27
August
2014

Planet Kannada | ಪ್ಲಾನೆಟ್ ಕನ್ನಡ

ಅಂತರ್ಜಾಲದ ಕನ್ನಡ ಪುಟಗಳು ಅಂತರ್ಜಾಲದ ಕನ್ನಡ ಜಗತ್ತು

ಪ್ಲಾನೆಟ್ ಕನ್ನಡ
ಅಂತರ್ಜಾಲದ ಕನ್ನಡ ಜಗತ್ತು

ಏನಿದು ಪ್ಲಾನೆಟ್ ಕನ್ನಡ?

ಸಂಪದ Sampada
ಇದು ಸಂಪದದ ಒಂದು ಯೋಜನೆ.

ನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.

 

ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.

ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಸುದ್ದಿ

ಬೆಂಗಳೂರು, ಆ.27 : ಸಂಪುಟ ವಿಸ್ತರಣೆಗಾಗಿ ಕಾದು ಕುಳಿತಿದ್ದ ಶಾಸಕರಿಗೆ ಸಚಿವರಾಗುವ ಭಾಗ್ಯ ಒದಗಿ ಬಂದಿದೆ. ಗೌರಿ-ಗಣೇಶ ಹಬ್ಬದ ನಂತರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ಸಮನ್ವಯ ಸಮತಿ ಸಭೆಯ ಬಳಿಕ ಮಾತನಾಡಿದ ಸಿಎಂ, ಗೌರಿ-ಗಣೇಶ ಹಬ್ಬದ ಬಳಿಕ ಸಚಿವ ಸಂಪುಟ ಸಭೆಯನ್ನು ವಿಸ್ತರಣೆ ಮಾಡಲಾಗುತ್ತದೆ. ಅದಕ್ಕೂ ಮೊದಲು ದೆಹಲಿಗೆ

Source: ಒನ್ ಇಂಡಿಯಾ - ಕನ್ನಡ

ಬೆಂಗಳೂರು, ಆ.27 : ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಡೆಯುವಾಗ ಖಾಸಗಿ ಚಾನೆಲ್‌ಗಳನ್ನು ವಿಧಾನಸೌಧದಿಂದ ದೂರವಿಡಲು ಸರ್ಕಾರ ಚಿಂತನೆ ನಡೆಸಿದೆ. ಲೋಕಸಭೆ, ರಾಜ್ಯಸಭೆ ಚಾನೆಲ್‌ಗಳ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಸರ್ಕಾರಿ ವಾಹಿನಿ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇದು ಅನುಷ್ಠಾನವಾದಲ್ಲಿ ಖಾಸಗಿ ಚಾನೆಲ್‌ಗಳ ಕ್ಯಾಮೆರಾಗಳನ್ನು ವಿಧಾನಮಂಡಲದೊಳಗೆ ನಿಷೇಧಿಸಲಾಗುತ್ತದೆ. ಮಂಗಳವಾರ ಖಾಸಗಿ ಕೇಬಲ್ ನೆಟ್‌ವರ್ಕ್ ಮಾಲೀಕರ ಜತೆ ವಿಕಾಸಸೌಧದಲ್ಲಿ

Source: ಒನ್ ಇಂಡಿಯಾ - ಕನ್ನಡ

ಬೆಂಗಳೂರು: ಮಾಹಿತಿ ಹಕ್ಕು ಕಾಯಿದೆಯನ್ವಯ ಮಾಹಿತಿ ನೀಡದೆ ಛೀಮಾರಿ ಹಾಕಿಸಿಕೊಳ್ಳುವವರ ಸರದಿಯಲ್ಲಿ ಇದೀಗ ರಾಜ್ಯದ ಸಚಿವರೂ...

Source: ಕನ್ನಡಪ್ರಭ

ದಶಕದಲ್ಲೇ ಔನ್ನತ್ಯ, ಅವನತಿ ಎರಡನ್ನೂ ಕಂಡ ರೆಡ್ಡಿ ಬಳಗ, ಪೇದೆಯ ಮಕ್ಕಳಾಗಿ...

Source: ಕನ್ನಡಪ್ರಭ

1971ರ ಯುದ್ಧದ ಬಳಿಕ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಇಷ್ಟೊಂದು ದೊಡ್ಡ...

Source: ಕನ್ನಡಪ್ರಭ

ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ 1993ರಿಂದ 2010ರವರೆಗೆ ಭಾರಿ ಅಕ್ರಮಗಳಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರ್ಹತೆ ಇಲ್ಲದ ಕಂಪೆನಿಗಳಿಗೆ ಯಾವುದೇ ಮಾನದಂಡಗಳನ್ನು ಅನುಸರಿಸದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿರುವ ಬಗ್ಗೆ ಹಿಂದಿನ ಎನ್‌ಡಿಎ ಹಾಗೂ ಯುಪಿಎ ಸರ್ಕಾರಗಳನ್ನು ಕೋರ್ಟ್ ತರಾಟೆಗೆ ತೆಗೆದು­ಕೊಂಡಿದೆ. ಇದರಿಂದಾಗಿ, ಕಲ್ಲಿದ್ದಲು ನಿಕ್ಷೇಪಗಳ ಒಡೆತನ ಭಾರತದ ಕೆಲವೇ ಉದ್ಯಮಿಗಳಲ್ಲಿ ಕೇಂದ್ರೀಕೃತಗೊಂಡಂತಾಗಿದೆ ಎಂಬುದು ಗಂಭೀರವಾದ ಸಂಗತಿ.

Source: ಪ್ರಜಾವಾಣಿ - ಸಂಪಾದಕೀಯ

ಮಕ್ಕಳ ಭವಿಷ್ಯಕ್ಕೆ ಬುನಾದಿ ಪ್ರಾಥಮಿಕ ಶಾಲಾ ಶಿಕ್ಷಣ. ಆದರೆ ನಮ್ಮಲ್ಲಿ ಈ ಬುನಾದಿಯೇ ಅಲುಗಾಡುತ್ತಿದೆ. ಕಲಿಕೆಯ ಮಟ್ಟ ಹಾಗೂ ಕಲಿಸುವವರ ಅರಿವಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇವೆ. ಶಿಕ್ಷಕ ವೃತ್ತಿಯನ್ನು, ಹೊಟ್ಟೆ­ಪಾಡಿಗಾಗಿ ನಿರ್ವಹಿಸುವ ಇನ್ನಿತರ ಯಾವುದೇ ಒಂದು ಕೆಲಸ ಎಂಬಂತೆ ಭಾವಿಸುವವರ ಸಂಖ್ಯೆ ಹೆಚ್ಚುತ್ತಿ­ರು­ವುದು ಹಾಗೂ ಅಂಥವರನ್ನು ತರಬೇತುಗೊಳಿಸುವ ಬಹುಪಾಲು ಸಂಸ್ಥೆಗಳು ವೃತ್ತಿಪರತೆಯಿಂದ ಬಹುದೂರ ಸರಿದು, ಲಾಭಕೋರ ದಂಧೆಯಲ್ಲಿ ಮುಳು­ಗಿರುವುದು ಇದಕ್ಕೆ ಪ್ರಮುಖ ಕಾರಣ.

Source: ಪ್ರಜಾವಾಣಿ - ಸಂಪಾದಕೀಯ

ಮುಂಬೈನಲ್ಲಿ ಆಹಾರ ಧಾನ್ಯಗಳಲ್ಲಿ ರೂಪ ತಳೆಯುತ್ತಿರುವ ಗಣಪತಿ ಬಪ್ಪ... 

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಷ್ಠರಾದ, ಗುಜರಾತ್ ವಿಧಾನಸಭೆ ಸ್ಪೀಕರ್‌ ವಾಜುಭಾಯ್‌ ವಾಲಾ (76) ಅವರನ್ನು ಕರ್ನಾಟಕದ ರಾಜ್ಯಪಾಲ­ರಾಗಿ ನೇಮಕ ಮಾಡಲಾಗಿದೆ.

ಎಚ್‌.ಆರ್‌. ಭಾರದ್ವಾಜ್‌ ಅವ­ರಿಂದ ತೆರವಾದ ಕರ್ನಾಟಕ ರಾಜ್ಯ­ಪಾಲರ ಹುದ್ದೆ ಮೇಲೆ ಕೇರಳ ಬಿಜೆಪಿ ನಾಯಕ ಒ. ರಾಜಗೋಪಾಲ್‌, ಮಾಜಿ ಕೇಂದ್ರ ಸಚಿವ ವಿಜಯ ಕುಮಾರ್‌ ಮಲ್ಹೋತ್ರಾ, ಖ್ಯಾತ ವಕೀಲ ಸೋಲಿ ಸೊರಾಬ್ಜಿ ಅವರೂ ಸೇರಿದಂತೆ ಅನೇಕರು ಕಣ್ಣಿಟ್ಟಿದ್ದರು. ಆದರೆ, ಯಾರೂ ನಿರೀಕ್ಷಿಸದ ವಾಜು­ಭಾಯ್‌ ಅವರನ್ನು ಗುಜರಾತಿನ ಗಾಂಧಿ ನಗರದಿಂದ ಕರ್ನಾಟಕದ ರಾಜಭವನಕ್ಕೆ ಕಳುಹಿಸುವ ತೀರ್ಮಾನ ಮಾಡಿ ಅಚ್ಚರಿ ಮೂಡಿ­ಸಲಾಗಿದೆ.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ (ಪಿಟಿಐ): ಇಲ್ಲಿಯ ಸೇಂಟ್‌ ಮೇರಿಸ್ ಶಾಲೆಯ ಒಂಬ­ತ್ತನೇ ತರಗತಿ ವಿದ್ಯಾರ್ಥಿ ಯಶ­ವರ್ಧನ್ ಶುಕ್ಲಾ 13ನೇ ವರ್ಷ­­­ದಲ್ಲಿಯೇ ಕಾದಂಬರಿ ಬರೆದ ಶ್ರೇಯಕ್ಕೆ ಪಾತ್ರನಾಗಿ­ದ್ದಾನೆ.

