ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ನೂರು ಕನಸು

Syndicate content
URL: http://noorukanasu.blogspot.com/
Updated: 3 hours 35 min ago

ಈಶ್ವರ್ ಅಲ್ಲಾ...

Sat, 2008-11-29 14:12
ಸುಮ್ಮನಿರೋಣ ಅಂದುಕೊಂಡಿದ್ದು ನಿಜ. ಆದರೆ ಯಾಕೋ ಬೇಜಾರಾಗಿದೆ. ಯಾಕೋ ಬರೆಯಲೇಬೇಕೆನ್ನಿಸಿದೆ.ईश्वर अल्लाह तेरे जहाँ में नफ़रत क्यों है जंग है क्यों तेरा दिल तो इतना बड़ा है इन्साँ का दिल तंग है क्यों... क़दम क़दम पर सरहद क्यों है सारी ज़मीं जो तेरी है सूरज के फेरे करती है फिर भी कितनी अंधेरी है इस दुनिया के दामन पर इन्साँ के लहू का रंग है क्यों... ईश्वर अल्लाह तेरे जहाँ में नफ़रत क्यों है, जंग है क्यों तेरा दिल तो
Categories: ಕನ್ನಡ ಪುಟಗಳು

ವಿವಾದಕ್ಕೋಸ್ಕರವಲ್ಲ, ಆದರೆ ಸ್ಪಷ್ಟನೆ...

Sat, 2008-11-22 13:45
ನನಗೆ ಕೆಲಸ ಕಲಿಸಿದ ಪಾಠಶಾಲೆ ರಾಮೋಜಿ ಫಿಲ್ಮ್ ಸಿಟಿ, ಅಲ್ಲಿರುವಾಗ ಹಿತ್ತಲ ಗಿಡ ಮದ್ದಲ್ಲವೆಂಬಂತೆ ಗುಣಾತ್ಮಕ ಅಂಶಗಳನ್ನು ಕಡೆಗಣಿಸಿ ಋಣಾತ್ಮಕವಾದುದನ್ನೇ ನಾನು ನೋಡಿದ ದಿನಗಳೂ ಇತ್ತು. ಆದರೆ, ಈಗ ಅಲ್ಲಿನ ವ್ಯವಸ್ಥೆಯ ಬಗ್ಗೆ ದೂರ ನಿಂತು ನೋಡುವಾಗ, ರಾಮೋಜಿ ರಾವ್ ಬಗ್ಗೆ ಹೆಮ್ಮೆಯೆನಿಸುತ್ತದೆ, ಅದಕ್ಕೆ ನನಗನಿಸಿದ್ದು ಬರೆಯಬೇಕೆನಿಸಿತು, ಬರೆದೆ... ಪ್ರತಿಕ್ರಿಯಿಸಿದವರಿಗೆ ಧನ್ಯವಾದಗಳು... ಯಾವುದೇ controversy ಎಬ್ಬಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ, ಅದರಲ್ಲೊಂದು
Categories: ಕನ್ನಡ ಪುಟಗಳು

ಕರಿಪರದೆ

Sat, 2008-11-22 13:36
ಆರ್ಕಿಡ್ ಹೋಟೆಲ್ ಕಟ್ಟಿದ ಹೋಟೆಲಿಯರ್ ವಿಠಲ ಕಾಮತ್ ಆತ್ಮಕಥೆ ಓದುತ್ತಿದ್ದೆ, ಅದರಲ್ಲಿದ್ದ ಸಾಲುಗಳು...डूबता सूरज् हूँ, कोई पूजता नहीँ...कल सुबह निकलूँगा, देवता बन जावूँगा...ಜಗತ್ತಿನಲ್ಲಿ ಗೆಲುವು ಎಷ್ಟು ಮುಖ್ಯ ಎನ್ನುವ ಕಹಿ ಸತ್ಯದ ಬಗ್ಗೆ ಪ್ರಾಕ್ಟಿಕಲ್ ಆಗಿ ಬರೆದ ಸಾಲುಗಳು, ಯಾಕೋ ಅರಗಿಸಿಕೊಳ್ಳಲು ಕಷ್ಟವಾದರೂ ಸತ್ಯವೆನಿಸಿದವು.-----------------------------ಯಾಕೋ ಮಾತಿನ ಜಗತ್ತು ಸಾಕಾಗಿದೆ, ಕನಸು ಕಟ್ಟುವುದು ನಿಲ್ಲಬೇಕಿದೆ... ಮೌನ ಒಂದಿಷ್ಟು ದಿನ ಬೇಕೆನಿಸಿದೆ
Categories: ಕನ್ನಡ ಪುಟಗಳು

