ನನಗೆ ಕಾಣಿಸ್ತಾನೇ ಇಲ್ಲ..ಎನ್ನುತ್ತಿದ್ದಂತೆ ಕಣ್ಣು ತೋಯ್ದಿತ್ತು..ಅವಳು ಕಾಣಿಸುತ್ತಿರಲಿಲ್ಲ..ಆಮೇಲೆ ಅವಳು ಅವನ ಜೊತೆ ಸುಖವಾಗಿದ್ದಳು.
Categories: ಕನ್ನಡ ಪುಟಗಳು
ಹಾಡು-ಪಾಡು
ವಿರಹಎಂದರೆಹಾಯಿ ಇಲ್ಲದಒಂಟಿ ದೋಣಿ
ವಿರಹ ಎಂದರೆಒಂದೇ ದಡದನದಿ
ವಿರಹಎಂದರೆನೀರು ಆರಿದಮರಳು
ವಿರಹಎಂದರೆಯಾರೂ ಮೆಟ್ಟದಸೇತು
ವಿರಹಎಂದರೆಬತ್ತದ ಹಳ್ಳಹರಿಯದ ಹೊಳೆಮೀನಿಲ್ಲಿದ ನದಿಮತ್ತುಅವಳಿಲ್ಲದ ಅವನು
Categories: ಕನ್ನಡ ಪುಟಗಳು
ಅಶಾಶ್ವತ
ಪ್ರೀತಿಗಿಂತಲೂವಿರಹಆಪ್ತಕಂಸನಿಗೆ ಕೃಷ್ಣನ ಕನಸಿನಂತೆರಾಧೆಗೂ ಗಂಡನಿದ್ದಕೃಷ್ಣನಲ್ಲಿಅವಳಿಗೆವಿರಹದ ಭಯವಿತ್ತಂತೆಪ್ರೀತಿಸುವುದುಆಕಸ್ಮಿಕವಿರಹ ಮಾತ್ರಾ ಅನಿವಾರ್ಯಒಂದೇ ಕೊಡೆಒಂದೇ ಬಿಸಿಲುನೆರಳು ಮಾತ್ರಾ ಎರಡುಒಂದೇ ಮನಸ್ಸುಒಂದು ಕ್ಷಣಎರಡಾದಾಗ ಅದು ಜಗದ ನಿಯಮದ್ವೈತ ಎಂದರೆ ಅವನೂ ಅವಳೂಅದ್ವೈತ ಎಂದರೆ ಅಖಂಡ ಪ್ರೇಮ
Categories: ಕನ್ನಡ ಪುಟಗಳು
ಣಮೋ ವೆಜ್ಜಿಸಂ

ಜನ ಮಾಂಸ ತಿನ್ನೋದನ್ನು ಬಿಡುತ್ತಿದಾರಂತೆ ! ಗಡ್ಡೆಗೆಣಸಿನತ್ತ ನೋಡಲಾರಂಭಿಸಿದ್ದಾರಂತೆ.ಹುಲ್ಲು ತಿನ್ನೋ ದನಗಳಿಗೇ ಮಾಂಸ ತಿನ್ನಿಸಿ ದನಗಳಿಗೆ ಹುಚ್ಚು ಹಿಡಿಸಿ,ಮನುಷ್ಯರೂ ಹುಚ್ಚು ಹಿಡಿಸಿಕೊಂಡು ಸತ್ತದ್ದು ಹಳೆ ಕಥೆ.ಈಗ ಎಲ್ಲೆಲ್ಲೂ ವೆಜ್ಜಿಸಂ.. ಹೆಲ್ತ್ ವೆಲ್ತ್ ಹೆಪ್ಪಿನೆಸ್..ಘೋಷಣೆ.ವೆಜ್ಜಿಸಂ ಕ್ಲಬ್‌ಗೆ ಸೇರಿ ಅಂತ ಅಂತರ್‌ಜಾಲ ತುಂಬಾ ಆಹ್ವಾನ.ಒಂದು ದಿಟ್ಟ ನಿರ್ಧಾರ ಮಾಡಿಬಿಡಿ,ಅಂದರೆ ಮಾಂಸ ಸಾಕು ಸಸ್ಯ ಬೇಕು ಅಂತ ಹೊರಟುಬಿಡಿ, ಆಮೇಲೆ ಯೂ ಆರ್ ಡಿಫೆರೆಂಟ್..