ರಾಕ್ಷಸರ ದಾಳಿಯಿಂದ ತನ್ನ ಎಲ್ಲ ಕುಟುಂ­ಬದ ಸದಸ್ಯರನ್ನು ಕಳೆದುಕೊಂಡು ಆಕ­ಸ್ಮಿಕ­ವಾಗಿ ದಕ್ಷಿಣ ಧ್ರುವಕ್ಕೆ ಬಂದಿಳಿ­ಯುವ ಡೇವಿಡ್‌ ಎಂಬ ಶಾಲಾ ಬಾಲಕ ದೇವರು ಮತ್ತು ರಾಕ್ಷಸ­ರೊಂ­­ದಿಗೆ ಮುಖಾ­­ಮುಖಿ­ಯಾಗುವ ಕಥೆ­ಯನ್ನು ಯಶ­ವರ್ಧ­ನ್‌ನ ‘ಗಾಡ್ಸ್‌ ಆಫ್‌ ಅಂಟಾ­ರ್ಟಿಕ’ ಕಾದಂಬರಿ ಒಳಗೊಂಡಿದೆ. ಮೊದಲ ಕಾದಂಬರಿ­ಯ­ಲ್ಲಿಯೇ ಭರವಸೆ ಮೂಡಿ­­ಸಿರುವ ಯಶ್‌, ಪೌರಾ­ಣಿಕ ಕಥೆಗಳು, ಜೆ.ಕೆ. ರೌಲಿಂಗ್‌ ಅವರ ‘ಹ್ಯಾರಿ ಪಾಟರ್‌’ ಕೃತಿ ತನ್ನ ಮೇಲೆ ಪ್ರಭಾವ ಬೀರಿದೆ ಎನ್ನುತ್ತಾನೆ.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾ­ಕಾಂಕ್ಷಿ ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ಒತ್ತು ಕೊಡುವಂತೆ ಗ್ರಾಮೀಣ ಪ್ರದೇಶದ ಮನೆ­ಗಳಲ್ಲಿ ನಿರ್ಮಾಣ­ವಾಗುವ ಶೌಚಾ­ಲಯಗಳಿಗೆ ನೀಡುವ ಸಹಾಯ­ಧನವನ್ನು ಹೆಚ್ಚಿಸುವ ಪ್ರಸ್ತಾಪ­ವನ್ನು ಕೇಂದ್ರ ಸರ್ಕಾರ ಹೊಂದಿದೆ. ಶಾಲೆಗಳು ಮತ್ತು ಅಂಗನ­­ವಾಡಿ­ಗಳಲ್ಲಿ ನಿರ್ಮಾಣ­ವಾ­ಗುವ ಶೌಚಾ­­­ಲಯ­­ಗಳಿಗೆ ನೀಡುವ ಹಣ­ವನ್ನೂ ಹೆಚ್ಚಿಸಲು ಯೋಚಿಸ­ಲಾಗಿದೆ.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ (ಪಿಟಿಐ): ಯುಪಿಎ ಆಡಳಿತ ಅವಧಿಯಲ್ಲಿ ನೇಮಕ­ವಾದ ರಾಜ್ಯಪಾಲರ ರಾಜೀನಾಮೆ ಸರಣಿ ಮುಂದು­ವರಿದಿದ್ದು ನಿರೀಕ್ಷೆಯಂತೆ ಕೇರಳ ರಾಜ್ಯಪಾಲರಾದ ಶೀಲಾ ದೀಕ್ಷಿತ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ‘ಸೋಮ­ವಾರವೇ ರಾಜೀ­ನಾಮೆ ಸಲ್ಲಿಸಿದ್ದು, ಈ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳು­ವುದಿಲ್ಲ’ ಎಂದಿದ್ದಾರೆ.

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯ­ಪಾಲರ ಹುದ್ದೆಗೆ ರಾಜೀನಾಮೆ ಸಲ್ಲಿಸಿ­ದವರ ಪೈಕಿ ಇವರು ಎಂಟನೆಯವರು. ಈ ಮೊದಲು ಮಿಜೋರಾಂಗೆ ವರ್ಗಾ­­ವಣೆಯಾದ ಮಹಾ­ರಾಷ್ಟ್ರ ರಾಜ್ಯಪಾಲ ಶಂಕರ­ನಾರಾ­ಯಣನ್‌ ಸೇರಿ­ ಏಳು ರಾಜ್ಯಪಾಲರು ರಾಜೀನಾಮೆ ಸಲ್ಲಿಸಿ­­ದ್ದರು. ಇಬ್ಬರು ರಾಜ್ಯಪಾಲರನ್ನು ವಜಾ ಮಾಡಲಾಗಿತ್ತು.

Source: ಪ್ರಜಾವಾಣಿ - ರಾಷ್ಟ್ರೀಯ

ಮುಂಬೈ­(ಪಿಟಿಐ): ಬಾಲಿವುಡ್‌ ನಟ ಶಾರುಖ್‌­ಖಾನ್‌ಗೆ ಭೂಗತ ಜಗತ್ತಿನ ಬೆದರಿಕೆ ಹೆಚ್ಚುವ ಸಂಭವ ಇರುವು­ದ­ರಿಂದ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

‘ಅವರಿಗೆ ಈಗಾಗಲೇ ಪೊಲೀಸ್‌ ಭದ್ರತೆ ಇದೆ. ಭೂಗತಲೋಕದ ಬೆದ­ರಿಕೆ ಕಾರಣ ಭದ್ರತೆ ಹೆಚ್ಚಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿ­ಯೊಬ್ಬರು ಹೇಳಿದ್ದಾರೆ.

ಮುಂಬೈನ ಬಾಂದ್ರಾದಲ್ಲಿನ ಶಾರುಖ್‌  ನಿವಾಸಕ್ಕೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋ­ಜಿ­ಸ­ಲಾಗಿದೆ. ಎರಡು ದಿನಗಳ ಹಿಂದೆ  ಭೂಗತ ಪಾತಕಿ ರವಿಪೂಜಾರಿ, ಬಾಲಿವುಡ್‌ ಚಿತ್ರ ನಿರ್ಮಾಪಕ ಆಲಿ ಮೊರಾನಿ ಅವರಿಗೆ ಬೆದರಿಕೆ ಒಡ್ಡಿದ್ದ.

Source: ಪ್ರಜಾವಾಣಿ - ರಾಷ್ಟ್ರೀಯ

ತಿರುವನಂತಪುರ (ಪಿಟಿಐ): ರಾಜ್ಯದಲ್ಲಿ ಮದ್ಯದ ಲಭ್ಯತೆಯನ್ನು ಗಣನೀಯ ಪ್ರಮಾಣ­ದಲ್ಲಿ ಕಡಿಮೆ ಮಾಡು­­­ವುದ­ಕ್ಕಾಗಿ ಪಂಚತಾರಾ ಹೋಟೆಲ್‌ ಮಟ್ಟಕ್ಕಿಂತ ಕೆಳಗಿನ ಬಾರ್‌­ಗಳನ್ನು ಸೆಪ್ಟೆಂಬರ್‌ 12­ರೊ­ಳಗೆ ಮುಚ್ಚುವಂತೆ ಬಾರ್‌ ಮಾಲೀಕರಿಗೆ ನೋಟಿಸ್‌ ನೀಡಲು ಕೇರಳ ಸರ್ಕಾರ ನಿರ್ಧ­ರಿಸಿದೆ. 

Source: ಪ್ರಜಾವಾಣಿ - ರಾಷ್ಟ್ರೀಯ

ಕೋಲ್ಕತ್ತ (ಪಿಟಿಐ):  ಭಾರತದಲ್ಲಿ  ಕಳೆದ ದಶಕಗಳಿಂದ ಬಾಲ್ಯವಿವಾಹ ಪ್ರಕರಣಗಳು ಇಳಿಮುಖವಾಗಿದ್ದರೂ ಸಂಪೂರ್ಣ­­ವಾಗಿ ನಿರ್ಮೂಲನೆ­ಯಾ­ಗಲು  50 ವರ್ಷಗಳೇ ಬೇಕಾಗ­ಬಹುದು ಎಂದು ಯುನಿಸೆಫ್‌ ಹೇಳಿದೆ.