ನೀವು ಕಾಣುವುದರ ಹಿಂದಿರುವ ನೀವು ಕಂಡಿಲ್ಲದವರು...!

Sun, 2008-11-16 13:13
ನನ್ನಂಥ ನೂರಾರು ಮಂದಿಯನ್ನು ಹುಟ್ಟುಹಾಕಿದ ಸಂಸ್ಥೆ... ಅದರ ಹಿಂದಿನ ಶಕ್ತಿಯನ್ನು ಈಗ ಇಷ್ಟು ದೂರದಿಂದ ನೋಡುವಾಗಲೂ ಹೆಮ್ಮೆಯೆನಿಸುತ್ತದೆ, ಬರೆಯಲು ಒಂದು ಸಾರಿ ಸಂಕೋಚವಾಯಿತು, ಆದರೂ, ಬರೆಯುತ್ತಿದ್ದೇನೆ... 'ಟೆಲಿವಿಶನ್ ಪ್ರೊಡಕ್ಷನ್ ಬಗ್ಗೆ ನಿಂಗೆ ಏನೇನು ಗೊತ್ತು?' ಓದಿದ್ದು ಸಮೂಹ ಸಂವಹನವಾದರೂ, ಪ್ರೊಡಕ್ಷನ್ ಅಂದರೇನು ಅಂತ ಪ್ರಾಯೋಗಿಕವಾಗಿ ಗೊತ್ತಿಲ್ಲದಿದ್ದ ಕಾಲವದು. ಹಾಗಾಗಿ ನನಗೆ ಸುಳ್ಳುಹೇಳುವ ಇರಾದೆಯಿರಲಿಲ್ಲ, 'ಏನೂ ಗೊತ್ತಿಲ್ಲ' ಅಂತ ನೀಟಾಗಿ ಒಪ್ಪಿಕೊಂಡು ಬಿಟ್ಟೆ...
Categories: ಕನ್ನಡ ಪುಟಗಳು

ನಂಗೆ ಖುಷಿಯಾಗಿದೆ...! :-)

Sun, 2008-11-09 00:22
ವೀರಪ್ಪನ್-ಗೆ ಆನೆಕಳ್ಳ, ದಂತಚೋರ ಇತ್ಯಾದಿ ಬಿರುದುಗಳಿಟ್ಟು ಆತನನ್ನು ಕಳ್ಳರ ಕಳ್ಳನಾಗಿ, ಮಹಾಖದೀಮನಾಗಿ ಮಾಡಿದ್ದರಲ್ಲಿ ಮಾಧ್ಯಮಗಳ ಪಾಲೂ ಇದೆ ಎಂದರೆ ಒಪ್ಪತಕ್ಕಂಥ ಮಾತು. ಅದಕ್ಕೆ ನೂರು ಕಾರಣಗಳಿದ್ದಿರಬಹುದು, ಅದು ಬೇರೆ ಮಾತು. ಆದರೆ, ಗೊತ್ತಿದ್ದವರಿಗೆ ಗೊತ್ತಿರುತ್ತದೆ, ವೀರಪ್ಪನ್ ಹೆಸರಲ್ಲಿ ಆನೆ ಕೊಲ್ಲುತ್ತಿದ್ದವರು ಯಾರು ಅಂತ. ವೀರಪ್ಪನ್ ಆನೆ ಕೊಂದೇ ಇಲ್ಲ ಅಂತಲ್ಲ, ಆದ್ರೆ ಸತ್ತ ಎಲ್ಲಾ ಆನೆಗಳೂ ವೀರಪ್ಪನ್ ಕೈಲಿ ಸಾಯಲಿಲ್ಲ ಅನ್ನುವುದು ಹಸಿ ಹಸಿ ಸತ್ಯ. ತಂತಿಬೇಲಿಗೆ ಹೈ ವೋಲ್ಟೇಜ್
Categories: ಕನ್ನಡ ಪುಟಗಳು