ಅಂತ ಕರೆಗಳು.. ಒಂದು ಬಿಸ್ಕಿಟ್ ಪ್ಯಾಕೇಟಲ್ಲೂ ಚೌಕುಳಿಯ ನಡುವೆ ಹಸುರು ಬಿಂದು ಮುದ್ರೆ ಕಾಣಿಸುತ್ತಿರುವುದು ಈ ಜಾಗತಿಕ ನೋಟವಾದ ವೆಜ್ಜಿಸಂ ಕಾರಣಕ್ಕೇ.ಮಾಂಸ ಏನು ಅಗ್ಗ ಅಲ್ಲವಂತೆ.ಒಂದು ಕಿಲೋ ಚಿಕನ್ ನಿಮ್ಮ ಮನೆಗೆ ಬರಬೇಕಾದರೆ ಅದಕ್ಕೆ ಹತ್ತು ಕಿಲೋ ಧಾನ್ಯ ಖರ್ಚಾಗಿದೆ ಎಂದರ್ಥ. ಅದೇ ನಿಮ್ಮ ಬಾಡೂಟಕ್ಕೆ ಒಂದು ಕಿಲೋ ಮಟನ್ ತಂದರೆ, ಅಷ್ಟೂ ಮಟನ್ ನೂರು ಕಿಲೋ ಧಾನ್ಯ ಮುಕ್ಕಿ ತಯಾರಾಗಿರುತ್ತದೆ.ಕೃಷಿ ಅಂಕಿ ಅಂಶ ಇಲಾಖಾ ವರದಿ ಪ್ರಕಾರ ಒಂದು ಹೆಕ್ಟೇರು ಪ್ರದೇಶದಲ್ಲಿ ಇಪ್ಪತ್ತು ಸಾವಿರ ಕಿಲೋ ಬಟಾಟೆ ಬೆಳೆಯಬಹುದು. ಅದೇ ಜಾಗದಲ್ಲಿ ಹುಲ್ಲು ಬೆಳೆಸಿ ಆಡು, ಕುರಿಗಳಿಗೆ ತಿನ್ನಿಸಿದರೆ ೫೦ ಕಿಲೋ ಮಾಂಸ ಸಿಗುತ್ತದೆ.ಒಂದು ಸಾವಿರ ಹೆಕ್ಟೇರ್ ಸೋಯಾ ಬೆಳೆದರೆ ೧೧೨೪ ಕಿಲೋ ಪ್ರೋಟೀನ್ ಸಿಗುತ್ತದೆ. ಅದೇ ಭತ್ತ ಬೆಳೆದರೆ ೯೩೮ ಕಿಲೋ ಪ್ರೋಟೀನ್ ಉತ್ಪಾದನೆ ಆದಂತಾಯಿತು. ಜೋಳ ಹಾಕಿದರೆ ೧೦೪೩ ಕಿಲೋ ಪ್ರೋಟೀನ್ ಲಭ್ಯ.ಇಷ್ಟನ್ನೆಲ್ಲಾ ಸೇರಿಸಿ ಕೋಣಗಳಿಗೆ ತಿನ್ನಿಸಿ ಆಮೇಲೆ ಆ ಕೋಣವನ್ನು ಸಿಗಿದರೆ ಸಿಗೋದು ೬೦ ಕಿಲೋ ಪ್ರೋಟೀನ್ ಮಾತ್ರ ಎನ್ನುತ್ತದೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿ.ಬ್ರಿಟನ್‌ನಿಂದ ಬಂದಿರೋ "ವೆಜ್ಜಿಸಂ' ವರದಿ ನೋಡಿ. ಅಲ್ಲಿ ಹೇಳಿಕೇಳಿ ೭೦-೮೦ ಮಿಲಿಯ ಜನ. ಅಲ್ಲಿ ಶೇ.೯೦ ಕೃಷಿ ಭೂಮಿಯಲ್ಲಿ ಬೆಳೆದದ್ದನ್ನು ಹಾಕೋದು ಜಾನುವಾರುಗಳಿಗೆ. ಏಕೆಂದರೆ ಜಾನುವಾರು ಕೊಬ್ಬಿ ಮಾಂಸ ಉತ್ಪಾದನೆ ಮಾಡಬೇಕು. ಕೃಷಿ ಭೂಮಿಯಲ್ಲಿ ಬೆಳೆದದ್ದನ್ನು ಜನ ತಿಂದರೆ ೨೫೦ ಮಿಲಿಯ ಜನರಿಗೆ ಬಿರಿಯುವಷ್ಟು ತಿಂದು ತೇಗಬಹುದು.