‘ಬಾಲ್ಯವಿವಾಹ ವರ್ಷಕ್ಕೆ ಶೇ ಒಂದ­ರಷ್ಟು ಇಳಿ­ಮುಖ­ವಾಗುತ್ತಿದೆ. ಆದರೆ ಇಷ್ಟು ಮಂದಗತಿಯಲ್ಲಿ ಸಾಗಿದರೆ ಬಾಲ್ಯ­ವಿವಾಹ ಸಂಪೂರ್ಣ ನಿರ್ಮೂ­ಲನೆಗೆ ಇನ್ನೂ 50 ವರ್ಷಗಳೇ ಬೇಕು. ಅಷ್ಟು ಹೊತ್ತಿಗೆ ಕೋಟ್ಯಂತರ ಹೆಣ್ಣು­ಮಕ್ಕಳ ಮದುವೆ ಎಳೆಪ್ರಾಯದಲ್ಲೇ ನಡೆ­ದಿರುತ್ತದೆ’ ಎಂದು ಭಾರತದಲ್ಲಿನ ಯುನಿ­ಸೆಫ್‌ ಮಕ್ಕಳ ರಕ್ಷಣಾ ತಜ್ಞೆ ಡೋರಾ ಗಿಸ್ಟಿ ಎಚ್ಚರಿಸಿದ್ದಾರೆ.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ (ಪಿಟಿಐ): ಬಿಜೆಪಿ ಸಂಸ­ದೀಯ ಮಂಡಳಿಯಿಂದ ಅತ್ಯಂತ ಹಿರಿಯರಾದ ಹಾಗೂ ‘ತ್ರಿಮೂರ್ತಿ­ಗಳು’ ಎಂದೇ ಹೆಸರಾದ ಎ.ಬಿ. ವಾಜ­ಪೇಯಿ, ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಕೈಬಿಡಲಾಗಿದೆ.

ಪಕ್ಷದ ಅತ್ಯುನ್ನತ ನಿರ್ಧಾರ ಸಮಿತಿ­ಯಿಂದ ಈ ಮೂವರನ್ನು ಕೈಬಿಡುವ ಮೂಲಕ ಪಕ್ಷದ ಹಿಡಿತವು ‘ಹೊಸ ಪೀಳಿಗೆ’ಗೆ ಸಂಪೂರ್ಣ ವರ್ಗಾವಣೆ­ಗೊಂಡಂತೆ ಆಗಿದೆ. ಅಲ್ಲದೇ, ಪಕ್ಷಕ್ಕೆ ಸಂಬಂಧಿಸಿದಂತೆ ಎಲ್ಲ ಹಂತಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಛಾಪು ನೆಲೆಗೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಈಗ ಈ ಮೂವರನ್ನು ಸಾಂಕೇತಿಕ ಗೌರವದ ದೃಷ್ಟಿ­ಯಿಂದ ಐವರು ಸದ­ಸ್ಯರ ‘ಮಾರ್ಗದರ್ಶಕ ಮಂಡಲ್‌’ಗೆ ಸೇರಿಸಿಕೊಳ್ಳಲಾಗಿದೆ. ಮೋದಿ, ರಾಜ­ನಾಥ್‌ ಸಿಂಗ್‌ ಈ ಮಂಡಳಿಯ ಇನ್ನಿಬ್ಬರು ಸದಸ್ಯರು.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ (ಐಎಎನ್‌ಎಸ್‌): ಹರಿ­ಯಾಣದಲ್ಲಿ 2012ರಲ್ಲಿ  ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಮಾಡಿದ್ದ ಮೂವರು ಆರೋಪಿಗಳಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ಕಾಯಂಗೊಳಿಸಿದೆ. 

ಮೂವರು ಆರೋಪಿಗಳು 19 ವರ್ಷದ ಯುವತಿ ಮೇಲೆ ಅತ್ಯಾ ಚಾರವೆಸಗಿ ಕೊಲೆ ಮಾಡಿದ್ದರು. ಈ ಕೃತ್ಯ ನಡೆಸಿದ್ದ 3 ಆರೋಪಿ­ಗಳಿಗೆ ವಿಚಾರಣಾ ನ್ಯಾಯಾಲಯ ಫೆಬ್ರುವರಿಯಲ್ಲಿ ಗಲ್ಲುಶಿಕ್ಷೆ ವಿಧಿಸಿತ್ತು. 

ದೆಹಲಿಯ ಕುತುಬ್ ವಿಹಾರ ಪ್ರದೇಶದಲ್ಲಿ ತನ್ನ ಸಹೋದ್ಯೋ­ಗಿಗಳ ಜತೆ ಗುಡ­ಗಾಂವ್‌­ನಿಂದ ಬರುತ್ತಿದ್ದ ಯುವತಿ ಯನ್ನು ರಾಹುಲ್‌, ರವಿ, ವಿನೋದ್‌ ಎಂಬು­ವರು ಕಾರ್‌­ನಲ್ಲಿ ಅಪಹರಿಸಿ ಅತ್ಯಾಚಾರ­ವೆಸಗಿ ಕೊಲೆಗೈದಿದ್ದರು. 

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ: ನಿಷೇಧಿತ ಉಗ್ರ ಸಂಘ­ಟನೆ ‘ಇಂಡಿಯನ್‌ ಮುಜಾಹಿ­ದೀನ್‌’  ಸ್ಥಾಪಕ ಅಮೀರ್‌ ರೆಜಾ ಖಾನ್‌­ನನ್ನು ಬಂಧಿಸಿದ್ದೇವೆ ಎಂದೇ ನಂಬಿದ್ದ ಭದ್ರತಾ ಸಂಸ್ಥೆಗಳಿಗೆ, ತಮ್ಮ ವಶ­ದಲ್ಲಿರುವ ವ್ಯಕ್ತಿ ಆತನಲ್ಲ ಎಂ­ಬುದು ನಂತರ ಗೊತ್ತಾದ ಘಟನೆ ನಡೆದಿದೆ.

ಕಳೆದ ವಾರ 38 ವರ್ಷದ ಶಂಕಿತ ವ್ಯಕ್ತಿಯೊಬ್ಬನನ್ನು ಯೂರೋಪಿನ ರಾಷ್ಟ್ರ­ವೊಂದರಲ್ಲಿ ವಶಕ್ಕೆ ತೆಗೆದು­ಕೊಳ್ಳ­­­ಲಾಗಿತ್ತು. ಹೀಗೆ ವಶಕ್ಕೆ ತೆಗೆದು­ಕೊಳ್ಳಲಾಗಿದ್ದ ವ್ಯಕ್ತಿ ಹೆಸರೂ ‘ಖಾನ್‌’ ಆಗಿತ್ತು. ನಂತರ ಈತನ ಭಾವಚಿತ್ರ­ವನ್ನು ಅಸಲಿ ಖಾನ್‌ನ ಚಿತ್ರದೊಂದಿಗೆ ಹೋಲಿಸಿ ನೋಡಿದಾಗ ಭದ್ರತಾ ಸಂಸ್ಥೆಯವರಿಗೆ ತಾವು ಬಂಧಿಸಿರುವುದು ಉಗ್ರ ಖಾನ್‌ ಅಲ್ಲ ಎಂಬುದು ದೃಢಪಟ್ಟಿತು.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ: ನಿಷೇಧಿತ ಉಗ್ರ ಸಂಘ­ಟನೆ ‘ಇಂಡಿಯನ್‌ ಮುಜಾಹಿ­ದೀನ್‌’  ಸ್ಥಾಪಕ ಅಮೀರ್‌ ರೆಜಾ ಖಾನ್‌­ನನ್ನು ಬಂಧಿಸಿದ್ದೇವೆ ಎಂದೇ ನಂಬಿದ್ದ ಭದ್ರತಾ ಸಂಸ್ಥೆಗಳಿಗೆ, ತಮ್ಮ ವಶ­ದಲ್ಲಿರುವ ವ್ಯಕ್ತಿ ಆತನಲ್ಲ ಎಂ­ಬುದು ನಂತರ ಗೊತ್ತಾದ ಘಟನೆ ನಡೆದಿದೆ.