ಎಂದೋ ಬರೆದ ಅಪೂರ್ಣ ಚಿತ್ರ...

Mon, 2008-11-03 23:16
ಸ್ಫೂರ್ತಿ: ಚಂದದ ಕೆಲವು ಸಾಲುಗಳು
Categories: ಕನ್ನಡ ಪುಟಗಳು

ದೇವರು ಹೆಚ್ಚಿದ ದೀಪ...

Sun, 2008-10-26 00:06
ಮಾನವನೆದೆಯಲಿ ಆರದೆ ಉರಿಯಲಿ ದೇವರು ಹೆಚ್ಚಿದ ದೀಪ ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪ ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ ಕೆನ್ನೆಯ ಸವರುವ ಪ್ರೀತಿ ಇರಿಯುವ ಮುಳ್ಳಿನ ನಡುವೆಯೆ ನಗುವುದು ಗುಲಾಬಿ ಹೂವಿನ ರೀತಿ... ಉರಿಯನು ಕಾರುವ ಆಗಸ ತಾರದೆ ತಂಪನು ತೀಡುವ ಮಳೆಯ? ಲಾವಾರಸವನು ಕಾರುವ ಧರೆಯೇ ನೀಡದೆ ಅನ್ನದ ಬೆಳೆಯ? ಹಮ್ಮು ಬಿಮ್ಮುಗಳ ಮರುಳುಗಾಡಿನಲಿ ಎಲ್ಲೋ ತಣ್ಣನೆ ಚಿಲುಮೆ ತಾಪವ ಹರಿಸಿ ಕಾಪಾಡುವುದು ಒಳಗೇ ಸಣ್ಣಗೆ ಒಲುಮೆ... - ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಮ್ಮ
Categories: ಕನ್ನಡ ಪುಟಗಳು

ಲ್ಯಾಂಡ್ ಲೈನೂ - ಮೊಬೈಲೂ

Sun, 2008-10-12 21:53
>>>>>>>>>>>>>>>>>>>>>>>ಗಂಟೆ ಸರಿಯಾಗಿ ಹನ್ನೊಂದೂಮುಕ್ಕಾಲು. ರಾಜ್ಯದ ಒಂದು ಕಡೆ ಸಿಎಂ ಭೇಟಿ ಇದ್ದರೆ, ಇನ್ನೊಂದು ಕಡೆ ಯಾವುದೋ ಮಠದ ಸ್ವಾಮೀಜಿ ಪ್ರೆಸ್ ಕಾನ್ಫರೆನ್ಸ್, ಮತ್ತೊಂದೆಡೆ ಇಂಧನ ಸಚಿವರ ಭೇಟಿ... ಇದಲ್ಲದೇ ಅಲ್ಲಲ್ಲಿ ನಡೆಯುತ್ತಿರುವ ಧರಣಿಗಳು... ದಸರಾ ಮುಗಿಸಿ ಕಾಡಿಗೆ ಹೋಗ್ತಾ ಇರೋ ಆನೆಗಳು... ಹೀಗೆ ಒಂದು ಗಂಟೆಯ ಬುಲೆಟಿನ್ನಿಗೆ ಸುದ್ದಿಯ ಮಹಾಪೂರ ಹರಿದು ಹರ್ತಾ ಇರೋ ಟೈಮು. ಒಂದಾದ ಮೇಲೊಂದರ ಹಾಗೆ ಮೊಬೈಲಿಗೆ ಬರುತ್ತಾ ಇರುವ ಸುದ್ದಿ ಕರೆಗಳನ್ನು ರಿಸೀವ್ ಮಾಡುತ್ತ
Categories: ಕನ್ನಡ ಪುಟಗಳು