ಇನ್ನು ಅಮೆರಿಕಾದ ಕತೆ. ಅಲ್ಲಿ ಜೋಳ ಬೆಳೆದು, ತಿನ್ನೋದು ಜನರಲ್ಲ, ದನಗಳು. ಬೀಫ್ ಮಾರುಕಟ್ಟೆಗೆ ಅವರು ಕೊಡುವ ಜೋಳ ಜಾಗತಿಕ ಮಾರುಕಟ್ಟೆಗೆ ಬಂದರೆ ಜೋಳ ಧಾರಣೆ ಈಗಿರುವ ಅರ್ಧಕ್ಕೆ ಇಳಿಯಬಹುದು. ಇನ್ನು ದಕ್ಷಿಣ ಅಮೆರಿಕೆಯ ನಿತ್ಯ ಹರಿದ್ವರ್ಣ ಕಾಡುಗಳು ಬೀಫ್‌ಗಾಗಿ ಆಹಾರ ಬೆಳೆಸಲು ನಾಶವಾಗುತ್ತಿವೆ. ದಿನಾ ಮಾಂಸ ತಿನ್ನುವವರಿಂದಾಗಿ ಭಾರತದಲ್ಲಿ ಇಪ್ಪತ್ತು ಮಿಲಿಯ ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಧಾನ್ಯ ಪೋಲಾಗುತ್ತಿದೆ. ಈಗಿರುವ ಮಾಂಸ ಉತ್ಪಾದನೆಯಲ್ಲಿ ಶೇ.೧೦ರಷ್ಟು ಕುಸಿತವಾದರೆ ಸಾಕು, ೬೦ ಮಿಲಿಯ ಜನರಿಗೆ ಬೇಕಾದಷ್ಟು ಬೇಳೆ ಕಾಳು ತರಕಾರಿ ನೀಡಬಹುದು ಎನ್ನುತ್ತಾರೆ ವಿeನಿಗಳು.ನಿಮಗೆ ಗೊತ್ತಾ? ಈ ಭಾರತದಲ್ಲಿ ಇಷ್ಟೊಂದು ಜನ ಇದ್ದರೂ ಹಸಿವಿನ ತಾಂಡವ ಏಕಿಲ್ಲ ಎಂದರೆ ಅದಕ್ಕೆ ಕಾರಣ ನಾವು ವೆಜ್‌ಗಳಾಗಿರೋದೇ. ಒಂದು ವೇಳೆ ಭಾರತೀಯರೆಲ್ಲಾ ಮಾಂಸ ಮುಕ್ಕಲು ಶುರು ಮಾಡಿದರೆ, ಈ ಭೂಗ್ರಹದಲ್ಲಿ ಬೆಳೆದದ್ದು ಏನೇನೂ ಸಾಲದು.ಇಷ್ಟಕ್ಕೂ ಜೀವನದ ಯಶಸ್ಸಿನ ಗುಟ್ಟು ಇರೋದು ಸಸ್ಯಾಹಾರದಲ್ಲೇ. ಪ್ರಾಣಿಜನ್ಯ ಪ್ರೋಟೀನ್ ಸೇವಿಸುವವರಲ್ಲಿ ಐಕ್ಯೂ ಕೊರತೆ ಢಾಳಾಗಿ ಕಾಣುತ್ತದೆ ಎನ್ನುತ್ತದೆ ಮಾಂಸ ತಿಂದ ವಿeನಿಗಳೇ ಕೊಟ್ಟ ವರದಿ.ಇಷ್ಟೆಲ್ಲಾ ಈಗ ಗೊತ್ತಾಗುತ್ತಿದೆ ಎಂದಲ್ಲ.ಎಂದೋ ಗೊತ್ತೇ ಇದೆ,ಆದರೆ ತಿನ್ನುವಾಗ ಯಾವುದೂ ನೆನಪಾಗುವುದಿಲ್ಲ!