ಕಳೆದ ವಾರ 38 ವರ್ಷದ ಶಂಕಿತ ವ್ಯಕ್ತಿಯೊಬ್ಬನನ್ನು ಯೂರೋಪಿನ ರಾಷ್ಟ್ರ­ವೊಂದರಲ್ಲಿ ವಶಕ್ಕೆ ತೆಗೆದು­ಕೊಳ್ಳ­­­ಲಾಗಿತ್ತು. ಹೀಗೆ ವಶಕ್ಕೆ ತೆಗೆದು­ಕೊಳ್ಳಲಾಗಿದ್ದ ವ್ಯಕ್ತಿ ಹೆಸರೂ ‘ಖಾನ್‌’ ಆಗಿತ್ತು. ನಂತರ ಈತನ ಭಾವಚಿತ್ರ­ವನ್ನು ಅಸಲಿ ಖಾನ್‌ನ ಚಿತ್ರದೊಂದಿಗೆ ಹೋಲಿಸಿ ನೋಡಿದಾಗ ಭದ್ರತಾ ಸಂಸ್ಥೆಯವರಿಗೆ ತಾವು ಬಂಧಿಸಿರುವುದು ಉಗ್ರ ಖಾನ್‌ ಅಲ್ಲ ಎಂಬುದು ದೃಢಪಟ್ಟಿತು.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ (ಪಿಟಿಐ):  ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಗ್ವಾಲಿಯರ್‌ನ ಮಾಜಿ ಜಿಲ್ಲಾ ನ್ಯಾಯಾ­ಧೀಶೆ, ಈ ಪ್ರಕರಣದ ತನಿಖೆ ನಡೆಸಲು ಮತ್ತೊಂದು ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಈಗಾಗಲೇ ರಚಿಸಲಾಗಿರುವ ತನಿಖಾ ಸಮಿತಿ ಕುರಿತು ಪ್ರಶ್ನೆಗಳು ಎದ್ದಿವೆ.

ಸುಪ್ರೀಂಕೋರ್ಟ್‌ಗೆ ಮಂಗಳವಾರ ಸಲ್ಲಿಸಿರುವ ಅರ್ಜಿಯಲ್ಲಿ ಈ ಮಹಿಳೆ, ತಾವು ಮಾಡಿರುವ ಆರೋಪಕ್ಕೆ ಸಂಬಂಧಿ­­ಸಿದಂತೆ ಇಬ್ಬರು ಹೈಕೋರ್ಟ್‌ ಮುಖ್ಯ­ನ್ಯಾಯ­ಮೂರ್ತಿ, ಒಬ್ಬ ಹೈಕೋರ್ಟ್‌ ನ್ಯಾಯಮೂರ್ತಿ ಇರುವ ತನಿಖಾ ಸಮಿತಿ ರಚಿಸುವಂತೆ ಮನವಿ ಮಾಡಿದ್ದಾರೆ.

Source: ಪ್ರಜಾವಾಣಿ - ರಾಷ್ಟ್ರೀಯ

ಚೆನ್ನೈ (ಪಿಟಿಐ): ಮಂಗಳ ನೌಕೆಯ (ಮಾರ್ಸ್‌ ಆರ್ಬಿಟರ್‌) ದ್ರವಚಾಲಿತ ಎಂಜಿ­ನ್ ಅನ್ನು ಮರುಚಾಲನೆಗೊಳಿಸುವ ನಾಜೂಕಿನ ಹಾಗೂ ಸವಾಲಿನ ಕಾರ್ಯ ಕೈಗೊಳ್ಳಲು ಇಸ್ರೊ ವಿಜ್ಞಾನಿಗಳು ಸಜ್ಜಾಗುತ್ತಿದ್ದಾರೆ.

ಕಳೆದ ನ.5ರಂದು ನಭಕ್ಕೆ ಚಿಮ್ಮಿದ ಈ ನೌಕೆಯು ಸೆ.24ರಂದು ಅಂಗಾರಕನ ಕಕ್ಷೆ ಪ್ರವೇಶಿಸುವ ನಿರೀಕ್ಷೆ ಇದ್ದು, ಅದೇ ದಿನ ಬೆಳಿಗ್ಗೆ 7.30ಕ್ಕೆ ವಿಜ್ಞಾನಿಗಳು ದ್ರವಚಾಲಿತ ಎಂಜಿನ್‌ಗೆ ಚಾಲನೆ ನೀಡಲಿದ್ದಾರೆ. ಈ ದ್ರವಚಾಲಿತ ಎಂಜಿನ್‌ ಸುಮಾರು 10 ತಿಂಗಳುಗಳಿಂದ ಸ್ತಬ್ಧ­ವಾಗಿದೆ. ಮಂಗಳನೌಕೆಯ ವೇಗವನ್ನು ತಗ್ಗಿಸುವ ಜತೆಗೆ ಅದನ್ನು ಮಂಗಳನ ಕಕ್ಷೆಗೆ ಸರಿಹೊಂದಿಸಲು ಈ ಎಂಜಿನ್‌ ಉರಿಸುವುದು ಅತ್ಯಗತ್ಯ ಎಂದು ಇಸ್ರೊ ತಿಳಿಸಿದೆ.

Source: ಪ್ರಜಾವಾಣಿ - ರಾಷ್ಟ್ರೀಯ

ಇಸ್ಲಾಮಾಬಾದ್/ನವದೆಹಲಿ (ಐಎಎನ್‌ಎಸ್‌): ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ನಿರ್ಮಾಣವಾ­ಗಿ­ರುವ ಉದ್ವಿಗ್ನ ಪರಿಸ್ಥಿತಿ ಶಮನ­ಕ್ಕೆ ಭಾರತ, ಪಾಕಿಸ್ತಾನ ಸೇನೆ  ಮಂಗ-­ಳ­ವಾರ ಪರಸ್ಪರ ಒಪ್ಪಿಗೆ ಸೂಚಿಸಿವೆ.

ಪಾಕಿಸ್ತಾನ ಪದೇ ಪದೇ ಕದನ ವಿರಾಮ ಒಪ್ಪಂದ ಉಲ್ಲಂಘಿ­ಸುತ್ತಿರುವ ಬಗ್ಗೆಯೂ ಭಾರತ ಇದೇ ವೇಳೆ ಪ್ರತಿ­ಭಟನೆ ವ್ಯಕ್ತ­ಪಡಿಸಿತು.

ಮಂಗಳವಾರ ಬೆಳಿಗ್ಗೆ ಹಾಟ್‌ಲೈನ್‌ನಲ್ಲಿ ಮಾತ­­ನಾ­ಡಿದ ಉಭಯ ರಾಷ್ಟ್ರಗಳ ಸೇನಾ ಕಾರ್ಯಾ­ಚರಣೆ ಮಹಾ ನಿರ್ದೇಶಕರು, ಗಡಿ­ಯಲ್ಲಿ ಉದ್ವಿಗ್ನ ಸ್ಥಿತಿ ತಿಳಿಗೊಳಿಸುವ ಒಪ್ಪಂ­ದಕ್ಕೆ ಬಂದಿದ್ದಾರೆ. ಪಾಕಿಸ್ತಾನದ ಸೇನಾ ಸಾರ್ವಜನಿಕ ಸಂಪರ್ಕ ಅಧಿ­ಕಾರಿಗಳು ಉಭಯ ರಾಷ್ಟ್ರ­ಗಳ ಸೇನಾಧಿಕಾರಿಗಳ ಮಧ್ಯೆ ನಡೆದಿರುವ ಮಾತುಕತೆಯನ್ನು ದೃಢಪಡಿಸಿದ್ದಾರೆ.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ತಾತ್ವಿಕ ಒಪ್ಪಿಗೆ ದೊರೆತ ನಂತ­ರವೂ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಅಭಯಾ­ರಣ್ಯ, ಪಕ್ಕದ ಮಲೆಮಹದೇಶ್ವರ ಬೆಟ್ಟ­ವನ್ನು ಹುಲಿ ಸಂರಕ್ಷಿತ ಅಭಯಾ­ರಣ್ಯ­ವ­ನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿ­ಸಲು ಕರ್ನಾಟಕ ಸರ್ಕಾರ ನಿರಾಸಕ್ತಿ ತೋರುತ್ತಿದೆ.

ಸುಮಾರು 20ಕ್ಕೂ ಹೆಚ್ಚು ಹುಲಿ­ಗಳಿ­ರುವ 2 ಸಾವಿರ ಚದರ ಕಿ.ಮೀ ವ್ಯಾಪ್ತಿ­ಯಲ್ಲಿನ ಈ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಅಭಯಾರಣ್ಯ  ಎಂದು ಘೋಷಿ­ಸಲು  ಪ್ರಾಧಿಕಾರದ ಸದಸ್ಯ  ಉಲ್ಲಾಸ್ ಕಾರಂತ ಪ್ರಸ್ತಾಪ ಸಲ್ಲಿಸಿದ್ದರು.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ: ಕರ್ನಾಟಕದಲ್ಲಿ ಗ್ರಾಮೀಣ ಜನರಿಗೆ ನೈರ್ಮಲ್ಯ ಸೌಲಭ್ಯಗಳನ್ನು ಕಾನೂನುಬದ್ಧ ಹಕ್ಕನ್ನಾಗಿಸುವ ಹೊಸ ಮಸೂದೆ­ಯನ್ನು ಮುಂಬರುವ ರಾಜ್ಯ ವಿಧಾನಸಭೆ ಅಧಿವೇಶ­ನದಲ್ಲಿ ಮಂಡಿಸಲಾಗುವುದು.