ಇದು ಜೀವನ... :)

Thu, 2008-10-09 18:27
Categories: ಕನ್ನಡ ಪುಟಗಳು

ಈ ಕನಸಿಗೆ ನೂರು ತುಂಬಿತು...!

Thu, 2008-10-09 18:27
ನಮ್ಮೆಲ್ಲರ ಕನಸಿಗೆ ಆದಿತ್ಯ ಬಣ್ಣ ಹಚ್ಚುತ್ತಿದ್ದಾಗ ತೆಗೆದ ಚಿತ್ರ...======================================== ಜನವರಿ ೨೯ಕ್ಕೆ ಈ ಕನಸಿಗೆ ನೂರು ತುಂಬಿತು...!
Categories: ಕನ್ನಡ ಪುಟಗಳು

ಲೆಕ್ಕವಿಲ್ಲದ ಕನಸುಗಳಲ್ಲಿ ಇದು 50ನೆಯದು... :-)

Thu, 2008-10-09 18:26
ಕರುಳ ಚಿಗುರು ಕಳಚಿದಾಗ ದೇಹ ಬರಿದು ಬರಿದು... ಮಮತೆಯೊರತೆಯೊಸರಬೇಕು ಮನಸು ಬರಿದು ಬರಿದು...! ನಲಿಯುತಿರಲಿ ಮಗುವು, ಬೇಲಿ ಮೀರಿ ಬೆಳೆದು ಹೊಳೆಯಲಿ... ಬಂಧವೆಂದು ಬಂಧನದಲಿ ಅಂತ್ಯ ಕಾಣದಿರಲಿ...! ಇಂತು ತಿಳಿದ ತಾಯಿ ಮಗುವ ಹೊರಗೆ ಆಡಬಿಟ್ಟಳು... ಬರಿದು ಮನವು, ಖಾಲಿ ಹೃದಯ ಅಡಗಿಸುತಲೆ ನಕ್ಕಳು...
Categories: ಕನ್ನಡ ಪುಟಗಳು

ಬೇಸರವಾದಾಗ..!

Thu, 2008-10-09 18:26
ಬೇಸರವಾದಾಗ ಮಾತ್ರ ಇಲ್ಲಿ ಬರುವುದಕ್ಕೆ ಇನ್ನೂ ಬೇಸರವಾಗ್ತಿದೆ!! ಬಣ್ಣ ಹಚ್ಚುವವರು... ಚಿತ್ರ ಯಾರದಾದರೇನು, ನಮ್ಮದೇ ಬಣ್ಣ ಅಂದುಕೊಂಡು ಹಚ್ಚುತ್ತೇವೆ... ಹಚ್ಚುತ್ತಿರುವ ತನಕ ನಮ್ಮದೇ ಬಣ್ಣ. ನಮ್ಮದೇ ಚಿತ್ರ ಕೂಡ. ಇವೆಲ್ಲ ಆಟ ನಡೆಯುವುದು ನಮಗೆ ಬೇಕಾದ ಬಣ್ಣ ಬೇಕಾದ ಹಾಗೆ ಹಚ್ಚಲು ಬಿಡುವವರೆಗೆ ಮಾತ್ರ!! ಯಾಕೆ? ಹೂಗಿಡಕ್ಕೆ ನೀರು ಹೊಯ್ದು, ಗೊಬ್ಬರ ಹಾಕಿ, ದಿನಾ ಅದು ಏನು ಮಾಡುತ್ತಿದೆಯೆಂದು ನೋಡಿ ಪ್ರೀತಿಯಿಂದ ಬೆಳೆಸುವುದು ಯಾಕೆ? ಕೊನೆಗೊಂದು ದಿನ ಹೂಬಿಟ್ಟಾಗ ಕೊಯ್ದು
Categories: ಕನ್ನಡ ಪುಟಗಳು