Categories: ಕನ್ನಡ ಪುಟಗಳು
ಸಾಯಬಾರದು ಎಂದುಕೊಂಡ ರಾಜನ ಕತೆ
ಒಬ್ಬ ರಾಜ. ಅವನ ಹೆಸರು ಏನೋ ಇದೆ.ಇಲ್ಲಿ ಅದರ ಅಗತ್ಯವಿಲ್ಲ. ಅವನಿಗೆ ಮಕ್ಕಳಿಲ್ಲ ಎಂಬ ಚಿಂತೆ ಇಲ್ಲ.ಏಕೆಂದರೆ ಅವನಿಗೆ ತುಂಬಾ ಮಕ್ಕಳಿದ್ದರು. ದೇಶ, ಕೋಶಗಳ ಬಗ್ಗೆ ಚಿಂತೆಯೂ ಇರಲಿಲ್ಲ. ಅವನೊಬ್ಬ ಅಜೇಯ.ಅವನು ಶಕ್ತಿಶಾಲಿ.ಆದರೆ ಅವನಿಗೆ ಇದ್ದಕ್ಕಿದ್ದಂತೆ ಒಂದು ಭಯ ಆವರಿಸಿಬಿಟ್ಟಿತು. ನಮಗೂ ಆಗುವಂಥದ್ದೇ.ಅದೇನೆಂದರೆ ಸಾವು. ಸಾವಿನ ಭಯ.ಸಾಯುತ್ತೇನಲ್ಲಾ ಎಂಬ ಹೆದರಿಕೆ.ವಯಸ್ಸಾಗುತ್ತದಲ್ಲಾ ಎಂಬ ದುಃಖ.ದಿನೇ ದಿನೇ ವಯಸ್ಸಾಗುತ್ತದೆ. ಆಮೇಲೆ ಮುದುಕನಾಗುತ್ತೇನೆ ಆಮೇಲೆ ಕಾಯಿಲೆ ಬೀಳುತ್ತೇನೆ..ಕಾಯಿಲೆ ಬೀಳದಿದ್ದರೂ ಸಾಯುವುದಂತೂ ಖಂಡಿತ.ರಾಜ ಆಸ್ಥಾನಪಂಡಿತರ ಸಭೆ ಕರೆದ.ದೀರ್ಘಕಾಲ ಎಂದರೆ ಎಷ್ಟು ವರ್ಷ ಬದುಕಬಹುದು ಎಂದ.ನೂರಾಇಪ್ಪತ್ತು ಎಂದರು ಪಂಡಿತರು.ರಾಜ ತನ್ನ ವಯಸ್ಸು ಎಷ್ಟೆಂದು ಕೇಳಿದ.ಐವತ್ತು ಎಂದರು ಮಂತ್ರಿಗಳು.ಹಾಗಾದರೆ ತಾನು ಇನ್ನು ಅಬ್ಬಬ್ಬಾ ಎಂದರೂ ಎಪ್ಪತ್ತು ವರ್ಷ ಮಾತ್ರಾ ಬದುಕುವುದುಂಟು ಎಂದು ರಾಜ ಚಿಂತಾಕ್ರಾಂತನಾದ.ಸಾವೇ ಬರಬಾರದು.. ಎಂದು ಹೇಳಿದ.ಅಂಥದ್ದೊಂದು ಔಷಧ ಬೇಕು. ಇಡೀ ರಾಜ್ಯದಲ್ಲಿ ಡಂಗುರ ಸಾರಿರಿ. ರಾಜನಿಗೆ ಸಾವೇ ಇರದಂಥ ಔಷಧ ತಂದು ಕೊಟ್ಟವರಿಗೆ ಅರ್ಧರಾಜ್ಯ ಕೊಡಲಾಗುವುದು ಎಂದು ಹೇಳಿರಿ ಎಂದ.ರಾಜಾಜ್ಞೆ. ಹಾಗೇ ಮಾಡಲಾಯಿತು.ಎಂಥೆಂತ ವೈದ್ಯರು ಸಾಲುಗಟ್ಟಿ ಬಂದರು.ಔಷಧ ಇದೆ ಎಂದರು.ಅದನ್ನು ರಾಜ್ಯದ ಮೂಲೆಮೂಲೆಗಳಿಂದ ಹೊತ್ತು ತಂದ ಇನ್ನೇನು ಸಾಯುತ್ತಾರೆ ಎಂಬ ಹಾಗಿದ್ದ ಮುದುಕರು,ರೋಗಿಗಳಿಗೆ ನೀಡಿ ಪ್ರಯೋಗಿಸಲಾಯಿತು.ಪ್ರಯೋಜನವಾಗಲಿಲ್ಲ.ಸುಳ್ಳು ಔಷಧ ತಂದರೆ ತಲೆ ಕತ್ತರಿಸಲಾಗುವುದು ಎಂದು ರಾಜ ಘೋಷಿಸಿದ.ಆಮೇಲೆ ಯಾರೂ ಔಷಧ ತರೋ ದುಸ್ಸಾಹಸ ಮಾಡಲಿಲ್ಲ.ಹೀಗಿದ್ದಾಗ ಒಬ್ಬ ಪಂಡಿತ ಆಸ್ಥಾನ ಪ್ರವೇಶಿಸಿದ.