ಇದಕ್ಕಾಗಿ ‘ಕರ್ನಾಟಕ ಗ್ರಾಮೀಣ ನೈರ್ಮಲ್ಯ ಸೌಲಭ್ಯಗಳ ಖಾತ್ರಿ ಮಸೂದೆ– 2014’ರ ಕರಡು ಸಿದ್ಧ­ಗೊಂಡಿದೆ. ಗ್ರಾಮೀಣ ನೈರ್ಮಲ್ಯ ಯೋಜನೆಗಳಿಗೆ ಬಜೆಟ್‌ ಅನುದಾನ ಕಲ್ಪಿಸುವುದು ಹಾಗೂ ಈ ಯೋಜನೆ­ಗಳಿಗೆ ಬೇಕಾದ ಭೂ­ಸ್ವಾಧೀನಕ್ಕೆ ಅನುವು ಮಾಡಿ­ಕೊಡುವ ಉದ್ದೇಶವನ್ನು ಮಸೂದೆ ಹೊಂದಿದೆ.

Source: ಪ್ರಜಾವಾಣಿ - ರಾಷ್ಟ್ರೀಯ

ನವದೆಹಲಿ (ಪಿಟಿಐ): ಮುಜಫ್ಫರ್‌­ನಗರ ಗಲಭೆ ಆರೋಪಿ, ಬಿಜೆಪಿಯ ಶಾಸಕ ಸಂಗೀತ್‌ ಸೋಮ್‌ ಅವರಿಗೆ ಕೇಂದ್ರ ಸರ್ಕಾರ ‘ಝಡ್‌’ ಶ್ರೇಣಿಯ ಭದ್ರತೆ ಒದಗಿಸಿರುವುದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಕೇಂದ್ರದ ಈ ನಡೆ ‘ಹತ್ಯೆಗೆ ಲೈಸೆನ್ಸ್‌’ ನೀಡಿದಂತೆ ಎಂದು ಕಾಂಗ್ರೆಸ್‌ ಹೇಳಿದೆ.

ಉತ್ತರಪ್ರದೇಶದ ಸಾರ್ಧಾನ ಕ್ಷೇತ್ರದ ಶಾಸಕರಾಗಿರುವ ಸೋಮ್‌ ಅವರ ಮೇಲೆ ಉಗ್ರರು ಕಣ್ಣಿಟ್ಟಿರುವ ಸಂಭವ­ವಿದೆ ಎಂಬ ಗುಪ್ತಚರ ಮಾಹಿ­ತಿಯ ಆಧಾ­ರ­ದಲ್ಲಿ ಅವರಿಗೆ  ಕೇಂದ್ರ ಅರೆ­ಸೇನಾ ಪಡೆಯ (ಸಿಆರ್‌ಪಿಎಫ್‌) ರಕ್ಷಣೆ ಒದ­ಗಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.

Source: ಪ್ರಜಾವಾಣಿ - ರಾಷ್ಟ್ರೀಯ

.

Source: ಪ್ರಜಾವಾಣಿ - ರಾಷ್ಟ್ರೀಯ

ಬೆಂಗಳೂರು, ಆ. 26: ಹಿಮಾಲಯದ ತಪ್ಪಲಿನಲ್ಲಿ ಅನೇಕ ಅಪರೂಪದ ಸಸ್ಯ ವೈವಿಧ್ಯಗಳನ್ನು ಕಾಣಬಹುದಾಗಿದೆ. ಅದರಲ್ಲೂ ಸಮುದ್ರಮಟ್ಟದಿಂದ ಅತಿ ಎತ್ತರದ ತಂಪು ವಾತಾವರಣದಲ್ಲಿ ಬೆಳೆಯುವ ರೋಡಿಯೊಲಾ(Rhodiola) ಸಸ್ಯ ಪ್ರಬೇಧ ಮೇಲೆ ವಿಜ್ಞಾನಿಗಳಿಗೆ ಎಲ್ಲಿಲ್ಲದ ಆಸಕ್ತಿ. ರಾಮಾಯಣ ಕಾಲದ ಪೌರಾಣಿಕ ಸಂಜೀವಿನಿ ಸಸ್ಯವೇ ರೋಡಿಯೊಲಾ ಎಂದು ಸಂಶೋಧಕರು ಸಾಬೀತುಪಡಿಸಲು ಹೊರಟ್ಟಿದ್ದಾರೆ. ಸಂಜೀವಿನಿ ಸಸ್ಯಕ್ಕಾಗಿ ಅನೇಕ ಕಡೆಗಳಲ್ಲಿ ಹುಡುಕಾಟ ನಿರಂತರವಾಗಿ

Source: ಒನ್ ಇಂಡಿಯಾ - ಕನ್ನಡ

ಕುಮಟಾ, ಆ.26: ಸ್ವಸ್ತಿ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಥಾಸಂಕಲನ ಸ್ಪರ್ಧೆ 2014 ರ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಬಹುಮಾನಿತ ಕೃತಿ ಕರ್ಕಿ ಕೃಷ್ಣಮೂರ್ತಿ ಯವರ "ಮಳೆ ಮಾರುವ ಹುಡುಗ" ಪುಸ್ತಕ ಅನಾವರಣ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. 'ಮಳೆ ಮಾರುವ ಹುಡುಗ' ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ 31 ಅಗಸ್ಟ್ 2014

Source: ಒನ್ ಇಂಡಿಯಾ - ಕನ್ನಡ

ನವದೆಹಲಿ, ಆ.26: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರನ್ನು ಪಕ್ಷದ ಸಂಸದೀಯ ಮಂಡಳಿಯಿಂದ ಹೊರಹಾಕಲಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಧಿಕಾರ ಸ್ವೀಕರಿಸಿದ ಮೇಲೆ ಬಿಜೆಪಿ ತೆಗೆದುಕೊಂಡ ಪ್ರಮುಖ ನಿರ್ಧಾರ ಇದಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೂರು ಬಾರಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್

Source: ಒನ್ ಇಂಡಿಯಾ - ಕನ್ನಡ

ಬೆಂಗಳೂರು, ಆ.26 : ಸರ್ಕಾರಿ ಕೇಬಲ್‌ ಆಪರೇಟಿಂಗ್‌ ಸಂಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಮಂಗಳವಾರ ವಾರ್ತಾ ಸಚಿವ ರೋಷನ್ ಬೇಗ್ ಕೇಬಲ್ ಆಪರೇಟರ್‌ಗಳೊಂದಿಗೆ ಸಭೆ ನಡೆಸಿದ್ದು, ಅವರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ಸರ್ಕಾರ ಕೇಬಲ್ ಆಪರೇಟಿಂಗ್ ಸಂಸ್ಥೆ ಆರಂಭಿಸಿದರೆ 15 ಲಕ್ಷ ಮಂದಿ

Source: ಒನ್ ಇಂಡಿಯಾ - ಕನ್ನಡ

Pages

ಬ್ಲಾಗ್

ಓಣಂ ಹಬ್ಬದ ಅಂಗವಾಗಿ ಇತ್ತೀಚೆಗೆ ನಮ್ಮ ಶಾಲೆಯ ಗಣಿತ ಸಂಘದ ಆಶ್ರಯದಲ್ಲಿ ಗಣಿತ ಆಕೃತಿಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳು ರಚಿಸಿದ ಹೂ ರಂಗವಲ್ಲಿ...

Source: MSCHS Nirchal: MAHAJANA

ಎಸ್ ಬಿ ಜೋಗೂರ್ ಚಾರಿತ್ರಿಕ ಘಟನೆ, ವ್ಯಕ್ತಿ, ಸ್ಥಳ ಮುಂತಾದವುಗಳನ್ನು ಆಧರಿಸಿ ಚಲನಚಿತ್ರವನ್ನು ನಿರ್ಮಿಸುವುದು ಒಂದು ಸಾಹಸವೇ ಹೌದು. ಸಮಕಾಲೀನ ಸಂದರ್ಭದಲ್ಲಿ ಗತಕಾಲದ ಘಟನೆಗಳು ವಿಭಿನ್ನವಾದ ಸಾಂಸ್ಥಿಕ ಮೂಲಗಳಿಂದ ಗ್ರಹಿಸಲ್ಪಡುತ್ತವೆ ಮತ್ತು ತಮ್ಮ ತಮ್ಮ ಗ್ರಹಿಕೆಯ ನಿರೂಪಣೆಯ ಮೂಲಕವೇ ವಿವರಿಸುವ ಯತ್ನವೂ ನಡೆದಿರುತ್ತದೆ. ಹಾಗಾಗಿಯೇ ಸಾರೂಪ್ಯ ಎನ್ನಬಹುದಾದ ಕೃತಿಗಳು ಮತ್ತು ಅಲ್ಲಿಯ ವಿವರಣೆ ತೀರಾ ಅಪರೂಪ. ಪ್ರಥಮ ಜಾಗತಿಕ ಮಹಾಯುದ್ಧದ ಬಗೆಗಿನ ವಿವರಣೆಯನ್ನೇ ನೀವು ನೋಡಿ ಎಲ್ಲೂ ಕೂಡಾ ಹಾನಿಯ ವಿವರಗಳಲ್ಲಿ ಸಾರೂಪ್ಯತೆ ಇರಲಾರದು. ಭಾರತೀಯ ಚರಿತ್ರೆಕಾರನ...