ಬಹಳ ದಿನಗಳ ಬಳಿಕ

Thu, 2008-10-09 18:24
ಬಹಳ ದಿನಗಳ ಬಳಿಕ ಶಕುಂತಲೆಯ ನೆನಪಾದ ದುಶ್ಯಂತ ಕಾಡಿಗೆ ಹೋದ ಅಲ್ಲೇ ಆತ ಬಿಟ್ಟು ಹೋದಲ್ಲೆ ಅದೇ ಆಶ್ರಮದಂಗಳದಲ್ಲೆ ಕುಳಿತಿದ್ದಳು ಆಕೆ... ಬಳಿಸಾರಿ ಕಣ್ಣಲ್ಲಿ ಕಣ್ಣಿಟ್ಟು ನೋಡಹೊರಟನಾತ ಆಕೆಯ ಕಣ್ಣಲ್ಲಿ ಅವನಿಗೆ ಕಂಡಿದ್ದು ಅವಳಲ್ಲ... ಸತ್ತ ಶಾಕುಂತಲೆ ಮತ್ತು ಶೂನ್ಯ
Categories: ಕನ್ನಡ ಪುಟಗಳು

ನಿಶೆ, ನಶೆ, ಉಷೆ... ಮತ್ತು ಹೀಗೊಬ್ಬ ಪ್ರೀತಿಕಾರ :)

Thu, 2008-10-09 18:23
ಇಳೆಯನ್ನು ನಿಶೆ ತಬ್ಬಿಕೊಳ್ಳುತ್ತಿರುವ ತಂಪು ಹೊತ್ತಿನಲ್ಲಿ ನಶೆಯ ರಂಗೇರಿಸಿಕೊಂಡ ನಿಶಾಚರನೊಬ್ಬ ರಸ್ತೆ ಬದಿಯ ಮಸುಕು ದೀಪದಡಿ ಮಿಸುಕಾಡುತ್ತ ಕುಳಿತಿದ್ದ. ಅವನ ಜೋಶ್-ಬಾರಿತನಕ್ಕೆ ಕೈಲಿದ್ದ ಮೊಬೈಲು ಕಂಪೆನಿ ನೀಡಿತ್ತು. ಮೊಬೈಲಿನ ಎಲ್ಲಾ ನಂಬರುಗಳನ್ನೂ ಒಂದರ ನಂತರ ಒಂದರಂತೆ ನೋಡುತ್ತ ಕುಳಿತವನಿಗೆ ಒಂದು ನಂಬರು ಸಿಕ್ಕಾಪಟ್ಟೆ ಸೆಳೆಯಿತು. ಅದು ಚಂದದ ನಂಬರಾಗಿ ಕಂಡಿತು. ಹಾಗೇ ಅದರಲ್ಲಿದ್ದ ಎಲ್ಲಾ ನಂಬರನ್ನೂ ಒಂದಕ್ಕೊಂದು ಕೂಡಿಸಿದ. ಒಂದೊಂದು ಸರ್ತಿ ಕೂಡಿಸಿದಾಗ ಒಂದೊಂದು ಉತ್ತರ ಬಂತು.
Categories: ಕನ್ನಡ ಪುಟಗಳು

ಎಲ್ಲವೂ ಸರಿಯಿತ್ತು...