ಸಾವೇ ಬಾರದ ಔಷಧಿ ತನ್ನ ಬಳಿ ಇದೆ ಎಂದ.ತಲೆದಂಡ ಗೊತ್ತಲ್ಲಾ ಎಂದ ರಾಜಹೌದು ಮಹಾ ಪ್ರಭೂ..ಗೊತ್ತಿದೆ.ಎಂದ ಆ ಪಂಡಿತನ ಮಾತಿನಲ್ಲಿ ಅದ್ಯಾವುದೋ ಗತ್ತು ಘನಸ್ತಿಕೆಯನ್ನು ರಾಜಸಭೆಯೇ ಕಂಡಿತು.ಎಲ್ಲಿದೆ ನಿನ್ನ ಔಷಧ ಎಂದು ಕೇಳಿದ ರಜ.ಒಂದು ಪಾತ್ರೆಯನ್ನು ಜೋಳಿಗೆಯಿಂದ ಹೊರತೆಗೆದ ಪಂಡಿತ.ಅದರಲ್ಲಿ ಇದದ್ದ್ದು ಎಣ್ಣೆ.ಮಹಾರಾಜಾ ಈ ಎಣ್ಣೆಯನ್ನು ದಿನವೂ ರಾತ್ರಿ ಹಾಸಿಗೆಯಲ್ಲಿ ಮಲಗುವ ಮುನ್ನ ತಲೆಗೆ ಹಚ್ಚಿಕೊಳ್ಳಿ ಅಷ್ಟು ಸಾಕು.ಈ ಪಾತ್ರೆಯಲ್ಲಿ ಎಣ್ಣೆ ಮುಗಿದ ಮೇಲೆ ನಿಮಗೆ ಚಿರಂಜೀವಿತ್ವ ಖಚಿತ ಎಂದ ಪಂಡಿತ.ರಾಜನಿಗೆ ಅಚ್ಚರಿ.ಹೌದೇ.. ಎಂದಿತು ರಾಜಸಭೆ.ಆದರೆ..ಎಂದ ಪಂಡಿತ,ಆದರೆ? ಏನು ಆದರೆ..?ಇಡೀ ಸಭೆ ಕೇಳಿತು.ಮಹಾರಾಜಾ ನಾನು ನೀಡಿರುವ ಈ ತೈಲವನ್ನು ತಾವು ತಲೆಗೆ ಹಚ್ಚಿಕೊಳ್ಳುವ ಹೊತ್ತಿನಲ್ಲಿ ತಮಗೆ ಕೋತಿಯ ನೆನಪಾಗಬಾರದು..ಕೋತಿಯ ನೆನಪು ಏನಾದರೂ ಬಂದರೆ ಈ ತೈಲ ಪ್ರಯೋಜನ ನೀಡಲಾರದು..ಎಂದ ಪಂಡಿತ.ಅಷ್ಟೇ ತಾನೇ ..ಎಂದ ರಾಜ.ಪಂಡಿತನನ್ನು ಅರಮನೆಯ ಅತಿಥಿಗೃಹದಲ್ಲಿ ರಾಜೋಪಚಾರಗಳೊಂದಿಗೆ ಉಪಚರಿಸುವಂತೆ ರಾಜ ಆದೇಶಿಸಿದ.ರಾತ್ರಿಯಾಯಿತು.ರಾಜ ಶಯ್ಯಾಗೃಹಕ್ಕೆ ಬಂದ.ಎಣ್ಣೆ ಪಾತ್ರೆ ಎತ್ತಿಕೊಂಡ.ಕೋತಿಯ ನೆನಪಾಗಬಾರದು ಎಂದು ಪಂಡಿತ ಹೇಳಿದ್ದು ನೆನಪಾಯಿತು.ಝುಂ ಎಂದಿತು ಮನಸ್ಸು.ಮರುದಿನವೂ ರಾತ್ರಿ ಹಾಸುಗೆಗೆ ಹೋಗಲು ಅನುವಾದಗಲೂ ಎಣ್ಣೆ ಕೈಗೆ ಹಾಕಿಕೊಳ್ಳಬೇಕೆಂಬಷ್ಟರಲ್ಲೇ ಮತ್ತೆ ಕೋತಿಯ ನೆನಪು..ಮೂರನೇ ದಿನವೂ ಅದೇ ಕೋತಿಯ ನೆನಪು.ಯಾವಾಗ ಎಣ್ಣೇ ತಲೆಗೆ ಹಚ್ಚಿಕೊಳ್ಳಬೇಕು ಎಂದು ಪಾತ್ರೆ ಎತ್ತಿದನೋ ಕೋತಿಯ ನೆನಪು ಬಂದೇಬರತೊಡಗಿತು.ಆಮೇಲೆ ಆ ರಾಜ ಆ ದಿವ್ಯೌಷಧಿಯನ್ನು ಎಂದೂ ತಲೆಗೆ ಹಚ್ಚಿಕೊಳ್ಳಲು ಆಗಲೇ ಇಲ್ಲ.ಪ್ರತೀ ಬಾರಿಯೂ ಆ ಕೋತಿಯ ನೆನಪು ಅವನನ್ನು ಬಿಡಲೇ ಇಲ್ಲ.
(ಈ ಕತೆ ನಾನು ಎಲ್ಲೋ ಕೇಳಿದ್ದು.ಯಾರೋ ಹೇಳಿದ್ದು.ಈ ವರ್ತಮಾನಕ್ಕೆ ಈ ಕತೆ ತುಂಬಾ ಹೊಂದಿಕೊಳ್ಳುತ್ತಿದೆ.ಅದಕ್ಕೆ ನಿಮಗೂ ಹೇಳಿದ್ದೇನೆ)
Categories: ಕನ್ನಡ ಪುಟಗಳು
ಅಂತೆಕಂತೆ
ಹಕ್ಕಿಯಷ್ಟು ಎತ್ತರ ನಾನು ಎಂದೂ ಏರಿಲ್ಲಅದಕ್ಕೆ ಭೂಮಿ ನನಗೆ ಈಗಲೂ ತುಂಬಾ ದೊಡ್ಡದು,ಹಕ್ಕಿ ಚಿಕ್ಕದು.ಚಿರತೆಯಷ್ಟು ವೇಗವಾಗಿನಾನುಎಂದೂ ಓಡಿಲ್ಲಅದಕ್ಕೆ ಸಾವು ನನಗೆ ಅಂಜಿಕೆ,ಚಿರತೆ ಎಂದರೆ ಹೆದರಿಕೆ.ಹೂವಿನಂತೆ ನಾನು ಎಂದೂ ಅರಳಿಲ್ಲ,ನಿನ್ನೆ ಮೊಗ್ಗಾಗಿಇಂದು ಹೂವಾಗಿಅದಕ್ಕೆ ಹೂವು ನನಗೆಅಚ್ಚರಿಅವಳಂತೆ ನಾನು ಎಂದೂ ಈ ತನಕ ಪ್ರೀತಿಸಿಲ್ಲಅದಕ್ಕೇ ಅವಳುನನಗೆ ಹಕ್ಕಿಯಂತೆ,ಚಿರತೆಯಂತೆ ಮತ್ತು ಹೂವಿನಂತೆ..
Categories: ಕನ್ನಡ ಪುಟಗಳು
ಒಬ್ಬಳೇ...
ಏಳು ಮಲ್ಲಿಗೆ ತೂಕದ ರಾಜಕುವರಿ..ಏಳು ಕೋಟೆಯಾಚೆಏಳು ನದಿಗಳಾಚೆಏಳು ಬೆಟ್ಟಗಳಾಚೆ..ಅವನಿಗೆ ಮಾತ್ರಾ ಗೊತ್ತಿದೆಅವಳು ಏಳು ಮಲ್ಲಿಗೆಯ ಘಮಅವಳು ಏಳು ಬೆಟ್ಟಗಳ ಪ್ರೀತಿಅವಳು ಏಳು ನದಿಗಳ ಆತುರಅವಳು ಏಳು ಕೋಟೆಗಳ ಬೆಚ್ಚನೆನದಿಗಳು ಮಳೆಯನ್ನು ನುಂಗುವವುಬೆಟ್ಟಗಳು ಗಾಳಿಯನ್ನು ತಡೆಯುವವುಕೋಟೆಗಳು ಛಳಿಯನ್ನು ಕದಿಯುವವುಅವನು ಎಂದು ಬರುವನೋಕಾಯಬೇಕುಅವಳು ಮತ್ತುನದಿ ಬೆಟ್ಟ ಕೋಟೆ ಎಲ್ಲವೂ
Categories: ಕನ್ನಡ ಪುಟಗಳು