Source: ಅವಧಿ

ಸಂಧ್ಯಾ ಶ್ರೀಧರ್ ಭಟ್ ಸಂಧ್ಯೆಯಂಗಳದಿ “ಏನೇ ಒಳ್ಳೆ ಕಾಲು ಸುಟ್ಟ ಬೆಕ್ಕಿನ ಥರ ಆ ಕಡೆಯಿಂದ ಈ ಕಡೆ .. ಈ ಕಡೆಯಿಂದ ಆ ಕಡೆ ಓಡಾಡ್ತಾ ಇದ್ದೀಯ ?” ಅಂತ ಅಣ್ಣ ಕೇಳಿದಾಗ ” ಕೀರ್ತಿ ಗೆ ಮದ್ವೆ ಮಾಡ್ತಾರಂತೆ ಕಣೋ ” ಅನ್ನೋ ಮಾತು ಅನಾಯಾಸವಾಗಿ ಬಾಯಿಂದ ಹೊರಬಂದಿತ್ತು . “ಅಯ್ಯೋ ಹಳ್ಳಕ್ಕೆ ಬೀಳೋನು ಅವನು.. ಹುಡುಕೋ ಕಷ್ಟ ಅವನ ಮನೆಯವರಿಗೆ .. ನಿಂದೇನು ಗಂಟು ಹೋಗೋದು ?” ಎಂದು ಅಣ್ಣ ಹುಬ್ಬು ಹಾರಿಸಿದಾಗ ...Read the Rest

Source: ಅವಧಿ

ಮಧು ಹೀರುವ ಮಾತು ರಮೇಶ ಗಬ್ಬೂರ್ ಜಾರು ಬಂಡೆಯಂತಹ ಮೈ ಆರಿಸಿಕೊಳುವ ನಡುವ ನೋಡಿ ನಿನ ಯೌವನ ಮರೆಯಬೇಡ ಹತ್ತುವಿಯಾದರೆ ಎತ್ತರದ ನಡುವ ಮುಟ್ಟಲು ಮೈ ಜಾರಬಹುದು ನಿನ ಯೌವನ ಮರೆಯಬೇಡ   ಮುಗಿಲಿಗೆ ಮುಖಮಾಡಿ ಸೆರಗ ಸುತ್ತಲೂ ಹಾರಿಸಿ ನಿಂತಿರುವೆ ಮೈಯಾರಿಸಿಕೊಳುತ ಹತ್ತು ಬಾ ರಸಿಕನೆ ಎತ್ತರಕೆ ಸೆರಗಿನಡಿ ಸೆರೆಯಿದೆ ಹೀರುವುದ ಮರೆಯಬೇಡ   ನೀನೇನು ಹೊಸಬನಲ್ಲ ಹತ್ತಲು ಮತ್ತೇರುವ ಮಧು ಕುಣಿದು ದಣಿಯಲು ಮೆತ್ತಗೆ ಹಿಡಿಯಬೇಡ ಬಳುಕಿ ತಬ್ಬಿಕೋ ಮುತ್ತಿನ ಲೋಕವಿದೆ ಮೇಲೇರಲು ಮರೆಯಬೇಡ ...Read the Rest

Source: ಅವಧಿ

  - ನಾಗೇಶ್ ಹೆಗ್ಡೆ ‘ದೈವಿಕ ಕೃಷಿ’ ಗೊತ್ತಾ? ಗಣೇಶ ವಿಸಜ೯ನೆ ಮುಗಿದ ನಂತರ ಬೆಂಗಳೂರಿನ ಸಹಸ್ರಾರು ಬಂಗಾಳಿಗಳು ನಮ್ಮೂರ ಕೆರೆಗೆ ಬಂದು ವಿಶ್ವಕಮ೯ನ ಸುಂದರ ವಿಗ್ರಹಗಳನ್ನು ವಿಸಜಿ೯ಸಿ ಹೋಗುತ್ತಾರೆ. ಮೂರು ವಾರಗಳ ನಂತರ ನಾನು ಮತ್ತು ಪತ್ನಿ ರೇಖಾ ಕೆರೆಗೆ ಇಳಿದು ಬಣ್ಣರಹಿತ ವಿಗ್ರಹಗಳನ್ನು ಮೇಲೆತ್ತಿ ಒಣಗಿಸುತ್ತೇವೆ. ಈಗ ಅವು ಬರೀ ಹುಲ್ಲಿನ ಮೂತಿ೯ಗಳು. ಹಿತ್ತಿಲಿಗೆ ಸಾಗಿಸಿ ತಂದು ಎರೆಗೊಬ್ಬರದ ತೊಟ್ಟಿಯಲ್ಲಿ ಹಾಕಿ ಕಾಯಕಲ್ಪ ಮಾಡಿಸುತ್ತೇವೆ. ನಮಗೆ ಉತ್ಕೃಷ್ಟ ಪುಡಿಗೊಬ್ಬರ ಸಿಗುತ್ತದೆ. ಮುಂದಿನ ಕತೆ ಗೊತ್ತೇ...

Source: ಅವಧಿ

ಮದನ್ ಗೋಪಾಲ್, ಐ ಎ ಎಸ್ ಬರೆದ ’ಕಾಂಚನ್‌ಜುಂಗಾ ಡೈರಿ’ ಪುಸ್ತಕ ಪರಿಚಯ ಮಾಡಿದ್ದಾರೆ ಫಣಿಕುಮಾರ್.ಟಿ.ಎಸ್ ಅರಿವಿನ ಯಾತ್ರೆಯ ಅನುಭವ ಕಥನ ಫಣಿಕುಮಾರ್ ಟಿ ಎಸ್ ಎಫ್.ಎಸ್.ಸ್ಮಿತ್, ಅವನ ದಿ ಕಾಂಚನ್ಜುಂಗಾ ಅಡ್ವೆಂಚರ್ ಪುಸ್ತಕದಲ್ಲಿ ಹಿಮಶಿಖರ ಮೆಟ್ಟುವ ಸಾಹಸದ ತನ್ನ ಮೂಲ ಉದ್ದೇಶವನ್ನು ಒಂದು ಕಡೆ ವಿವರಿಸುತ್ತಾನೆ. ವಿಜ್ಞಾನಕ್ಕೆ ಉತ್ತರ ದಕ್ಕಿಸುವುದಷ್ಟೇ ನನ್ನ ಆರೋಹಣದ ಗಮ್ಯ ಅಲ್ಲ. ಬದಲಿಗೆ ಅದು ಪದಕ್ಕೆ ದಕ್ಕದ ಸಾಹಸ ಎನ್ನುವ; ಹಮ್ಮಿನ ಅನುಭೂತಿ ಎನ್ನುತ್ತಾನೆ. 1930ನೇ ಇಸವಿಯಲ್ಲಿ ಹೊರಬಂದ ಅವನ ಆ ಅನುಭವ...

Source: ಅವಧಿ

- ಮಂಜು ಹಿಚ್ಕಡ್ ಗಂಡ ಸತ್ತು ಶ್ಮಸಾನ ಸೇರಿದಾಗ ಸುರೇಖಾಗೆ ಇನ್ನೂ ೨೮ರ ಹರೆಯ. ಗಂಡ ಸಾಯುವಾಗ ಬಿಟ್ಟು ಹೋದದ್ದೆಂದರೆ ವಾಸಿಸಲು ಎರಡು ಪಕ್ಕೆಯ ಮನೆ, ಮನೆಯ ಸುತ್ತಲಿನ ನಾಲ್ಕು ಗುಂಟೆಯ ಜಾಗ ಹಾಗೂ ಆರು ವರ್ಷದ ಮಗ ಸಂದೇಶ. ಗಂಡ ಸತ್ತ ಮೇಲೆ ಆತ ಯಾರದೋ ಒತ್ತಾಯಕ್ಕೆ ಮಾಡಿದ ಇನ್ಸೂರನ್ಸ ಹಾಗೂ ಅವನ ಭವಿಷ್ಯನಿಧಿಯಿಂದ ಸ್ವಲ್ಪ ಹಣ ಸೇರಿ ಒಂದೂವರೆ ಲಕ್ಷ ಬಂದಿತ್ತಾದರೂ, ಅದರಲ್ಲಿ ಕೇವಲ ೫೦ ಸಾವಿರದಷ್ಟನ್ನು ತುರ್ತು ಕರ್ಚಿಗೆ ಇಟ್ಟುಕೊಂಡು ಉಳಿದ ಒಂದು ಲಕ್ಷವನ್ನು...

Source: ಅವಧಿ
Source: ಅವಧಿ

ಬುದ್ಧಿಜೀವಿ ವೇದಿಕೆಯಲ್ಲಿ
ನಿಂತು ಹೇಳುತ್ತಿದ್ದ
ಯಾರ ಸಲಹೆಗೂ ಕಿವಿಕೊಡಬೇಡಿರೆಂದು
ಅಲ್ಲೇ ಕೆಳಗೆ ಕೂತಿದ್ದ
ಸಾಮಾನ್ಯಜೀವಿ ಗೊಣಗುತ್ತಿದ್ದ
ಮೊದಲು ನೀನು ಸಲಹೆ ಕೊಡುವುದು ನಿಲ್ಲಿಸೆಂದು
-ಎಸ್. ಕೆ

...
Source: Sampada

ಈ ಗಣೇಶನ ಕಷ್ಟ ನಿಮಗೇನು ಗೊತ್ತು

            ನಾನು ನಿಮ್ಮಂಥೆ ಯಾರ ತಂದೆ ತಾಯಿಯ ಹೊಟ್ಟೆಯಲಿ ಹುಟ್ಟಿಲ್ಲ. ಹುಟ್ಟದಲೇ ಬೆಳೆದವ ಮಾತ್ರ ನಾನು. ನಿಮ್ಮಂಥೆ ಮಕ್ಕಳಾಟ ಮಕ್ಕಳು ಆಡಿ ಬೆಳೆದಂತೆ ನಾನಲ್ಲ. ನನಗೆ ಸಂಕಟ ಸಂಗಡ ಗೆಳಯರು, ಸ್ನೇಹಿತರು ಇಲ್ಲವಲ್ಲ. ನನ್ನ ವಿಕಾರವ ದೇಹ ಆಕಾರ ನೋಡಿದರೇ ಹೆದರುವವರು ಹುಡುಗರೆಲ್ಲಾ. ತಾಯಿ ಒತ್ತಡಕ್ಕೆ ದೇವತೆಗಳು ಮಡಿದು ನಾನು ದೇವಗಣಗಳ ಈಶನಾದರೂ ಏನೂ ಪ್ರಯೋಜನವಿಲ್ಲ. ನಿಜದಲ್ಲಿ ನಿಜದಮಾತಿಲ್ಲಿ ನೀವು ನೋಡಿದರೂ ಓಡಿ ಹೋಗುವುದು ದಿಟವಿಲ್ಲಿ.
            ನಾನು ಅರ್ಧ ಪ್ರಾಣಿ ಆನೆತಲೆ ಅರ್ಧ ಮನುಷ್ಯನಾಗಿರುವುದರಿಂದಲೀ ಬುದ್ಧಿಯಿದೆ ವಿದ್ಯಾಗಣಪನೆಂದ ಮಾತ್ರಕ್ಕೆ ಅರಿಯುವ...

Source: Sampada

ಈ ಗಣೇಶನ ಕಷ್ಟ ನಿಮಗೇನು ಗೊತ್ತು

            ನಾನು ನಿಮ್ಮಂಥೆ ಯಾರ ತಂದೆ ತಾಯಿಯ ಹೊಟ್ಟೆಯಲಿ ಹುಟ್ಟಿಲ್ಲ. ಹುಟ್ಟದಲೇ ಬೆಳೆದವ ಮಾತ್ರ ನಾನು. ನಿಮ್ಮಂಥೆ ಮಕ್ಕಳಾಟ ಮಕ್ಕಳು ಆಡಿ ಬೆಳೆದಂತೆ ನಾನಲ್ಲ. ನನಗೆ ಸಂಕಟ ಸಂಗಡ ಗೆಳಯರು, ಸ್ನೇಹಿತರು ಇಲ್ಲವಲ್ಲ. ನನ್ನ ವಿಕಾರವ ದೇಹ ಆಕಾರ ನೋಡಿದರೇ ಹೆದರುವವರು ಹುಡುಗರೆಲ್ಲಾ. ತಾಯಿ ಒತ್ತಡಕ್ಕೆ ದೇವತೆಗಳು ಮಡಿದು ನಾನು ದೇವಗಣಗಳ ಈಶನಾದರೂ ಏನೂ ಪ್ರಯೋಜನವಿಲ್ಲ. ನಿಜದಲ್ಲಿ ನಿಜದಮಾತಿಲ್ಲಿ ನೀವು ನೋಡಿದರೂ ಓಡಿ ಹೋಗುವುದು ದಿಟವಿಲ್ಲಿ.
            ನಾನು ಅರ್ಧ ಪ್ರಾಣಿ ಆನೆತಲೆ ಅರ್ಧ ಮನುಷ್ಯನಾಗಿರುವುದರಿಂದಲೀ ಬುದ್ಧಿಯಿದೆ ವಿದ್ಯಾಗಣಪನೆಂದ ಮಾತ್ರಕ್ಕೆ ಅರಿಯುವ...

Source: Sampada

ಈ ಗಣೇಶನ ಕಷ್ಟ ನಿಮಗೇನು ಗೊತ್ತು

            ನಾನು ನಿಮ್ಮಂಥೆ ಯಾರ ತಂದೆ ತಾಯಿಯ ಹೊಟ್ಟೆಯಲಿ ಹುಟ್ಟಿಲ್ಲ. ಹುಟ್ಟದಲೇ ಬೆಳೆದವ ಮಾತ್ರ ನಾನು. ನಿಮ್ಮಂಥೆ ಮಕ್ಕಳಾಟ ಮಕ್ಕಳು ಆಡಿ ಬೆಳೆದಂತೆ ನಾನಲ್ಲ. ನನಗೆ ಸಂಕಟ ಸಂಗಡ ಗೆಳಯರು, ಸ್ನೇಹಿತರು ಇಲ್ಲವಲ್ಲ. ನನ್ನ ವಿಕಾರವ ದೇಹ ಆಕಾರ ನೋಡಿದರೇ ಹೆದರುವವರು ಹುಡುಗರೆಲ್ಲಾ. ತಾಯಿ ಒತ್ತಡಕ್ಕೆ ದೇವತೆಗಳು ಮಡಿದು ನಾನು ದೇವಗಣಗಳ ಈಶನಾದರೂ ಏನೂ ಪ್ರಯೋಜನವಿಲ್ಲ. ನಿಜದಲ್ಲಿ ನಿಜದಮಾತಿಲ್ಲಿ ನೀವು ನೋಡಿದರೂ ಓಡಿ ಹೋಗುವುದು ದಿಟವಿಲ್ಲಿ.
            ನಾನು ಅರ್ಧ ಪ್ರಾಣಿ ಆನೆತಲೆ ಅರ್ಧ ಮನುಷ್ಯನಾಗಿರುವುದರಿಂದಲೀ ಬುದ್ಧಿಯಿದೆ ವಿದ್ಯಾಗಣಪನೆಂದ ಮಾತ್ರಕ್ಕೆ ಅರಿಯುವ...

Source: Sampada

ಒಬ್ಬ ಬಡ ಹುಡುಗ ಒಂದು ಶ್ರೀಮಂತ ಹುಡುಗಿಯನ್ನ ಪ್ರೀತಿಸುತ್ತಿದ್ದ. ಒಂದು ದಿನ ಹುಡುಗ ತನ್ನ ಪ್ರೇಮ ನಿವೇದನೆಯನ್ನು ಪ್ರಸ್ತಾಪಿಸಲು., ಹುಡುಗಿ ಈ ರೀತಿ ಕೇಳಿದಳು "ನಿನ್ನ ಮಾಸಿಕ ವೇತನ ನನ್ನ ದಿನದ ವೆಚ್ಚಕ್ಕೆ ಸಮಾ. ನಾನು ನಿನ್ನ ಪ್ರೀತಿಸಿ ಏನು ಮಾಡಬೇಕು? ನೀನು ಅದರ ಬಗ್ಗೆ ಹೇಗಾದರೂ ಯೋಚಿಸಿದೆ?? ನಾನು ನಿನ್ನ ಎಂದಿಗೂ ಲವ್ ಮಾಡುವುದಿಲ್ಲ. ಆದ್ದರಿಂದ ನನ್ನ ಮರೆತು ನಿನಗೆ ಸರಿಸಮನಾದ ಹುಡುಗಿಯ ಜೊತೆ ಮದುವೆಯಾಗು..." ಎಂದು ಹೇಳಿ ಹೊರಟುಹೋದಳು...

ಆದರೆ ಆ ಹುಡುಗ ಅಷ್ಟು ಸುಲಭವಾಗಿ ತನ್ನ ಪ್ರೀತಿಯನ್ನು ಮರೆಯಲು ಸಾಧ್ಯವಿರಲಿಲ್ಲ...!!

10 ವರ್ಷಗಳ ನಂತರ.

ಒಂದು ದಿನ ಶಾಪಿಂಗ್ ಸೆಂಟರ್ ರಲ್ಲಿ ಅವರಿಬ್ಬರ ಮುಖಾಮುಖಿಯಾಯಿತು. "ಹೇ, ನಿನ್ನ ಮದುವೆ ಆಯ್ತಾ?, ಬೈ ದ ವೇ  ನನ್ನ ಗಂಡನ ತಿಂಗಳ ಸಂಬಳ 50,000...

Source: Sampadaಇತ್ತೀಚೆಗೆ ಭೈರಪ್ಪನವರ 'ಯಾನ' ಬಿಡುಗಡೆಯಾಯಿತಷ್ಟೇ. ಅವರ ಕಾದಂಬರಿಗಳನ್ನು ನಿಯಮಿತವಾಗಿ ಓದುವ ಒಂದು ವರ್ಗವಂತೂ ಇದ್ದೇ ಇದೆ. ಟೀಕಿಸುವ ಸಲುವಾಗಿಯೇ ಓದುವ ಪ್ರಗತಿಪರರ ಮತ್ತೊಂದು ವರ್ಗವೂ ಇದೆ. ಈ ಕಾದಂಬರಿಯ ವಿಷಯ ಹಿಂದುತ್ವ ಅಥವಾ ಧಾರ್ಮಿಕತೆಗೆ ಸಂಬಂಧ ಪಡದಿದ್ದುದು ಪ್ರಗತಿಪರರಿಗೆ ನಿರಾಸೆ ಮೂಡಿಸಿತೇನೋ. ಅಂಥಾ ದೊಡ್ದ ಮಟ್ಟದ ಚರ್ಚೆ, ಟೀಕೆಗಳಾಗಲಿಲ್ಲ. ಆದರೆ ಫೇಸ್‍...

Source: ಮಾತು-ಮಂಥನ-ಮತಾಪು

ಬೇರೆ ಗ್ರಹದ ಜೀವಿಗಳು ಭೂಮಿಯನ್ನು ತಲುಪುವುದು ಇಂದಿಗೂ ಬಿಡಿಸಲಾಗದ ರಹಸ್ಯವಾಗಿದೆ. ಅಷ್ಟು ದೂರದಿಂದ ಬರಲು ಅಗಾಧವಾದ ಇಂದನ ಬೇಕಾಗುತ್ತದೆ. ಹಾಗೂ ಅದಕ್ಕಿಂತಲೂ ಮಿಗಿಲಾದ ವೇಗವೂ ಬೇಕು.
ಅವರು ಎಲ್ಲಾ ಗ್ರಹಗಳಿಗೂ ಇರುವ ಪ್ರತ್ಯೇಕ ಗುರುತ್ವ ಶಕ್ತಿಯನ್ನೋ ಅಥವಾ ಕಾಂತ ಶಕ್ತಿಯನ್ನೋ ಬಳಸಿ ಆ ಗ್ರಹದ ಸಮೀಪ ಹೋಗುವ...
Source: ಪಿಸುಮಾತು ®

ಗಣೇಶನ ಹಬ್ಬ ಬರುತ್ತಿದೆ, ಆಸ್ತಿಕರು ಹಬ್ಬದ ತಯಾರಿಯಲ್ಲಿದ್ದರೆ,ಇನ್ನೊಂದು ಗುಂಪು ಅಂದರೆ ಸ್ವಘೋಷಿತ ನ್ಯಾಯಧೀಶರುಗಳಾದ ಮಾಧ್ಯಮದವರು,ಕೆಲ ಬುರ್ನಾಸು ಜೀವಿಗಳು ನಮಗೆ ಹಬ್ಬ ಹೇಗೆ ಆಚರಿಸಬೇಕೆಂದು ಕಲಿಸಿಕೊಡುವ ಸಿದ್ಧತೆಯಲ್ಲಿದ್ದಾರೆ.ಇನ್ನು ಕೆಲವು ವಿಚಾರವಾದಿಗಳು ಅಂತ ಕರೆಸಿಕೊಳ್ಳುವವರು ಗಣೇಶ ದೇವತೆಯೇ ಅಲ್ಲ ಅಂತ ವಾದಿಸಿ ನಮ್ಮವರ ನಂಬಿಕೆಗೆ ಘಾಸಿ ಮಾಡಲು ನಿದ್ದೆ ಬಿಟ್ಟು ಕುಳಿತಿದ್ದಾರೆ. ಬೇರೆ ಧರ್ಮದವರು ಹಬ್ಬ ಆಚರಿಸುವಾಗ ನೆನಪಾಗದ ಪರಿಸರ ಕಾಳಜಿ ಇವರಿಗೆ ಧುತ್ತೆಂದು ಇನ್ನೇನು ನೆನಪಾಗಲಿದೆ.ವೈಚಾರಿಕತೆ ಎಂದರೆ ಕೇವಲ ಹಿಂದೂಧರ್ಮವನ್ನು ಹೀಯಾಳಿಸುವುದು ಎಂದು ತಿಳಿದವರು ಇವರು.
ಹಿಂದೆ ತಿಲಕರು ಜನರಲ್ಲಿ ರಾಷ್ಟ್ರಭಕ್ತಿ ಜಾಗ್ರತಗೊಳಿಸಲು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಪ್ರಾರಂಭಿಸಿದರು.ಒಂದು ಪವಿತ್ರ...

Source: Sampada

ಬೆಳಕಿನ ಚಿತ್ತಾರದಿಂದ ಪ್ರಸಿದ್ಧಿ ಪಡೆದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಗಡಿಕೈನ ವಿನಯ ಹೆಗಡೆ ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಬೆಳಕಿನ ಚಿತ್ತಾರ ಕಲಾ ಪ್ರದರ್ಶನ ನೀಡಲು ತೆರಳಲಿದ್ದಾರೆ. ಹಾಲಿವುಡ್ನ ಪ್ರಸಿದ್ಧ ಸಂಸ್ಥೆ ಡ್ರೀಮ್ ವರ್ಕ್ಸ್ಕೂಡಾ ಹೆಗಡೆಯವರ ಎರಡು ಪ್ರದರ್ಶನ ಆಯೋಜಿಸಿದೆ. ಡ್ರೀಮ್...

Source: ಹೊನ್ನೆವಾಣಿ

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ ಅಪ್ಸರಕೊಂಡದ ಬಳಿ ಸಮುದ್ರ ಸೇರುವ ಶರಾವತಿ ನದಿ, ತಾನು ಹರಿದು ಬರುವ 250 ಕಿಮೀ ಮಾರ್ಗದಲ್ಲಿ ಹಲವು ಅಪರೂಪದ ದಾಖಲೆಗಳನ್ನು ಮಾಡಿದೆ.
ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಕಟ್ಟಿದ ಆಣೆಕಟ್ಟು ರಾಜ್ಯದಲ್ಲಿ...

Source: ಹೊನ್ನೆವಾಣಿ

ಉತ್ತರ ಕನ್ನಡ ಜಿಲ್ಲೆ ಕುಮಟಾ ಸಮೀಪದ ದೇವಿಮನೆ ಘಟ್ಟದಲ್ಲಿ ರಸ್ತೆಯಂಚಿನ ಮರವೊಂದರಲ್ಲಿ ಕಂಡುಬಂದ ಒಂದಡಿಗೂ ಹೆಚ್ಚು ಅಗಲ, 7 ಇಂಚು ಉದ್ದದ ಪತಂಗ.

ಈ ಲೇಖನ ಓದಲು ಬಂದ ನಿಮಗೆ ಸ್ವಾಗತ.
Source: ಹೊನ್ನೆವಾಣಿ

 

ಯೋ ವೈ ತಾಂ ಬ್ರಹ್ಮಣೋ ವೇದಾಮೃತೇನಾವೃತಾಂ ಪುರಂ|

ತಸ್ಮೈ ಬ್ರಹ್ಮ ಚ ಬ್ರಹ್ಮಾಶ್ಚ ಚಕ್ಷುಃ ಪ್ರಾಣಂ ಪ್ರಜಾಂ ದದುಃ ||

[ಅಥರ್ವ ೧೦.೨.೨೯]

ಅನ್ವಯ :

ಯಃ = ಯಾವನು

ಅಮೃತೇನ ಆವೃತಾಂ = ಅಮರನಾದ ಭಗವಂತನಿಂದ ಆವೃತವಾಗಿರುವ

ಬ್ರಹ್ಮಣಃ ತಾಂ ಪುರಂ = ಆ ಭಗವಂತನ ಪುರವಾದ ಈ ದೇಹವನ್ನು

ವೈ ವೇದ = ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ

ತಸ್ಮೈ = ಅವನಿಗೆ

ಬ್ರಹ್ಮ ಚ = ಪರಮಾತ್ಮನು ಮತ್ತು

ಬ್ರಹ್ಮಾಶ್ಚ = ಪರಮಾತ್ಮನ ಮಕ್ಕಳಾದ ಜೀವಾತ್ಮರು

ಚಕ್ಷು = ಸತ್ಯ ದರ್ಶನ ಶಕ್ತಿಯನ್ನೂ

ಪ್ರಾಣಂ = ಜೀವನ ಶಕ್ತಿಯನ್ನೂ

ಪ್ರಜಾಂ = ಸತ್ ಸಂತತಿಯನ್ನೂ

ದದುಃ = ನೀಡುತ್ತಾರೆ

ಅರ್ಥ :

ಯಾವನು ಅಮರನಾದ...

Source: Sampada

Pages