Thu, 2008-10-09 18:22
ಮಟಮಟ ಮಧ್ಯಾಹ್ನ, ಅಂದು ದೂರದೂರಿಗೆ ಪಯಣ... ಕಣ್ಣು ತೇವವಾಗಿಸಿಕೊಂಡು ಕಳಿಸಿಕೊಟ್ಟ ಅಮ್ಮನ ಮುಖ, ಕಾಳಜಿಯಿಂದ ಬಸ್ಸು ಹತ್ತಿಸಿದ ಅಪ್ಪನ ಮುಖವನ್ನು ಮರೆಯಲೆತ್ನಿಸುತ್ತಾ ಆಕೆ ಬಸ್ಸಿನಲ್ಲಿ ಕುಳಿತಿದ್ದಳು. ಒಂದು ದಿನದ ಪಯಣ, ಕಿಟಿಕಿ ಬದಿಯ ಸೀಟು. ಓದಲೆಂದು ಸುಧಾ, ತರಂಗ... ಬೋರಾದಾಗ ಬಾಯಿಯಾಡಿಸಲೆಂದು ಅಮ್ಮ ಕಟ್ಟಿಕೊಟ್ಟ ಚಕ್ಕುಲಿ... ಜತೆಗೆ ರಜಾದಲ್ಲಿ ಮನೆಯಲ್ಲಿ ಕಳೆದ ನೆನಪುಗಳು. ಆಕೆ ಸುಧಾ ತೆರೆದು ಕಥೆಯೊಂದನ್ನು ಓದಲು ಶುರುಮಾಡಿದಳು. ಹಾಗೇ ಅದರಲ್ಲಿ ಮುಳುಗಿದಳು. ಬಸ್ಸು ಹೊರಡಲು ಇನ್ನು
Categories: ಕನ್ನಡ ಪುಟಗಳು

ಒಂದಿಷ್ಟು ಮಳೆಗಾಲ, ಮೀನು ಮತ್ತು ಚಿನ್ನು

Thu, 2008-10-09 18:22
ಕಮಲನ ಮನೆಯಲ್ಲಿದ್ದ ದೊಡ್ಡ ಕರಿ ಭೂತಬೆಕ್ಕು ಕಳೆದ ಬೇಸಗೆ ಶುರುವಾಗುತ್ತಿದ್ದಂತೆ ಒಂದೇ ಸಲಕ್ಕೆ ಆರು ಮರಿ ಹಾಕಿತ್ತು. ಅಲ್ಲೇ ಇದ್ದ ಪುಟ್ಟಣ್ಣಜ್ಜನ ಮನೆಗೆ ಹಾಲು ತರಲು ಅಮ್ಮನ ಜತೆ ಚಿನ್ನು ಹೋಗಿದ್ದಾಗ 'ಪುಚ್ಚೆ ಕಿಞ್ಞಿ ದೀತುಂಡು, ತೂಪರಾ ಅಕ್ಕ' ಅಂತ ಕಮಲ ಕರೆದಿದ್ದಳು. ಚಿನ್ನುವಿಗೆ ಬೆಕ್ಕೆಂದರೆ ತುಂಬ ಇಷ್ಟವಾದ ಕಾರಣ ಅಮ್ಮನಿಗೂ ಮನೆಗೊಂದು ಬೆಕ್ಕಿನ ಮರಿ ತರೋಣವೆಂದು ಮನಸಿತ್ತು. ಹಾಗೆ ಚಿನ್ನು ಮತ್ತೆ ಅಮ್ಮ ಕಮಲನ ಮನೆಗೆ ಹೋದರು. ಇನ್ನೂ ಪೂರ್ತಿ ಕಣ್ಣು ಬಿಡದ ಕರಿಯ ಮತ್ತು ಕಪ್ಪು-ಬಿಳಿ
Categories: ಕನ್ನಡ ಪುಟಗಳು

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator